• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Sachin Tendulkar - ಕೊರೋನಾ ಸೋಂಕು ತಗುಲಿ ವಾರದ ಬಳಿಕ ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

Sachin Tendulkar - ಕೊರೋನಾ ಸೋಂಕು ತಗುಲಿ ವಾರದ ಬಳಿಕ ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನಲ್ಲಿ ಮಿಂಚಿದ ಸಚಿನ್ ತೆಂಡೂಲ್ಕರ್ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಸೋಂಕು ದೃಢಪಟ್ಟು ಒಂದು ವಾರದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. 2011ರ ವಿಶ್ವಕಪ್ ಗೆದ್ದ ದಶಮಾನೋತ್ಸವದ ದಿನದಂದೇ ಅವರು ಆಸ್ಪತ್ರೆವಾಸ ಸೇರಿದ್ದಾರೆ.

 • Share this:

  ಬೆಂಗಳೂರು(ಏ. 02): ಕೋವಿಡ್ ಪಾಸಿಟಿವ್ ಬಂದು ಒಂದು ವಾರದ ಬಳಿಕ ಸಚಿನ್ ತೆಂಡೂಲ್ಕರ್ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಅವರೇ ಖುದ್ದಾಗಿ ಮಾಹಿತಿ ನೀಡಿದ್ದು, ವೈದ್ಯಕೀಯ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಕೆಲ ದಿನಗಳಲ್ಲೇ ಬಿಡುಗಡೆಯಾಗಿ ಹೊರಬರುವ ಆಶಯದಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇವತ್ತು 2011ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಗೆದ್ದ ಐತಿಹಾಸಿಕ ದಿನ ದಶಮಾನೋತ್ಸವವಾಗಿದ್ದು, ಸಚಿನ್ ತೆಂಡೂಲ್ಕರ್ ತಮ್ಮ ಅಭಿಮಾನಿಗಳು ಹಾಗೂ ಸಹ ಆಟಗಾರರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.


  ಕಳೆದ ವಾರ ಸಚಿನ್ ತೆಂಡೂಲ್ಕರ್ ತಮಗೆ ಕೋವಿಡ್ ಸೋಂಕು ತಗುಲಿರುವ ವಿಚಾರವನ್ನು ಹಂಚಿಕೊಂಡಿದ್ದರು. ನಂತರ ಅವರು ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ವೈದ್ಯಕೀಯ ಸಲಹೆ ಮೇರೆಗೆ ಮುನ್ನೆಚ್ಚರಿಕೆಯಾಗಿ ತಾನು ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ತಿಳಿಸಿದ್ಧಾರೆ.  ಇದನ್ನೂ ಓದಿ: ಐಪಿಎಲ್‌ ಬಗ್ಗೆ 7 ವರ್ಷಗಳ ಹಿಂದಿನ ಧೋನಿ ಟ್ವೀಟ್‌ ವೈರಲ್; ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..


  ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಅವರು ನಿವೃತ್ತ ಆಟಗಾರರನ್ನೊಳಗೊಂಡ ರೋಡ್ ಸೇಪ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಸಚಿನ್ ನೇತೃತ್ವದ ತಂಡವೇ ಚಾಂಪಿಯನ್ ಆಗಿದೆ. ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಸ್ ಬದ್ರಿನಾಥ್, ಇರ್ಫಾನ್ ಪಠಾನ್ ಮತ್ತು ಯೂಸುಫ್ ಪಠಾಣ್ ಅವರಿಗೂ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ವಿನೋದದ ವಿಚಾರವೆಂದರೆ, ಈ ಟೂರ್ನಿಯ ವೇಳೆ ಸಚಿನ್ ತೆಂಡೂಲ್ಕರ್ ಅವರು ಕೋವಿಡ್ ಪರೀಕ್ಷೆಗೆ ತಮ್ಮಿಂದ ಸ್ಯಾಂಪಲ್ ಪಡೆಯುತ್ತಿದ್ದ ವೈದ್ಯಕೀಯ ಸಿಬ್ಬಂದಿಯನ್ನು ಸಖತ್ತಾಗಿ ಕಾಲೆಳೆದಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಅವರು ತಾನು 277 ಟೆಸ್ಟ್ ತೆಗೆದುಕೊಂಡಿರುವುದಾಗಿ ಹೇಳುತ್ತಿರುವುದು ಇದೆ. ಈಗ ಕೋವಿಡ್ ಟೆಸ್ಟ್​ನಲ್ಲಿ ಸಚಿನ್ ತೆಂಡೂಲ್ಕರ್ ಕ್ಲೀನ್ ಬೌಲ್ಡ್ ಆಗಿರುವುದು ವಿಪರ್ಯಾಸ.

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು