Sachin Tendulkar- ತಿಂದ್ಮೇಲೆ ಪ್ಯಾಂಟ್ ಟೈಟ್; ಪತ್ನಿ ಜನ್ಮದಿನಕ್ಕೆ ಸಚಿನ್​ಗೆ ಸರಸ್ ಊಟ

Shree Thaker Bhojanalay in Mumbai: ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಅವರ ಹುಟ್ಟುಹಬ್ಬ ಆಚರಿಸಲು ಕುಟುಂಬ ಸಮೇತರಾಗಿ ಗುಜರಾತಿ ಶೈಲಿ ರೆಸ್ಟೋರೆಂಟ್​ಗೆ ಹೋಗಿ ಊಟ ಸವಿದು ಬಂದಿದ್ದಾರೆ.

ಸಚಿನ್ ಮತ್ತು ಪತ್ನಿ ಡಾ. ಅಂಜಲಿ

ಸಚಿನ್ ಮತ್ತು ಪತ್ನಿ ಡಾ. ಅಂಜಲಿ

  • Share this:
    ಮುಂಬೈ: ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಕ್ರಿಕೆಟ್ ಆಟ ಬಲ್ಲವರೇ ಬಲ್ಲರು ಆ ಬ್ಯಾಟಿಂಗ್ ಸೊಗಸು. ಹಾಗೆಯೇ ಈ ಮಾಸ್ಟರ್ ಬ್ಲಾಸ್ಟರ್ ಪಕ್ಕಾ ಭೋಜನ ಪ್ರಿಯ. ಕ್ರಿಕೆಟ್ ಬಗ್ಗೆ ಎಷ್ಟು ಮಾತಾಡ್ತಾರೋ ಊಟದ ಬಗ್ಗೆಯೂ ಇವರ ಮಾತು ಮುಗಿಯೋದೇ ಇಲ್ಲ. ಇವರ ಪತ್ನಿ ಡಾ. ಅಂಜಲಿ ತೆಂಡೂಲ್ಕರ್ ಅವರ ಜನ್ಮದಿನ (Sachin Tendulkar’s wife Dr. Anjali birthday) ಮೊನ್ನೆ (ನ. 10) ಬುಧವಾರ ಇತ್ತು. ಈ ವಿಶೇಷ ದಿನಕ್ಕೆ ಸಚಿನ್ ತೆಂಡೂಲ್ಕರ್ ತಮ್ಮ ಫ್ಯಾಮಿಲಿ ಜೊತೆ ಮುಂಬೈನಲ್ಲಿರುವ ಪ್ರಸಿದ್ಧ ಗುಜರಾತಿ ಶೈಲಿಯ ರೆಸ್ಟೋರೆಂಟ್​ಗೆ (Gujrati Style Restaurant in Mumbai) ಹೋಗಿ ಊಟ ಸವಿದು ಬಂದಿದ್ದಾರೆ. ಮಗಳು ಸಾರಾ (Sara Tendulkar) ಕೂಡ ಇದ್ಧಾರೆ. ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಸಚಿನ್ ಫೋಟೋ ಶೇರ್ ಮಾಡಿ ಅದಕ್ಕೆ ಕಾಮೆಂಟರಿ ಕೂಡ ಕೊಟ್ಟಿದ್ದಾರೆ.

    “ಅಂಜಲಿಯ ಹುಟ್ಟುಹಬ್ಬ ಆಚರಿಸಲು ಶ್ರೀ ಠಾಕರ್ ಭೋಜನಾಲಯ್ ನಲ್ಲಿ (Shree Thaker Bhojanalay since 1945) ಸರಸ್ (Saras) ಗುಜರಾತಿ ಊಟ ಸವಿದೆವು. ಆಕೆಯ ಗುಜ್ಜು (ಗುಜರಾತಿ) ಜೀನ್ಸ್ (Genes) ಬಲವಾಗಿದೆ, ನಮ್ಮ ಜೀನ್ಸ್ (Jeans Clothes) ಬಟನ್​ಗಳು ಈ ಊಟ ತಿಂದ್ಮೇಲೆ ದುರ್ಬಲಗೊಂಡಿವೆ.! ಈ ರೆಸ್ಟೋರೆಂಟ್ 1945ರಿಂದಲೂ ನಡೆಯುತ್ತಿರುವ ವಿಚಾರ ತಿಳಿದು ಅದ್ಭುತ ಎನಿಸಿತು” ಎಂದು Instagram ನಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

    Sachin Tendulkar's family eating out at a restaurant in Mumbai
    ಸಚಿನ್ ತೆಂಡೂಲ್ಕರ್ ಮತ್ತವರ ಕುಟುಂಬದವರು ರೆಸ್ಟೋರೆಂಟ್​ನಲ್ಲಿ ಊಟ ಮಾಡುತ್ತಿರುವುದು


    ಇಲ್ಲಿ ಸರಸ್ ಎಂಬುದು ಗುಜರಾತಿ ಪದವಾಗಿದ್ದು, ಅದಕ್ಕೆ ರುಚಿಕರ ಎಂಬ ಅರ್ಥ ಇದೆ. ಶ್ರೀ ಠಾಕರ್ ಭೋಜನಾಲಯ್ (Shree Thaker Bhojanalay) ಮುಂಬೈನ ಪ್ರಮುಖ ರೆಸ್ಟೋರೆಂಟ್​ಗಳಲ್ಲಿ ಒಂದು. ಕಲಬಾದೇವಿ ಪ್ರದೇಶ ಫಾನಸವಾಡಿ ಎಂಬಲ್ಲಿ 1945ರಿಂದಲೂ ಇರುವ ಈ ಹೋಟೆಲ್​ನಲ್ಲಿ ಪಕ್ಕಾ ಗುಜರಾತಿ ಶೈಲಿಯ ಆಹಾರ ಸಿಗುತ್ತದೆ.

    ಸಚಿನ್ ತೆಂಡೂಲ್ಕರ್ ಅವರ ಪತ್ನಿ 54 ವರ್ಷದ ಡಾ. ಅಂಜಲಿ ಅವರು ಗುಜರಾತಿ ಮೂಲದವರಾದ ಹಿನ್ನೆಲೆಯಲ್ಲಿ ಈ ಗುಜರಾತಿ ಶೈಲಿಯ ರೆಸ್ಟೋರೆಂಟ್​ನಲ್ಲಿ ಸಚಿನ್ ತನ್ನ ಕುಟುಂಬ ಸಮೇತ ಭೇಟಿ ಕೊಟ್ಟು ಭೋಜನ ಉಂಡು ಸವಿದಿದ್ದಾರೆ. ಸಚಿನ್ ಮತ್ತು ಅಂಜಲಿಯ ಕೆಲ ಆಪ್ತ ಸ್ನೇಹಿತರೂ ಇವರ ಜೊತೆ ಇದ್ದರು.



    ಈ ರೆಸ್ಟೋರೆಂಟ್ ಅನ್​ಲಿಮಿಟೆಡ್ ಮೀಲ್ಸ್ ನೀಡುತ್ತದೆ. ಸಚಿನ್ ತೆಂಡೂಲ್ಕರ್ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಒಂದು ತಟ್ಟೆಯಲ್ಲಿ 14 ವಿಧದ ಆಹಾರಗಳನ್ನ ಕಾಣಬಹುದು.

    ಇದನ್ನೂ ಓದಿ: Robin Uthappa birthday- ರಾಬಿನ್ ಉತ್ತಪ್ಪಗೆ ವಾಕಿಂಗ್ ಅಸಾಸಿನ್ ಹೆಸರು ಯಾಕೆ? ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು

    ಸಚಿನ್ ಅವರ ಈ ಪೋಸ್ಟ್​ಗೆ ಬಹಳಷ್ಟು ಕಾಮೆಂಟ್ಸ್ ಕೂಡ ಬಂದಿದೆ. ತಾನು ಆಗಾಗ್ಗೆ ಈ ಹೋಟೆಲ್​ಗೆ ಹೋಗಿ ಊಟ ಸವಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ದೇವರು ಗುಜ್ಜು ಊಟ ತಿಂದ ಮೇಲೆ ಟ್ವಿಟ್ಟರ್​ನಲ್ಲಿ ಯುದ್ಧ ನಿಂತು ಹೋಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿರುವುದು ಆಸಕ್ತಿ ಹುಟ್ಟಿಸಿದೆ. ಯಾಕೆಂದರೆ ಮಹಾರಾಷ್ಟ್ರದಲ್ಲಿರುವ ಗುಜರಾತಿಗಳನ್ನ ಕಂಡರೆ ಸ್ಥಳೀಯರಿಗೆ ಒಂಥರಾ ಸಿಟ್ಟು ಎಂಬ ಭಾವನೆ ಟ್ವಿಟ್ಟರ್​ಗಳಲ್ಲಿ ನಡೆಯುವ ಸಂವಾದಗಳಿಂದ ಗೊತ್ತಾಗುತ್ತದೆ. ಈಗ ಕ್ರಿಕೆಟ್ ದೇವರು ಗುಜರಾತೀ ಹೋಟೆಲ್​ನಲ್ಲಿ ಊಟ ಮಾಡಿ ಈ ಸೋಷಿಯಲ್ ಮೀಡಿಯಾ ಜಟಾಪಟಿಗೆ ತೆರೆ ಎಳೆದಿದ್ದಾರೆಂಬುದು ಇವರ ಅನಿಸಿಕೆ ಇದ್ದಂತಿದೆ.

    ಸಚಿನ್ ತೆಂಡೂಲ್ಕರ್ ಭೋಜನಪ್ರಿಯ. ಒಳ್ಳೊಳ್ಳೆಯ ಊಟ ಸವಿಯಲು ಇಷ್ಟಪಡುತ್ತಾರೆ. ಅವರು ಅಡುಗೆ ವಿದ್ಯೆಯನ್ನೂ ಬಲ್ಲರು. ತಾವು ತಿಂಡಿ ತಯಾರಿಸುತ್ತಿರುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅದಕ್ಕೆ ಸಖತ್ ಕಾಮೆಂಟರಿ ಕೂಡ ಕೊಡುತ್ತಾರೆ.
    Published by:Vijayasarthy SN
    First published: