news18-kannada Updated:January 1, 2021, 8:59 AM IST
ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ಕೇರಳ ತಂಡ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಶ್ರೀಶಾಂತ್ ಕೋಪಗೊಂಡು ಬ್ಯಾಟ್ಸ್ಮನ್ ಮೇಲೆ ಸ್ಲೆಡ್ಜ್ ಮಾಡಿದ್ದಾರೆ.
ಬರೋಬ್ಬರಿ ಎಂಟು ವರ್ಷಗಳ ಬಳಿಕ ಎಸ್. ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಜನವರಿ 10 ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಕೇರಳ ತಂಡದ ಪರ ಶ್ರೀಶಾಂತ್ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 2013ರಲ್ಲಿ ಐಪಿಎಲ್ ಟೂರ್ನಿಯ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಬಿಸಿಸಿಐಯಿಂದ ಅಜೀವ ನಿಷೇಧಕ್ಕೆ ಶ್ರೀಶಾಂತ್ ಗುರಿಯಾಗಿದ್ದರು. ಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಬಿಸಿಸಿಐ ಶಿಕ್ಷೆ ಕಡಿತಗೊಳಿಸಿತ್ತು. ಇದೀಗ 37 ವರ್ಷದ ಶ್ರೀಶಾಂತ್ ತಮ್ಮ ರಾಜ್ಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೆ ಶ್ರೀಶಾಂತ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ಕೇರಳ ತಂಡ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಶ್ರೀಶಾಂತ್ ಕೋಪಗೊಂಡು ಬ್ಯಾಟ್ಸ್ಮನ್ ಮೇಲೆ ಸ್ಲೆಡ್ಜ್ ಮಾಡಿದ್ದಾರೆ. ಈ ಮೂಲಕ ಯಂಗ್ ಗನ್ ಹಳೇಯ ಖದರ್ ಮೂಲಕ ಮತ್ತೆ ಕ್ರಿಕೆಟ್ನಲ್ಲಿ ಅಬ್ಬರಿಸಲು ತಯಾರಾಗಿದ್ದಾರೆ.
ICC Test Rankings: ಕೇನ್ ವಿಲಿಯಮ್ಸನ್ಗೆ ನಂಬರ್ 1 ಪಟ್ಟ: ಭರ್ಜರಿ ಏರಿಕೆ ಕಂಡ ಅಜಿಂಕ್ಯಾ ರಹಾನೆ
ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡಕ್ಕೆ ಸಂಜು ಸ್ಯಾಮ್ಸನ್ಗೆ ನಾಯಕ ಪಟ್ಟ ಕಟ್ಟಲಾಗಿದೆ. ಇನ್ನುಳಿದಂತೆ ಶ್ರೀಶಾಂತ್ ಸೇರಿ ರಾಬಿನ್ ಉತ್ತಪ್ಪ, ಬಾಸಿಲ್ ಥಂಪಿ, ಜಲಜಾ ಸಕ್ಸೇನಾ, ವಿಷ್ಣು ವಿನೋದ್, ಆಸೀಫ್ ಕೆ.ಎಂ, ಸಚಿನ್ ಬೇಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗಷ್ಟೆ ಶ್ರೀಶಾಂತ್ ಅವರು ಮುಂದಿನ ವರ್ಷದ 2021ನೇ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ ಎಂದಿದ್ದರು. ನಾನು ಉತ್ತಮ ನಿರ್ವಹಣೆ ತೋರಿದಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರಲಿವೆ. ಐಪಿಎಲ್ನ ವಿವಿಧ ತಂಡಗಳಿಂದಲೂ ನನ್ನನ್ನು ಸಂಪರ್ಕಿಸಲಾಗುತ್ತಿದೆ. ನಾನು ಫಿಟ್ ಆಗಿದ್ದರೆ, ಉತ್ತಮ ಬೌಲಿಂಗ್ ಮಾಡುವ ವಿಶ್ವಾಸವಿದೆ ಎಂದು ಶ್ರೀಶಾಂತ್ ಹೇಳಿದ್ದರು.
ಮಾಡೆಲ್ಗಳಿಗೆ ಸೆಡ್ಡು ಹೊಡೆಯುತ್ತಿರುವ ಕ್ರಿಸ್ ಗೇಲ್ ಹೆಂಡತಿ ನತಾಶ: ಇಲ್ಲಿದೆ ಫೋಟೋಗಳು
ಎಸ್. ಶ್ರೀಶಾಂತ್ ಭಾರತ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನಾಡಿದ್ದಾರೆ. ಇನ್ನು ಭಾರತ ಪರ 2011ರ ಆಗಸ್ಟ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ:
ಸಂಜು ಸಾಮ್ಸನ್ (ನಾಯಕ), ಸಚಿನ್ ಬೇಬಿ (ಉಪ ನಾಯಕ), ಜಲಜಾ ಸಕ್ಸೇನಾ, ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಸಲ್ಮಾನ್ ನಿಝಾರ್, ಬಾಸಿಲ್ ತಂಪಿ, ಎಸ್. ಶ್ರೀಶಾಂತ್, ನಿಧೀಶ್ ಎಂ.ಡಿ, ಆಸಿಫ್ ಕೆ.ಎಂ, ಅಕ್ಷಯ್ ಚಂದ್ರನ್, ಮಿಧುನ್ ಪಿಕೆ, ಅಭಿಷೇಕ್ ಮೋಹನ್ ಎಸ್ಎಲ್, ವಿನೂಪ್ ಎಸ್ ಮನೋಹರನ್, ಮೊಹಮ್ಮದ್ ಅಜರುದ್ದೀನ್ ಎಂ, ರೋಹನ್ ಎಸ್ ಕಣ್ಣುಮ್ಮಲ್, ಮಿಧುನ್ ಎಸ್, ವತ್ಸಲ್ ಗೋವಿಂದ್ ಶರ್ಮಾ, ರೋಜಿತ್ ಕೆಜಿ, ಶ್ರೀರೂಪ್ ಎಂ.ಪಿ.
Published by:
Vinay Bhat
First published:
January 1, 2021, 8:59 AM IST