• Home
  • »
  • News
  • »
  • sports
  • »
  • Ruturaj Gaikwad: ಒಂದು ಓವರಿನಲ್ಲಿ 7 ಸಿಕ್ಸರ್! ರುತುರಾಜ್ ಗಾಯಕ್ವಾಡ್ ವಿಶ್ವದಾಖಲೆ

Ruturaj Gaikwad: ಒಂದು ಓವರಿನಲ್ಲಿ 7 ಸಿಕ್ಸರ್! ರುತುರಾಜ್ ಗಾಯಕ್ವಾಡ್ ವಿಶ್ವದಾಖಲೆ

ರುತುರಾಜ್ ಗಾಯಕವಾಡ್

ರುತುರಾಜ್ ಗಾಯಕವಾಡ್

ಅರೇ, ಇದೇನಪ್ಪಾ! ಆರೇ ಎಸೆತಗಳ ಓವರ್​ನಲ್ಲಿ ಏಳು ಸಿಕ್ಸರ್ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಹೌದು, ನಿಮ್ಮ ಊಹೆ ನಿಜ.

  • Share this:

ದಾಖಲೆ ಎಂಬುದು ಯಾವಾಗಲೂ ವಿಶೇಷ. ಅದರಲ್ಲೂ ವಿಶ್ವದಾಖಲೆ ಅಂತೇನಾದರೂ ಆದರೆ ಅದು ಬಹು ಸಮಯದವರೆಗೆ ಜನರ ಸ್ಮೃತಿಯಲ್ಲಿರುತ್ತದೆ ಎಂದರೆ ತಪ್ಪಿಲ್ಲ. ಇನ್ನು ಭಾರತದಲ್ಲಿ ಕ್ರಿಕೆಟ್ ಒಂದು ದೊಡ್ಡ ಆಟ. ಕೋಟ್ಯಾನುಗಟ್ಟಲೇ ಭಾರತೀಯರು ಕ್ರಿಕೆಟ್ (Cricket Wordl Record) ಅನ್ನು ಜೀವಿಸುತ್ತಾರೆ ಎಂದರೂ ತಪ್ಪಿಲ್ಲ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ಸ್ಥಳೀಯ ಕ್ಲಬ್ಬುಗಳವರೆಗೆ ಭಾರತದಲ್ಲಿ ಕ್ರಿಕೆಟ್ ತಂಡಗಳಿವೆ. ಇನ್ನು ದೇಶೀಯವಾಗಿ ಜನಪ್ರಿಯತೆ ಪಡೆದಿರುವ ವಿಜಯ್ ಹಜಾರೆ ಕಪ್ (Vijay Hazare Trophy) ಕ್ರಿಕೆಟ್ ಪಂದ್ಯಗಳು ಸಾಕಷ್ಟು ಪ್ರಸಿದ್ಧ. ಪಸ್ತುತ ಈಗ ನಡೆಯುತ್ತಿರುವ ಈ ಕಪ್ಪಿನ ಪಂದ್ಯದಲ್ಲೇ ಒಂದು ಅದ್ಭುತ ಹಾಗೂ ವಿನೂತನ ವಿಶ್ವದಾಖಲೆ ಏರ್ಪಟ್ಟಿದೆ. ಹೌದು, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಹಾಗೂ ಮೂಲತಃ ಮಹಾರಾಷ್ಟ್ರ ತಂಡದವರಾದ ರುತುರಾಜ್ ಗಾಯಕ್ವಾಡ್ (Ruturaj Gaikwad)  ತಮ್ಮ ಅಗ್ರೆಸಿವ್ ಬ್ಯಾಟಿಂಗ್ ಗಾಗಿ ಪ್ರಸಿದ್ಧ.


ಅಹ್ಮದಾಬಾದಿನ ನರೇಂದ್ರ ಮೋಡಿ ಕ್ರೀಡಾಂಗಣ ಬಿ ನಲ್ಲಿ ನಡೆದ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮಧ್ಯದ ಕ್ವಾರ್ಟರ್ ಫೈನಲ್ ಪಂದ್ಯ ಒಂದು ವಿಶ್ವದಾಖಲೆಗೆ ಸಾಕ್ಷಿಯಾಯಿತು ಎಂದರೆ ತಪ್ಪಿಲ್ಲ. ಸಾಮಾನ್ಯವಾಗಿ ಒಂದು ಓವರ್ ನಲ್ಲಿ ಆರು ಎಸೆತಗಳಿರುತ್ತವೆ. ಆರಕ್ಕೆ ಆರೂ ಎಸೆತಗಳನ್ನು ಸಿಕ್ಸರ್ ಹೊಡೆದರೆ ಯಾರಿಗೆ ತಾನೇ ರೋಮಾಂಚನ ಆಗದಿರದು! ಏಕೆಂದರೆ ಈ ರೀತಿ ಎಲ್ಲ ಎಸೆತಗಳಿಗೆ ಸಿಕ್ಸರ್ ಬಾರಿಸುವುದು ಬಲು ಕಷ್ಟ.  ಅಂತಹ ಸಾಧನೆಯನ್ನು ಕ್ರಿಕೆಟ್ ಜಗತಿನ್ನಲ್ಲಿ ಕೆಲವೇ ಕೆಲವರು ಮಾತ್ರ ಮಾಡಿದ್ದಾರೆ. ಆದರೆ, ಈ ಪಂದ್ಯದಲ್ಲಿ ಇದಕ್ಕಿಂದ ಒಂದು ಹೆಜ್ಜೆ ಮುಂದೆ ಎಂಬಂತೆ ರುತುರಾಜ್ ಒಂದೇ ಓವರ್ ನಲ್ಲಿ ಏಳು ಸಿಕ್ಸರ್ ಬಾರಿಸಿ ಮತ್ತೊಂದು ವಿಶ್ವದಾಖಲೆ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.


ಆರೇ ಎಸೆತಗಳ ಓವರ್​ನಲ್ಲಿ ಏಳು ಸಿಕ್ಸರ್ ಹೇಗೆ ಸಾಧ್ಯ?
ಅರೇ, ಇದೇನಪ್ಪಾ! ಆರೇ ಎಸೆತಗಳ ಓವರ್​ನಲ್ಲಿ ಏಳು ಸಿಕ್ಸರ್ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಹೌದು, ನಿಮ್ಮ ಊಹೆ ನಿಜ. ಆ ಓವರ್ ನಲ್ಲಿ ಬಾಲರ್ ಒಂದು ನೋ ಬಾಲ್ ಕೂಡ ಎಸೆದಿದ್ದು ಅದಕ್ಕೂ ರುತುರಾಜ್ ಸಿಕ್ಸರ್ ಬಾರಿಸಿದ್ದು ಹೀಗೆ ಓವರ್ ನಲ್ಲಿ ಏಳು ಸಿಕ್ಸರ್ ಬಂದಿವೆ. ಈ ಮೂಲಕ ಒಂದೇ ಓವರ್ ನಲ್ಲಿ 43 ರನ್ನುಗಳನ್ನು ಪಡೆದ ಅತ್ಯಂತ ವಿರಳ ರಿಕಾರ್ಡ್ ಸಹ ಇದರಿಂದ ಮೂಡಿಬಂದಿದೆ.


ಒಂದೇ ಓವರ್​ನಲ್ಲಿ43 ರನ್ನುಗಳು
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿಸಿಐ ಡಾಮೆಸ್ಟಿಕ್ ಹಾಗೂ ಲಖನೌ ಸೂಪರ್ ಜಯಂಟ್ಸ್ ಎಂಬ ಅಧಿಕೃತ ಪುಟಗಳು ರುತುರಾಜ್ ಅವರನ್ನು ಶ್ಲಾಘಿಸುತ್ತ ಓವರ್ ನಲ್ಲಿ ಗಳಿಸಿದ 43 ರನ್ನುಗಳು ಹಾಗೂ ಬಾರಿಸಿದ 7 ಸಿಕ್ಸರ್ ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ.


ಇದನ್ನೂ ಓದಿ: FIFA World Cup-2022: ಫುಟ್ಬಾಲ್‌ ಸ್ಟಾರ್ಸ್ ಬಗ್ಗೆ ಅಭಿಮಾನ ಬೇಡ! ಅದು ಇಸ್ಲಾಂಗೆ ವಿರುದ್ಧ ಎಂದ ಮುಸ್ಲಿಂ ಸಂಘಟನೆ!


ಮ್ಯಾಚ್​ ಎಷ್ಟು ಸ್ವಾರಸ್ಯಕರವಾಗಿತ್ತಂದ್ರೆ!
ಇನ್ನು, ಪಂದ್ಯದ ಬಗ್ಗೆ ಹೇಳುವುದಾದರೆ, ಮಹಾರಾಷ್ಟ್ರವು 50 ಓವರ್ ಗಳಲ್ಲಿ ಅಮೋಘ 330 ರನ್ ಗಳನ್ನು ಬಾರಿಸಿದ್ದು ಇದರಲ್ಲಿ ಬಹುತೇಕ ರನ್ನುಗಳು ರುತುರಾಜ್ ಅವರಿಂದಲೇ ಬಂದಿದೆ. ರುತುರಾಜ್ ವೈಯಕ್ತಿಕವಾಗಿ 159 ಎಸೆತಗಳನ್ನು ಎದುರಿಸಿ 220 ರನ್ ಬಾರಿಸಿದ್ದಾರೆ. ಅವರ ಈ ಸ್ಕೋರ್ ನಲ್ಲಿ 16 ಸಿಕ್ಸರ್​ಗಳಿದ್ದರೆ 10 ಬೌಂಡರಿಗಳಿವೆ.


ಈ ಹಿಂದೆ 2018-19 ರಲ್ಲಿ ಫೋರ್ಡ್ ಟ್ರೋಫಿ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯೂಜಿಲ್ಯಾಂಡಿನ ಸೆಂಟ್ರಲ್ ಡಿಸ್ಟ್ರಿಕ್ಟ್ ಬೌಲರ್ ಆದ ವಿಲಿಯಮ್ ಲುಡಿಕ್ ತಮ್ಮ ಓವರ್ ನಲ್ಲಿ 43 ರನ್ ಕೊಟ್ಟಿದ್ದರು. ನಾರ್ದರ್ನ್ ಡಿಸ್ಟ್ರಿಕ್ಟ್ ಬ್ಯಾಟರ್ ಆದ ಜೋ ಕಾರ್ಟರ್ ಈ ರೀತಿಯ ಸಾಧನೆ ಮಾಡಿದ್ದರು. ಇದೀಗ ರುತುರಾಜ್ ಲೇಟೆಸ್ಟ್ ಆಗಿ ಈ ಸಾಧನೆ ಮಾಡಿದ್ದಾರೆ. ಉತ್ತರ ಪ್ರದೇಶದ ಶಿವಾ ಸಿಂಗ್ ಈ ಬಾರಿ ಲುಡಿಕ್ ಅವರ ಸ್ಥಾನದಲ್ಲಿ ನಿಂತಿದ್ದು ತಮ್ಮ ಒಂಭತ್ತು ಒವರ್ ಗಳಲ್ಲಿ ಬರೋಬ್ಬರಿ 88 ರನ್ನುಗಳನ್ನು ನೀಡಿದ್ದಾರೆ.


ಇದನ್ನೂ ಓದಿ: Team India: ಬಿಸಿಸಿಐನಲ್ಲಿ ನಡಿತಿದ್ಯಾ ಪಾಲಿಟಿಕ್ಸ್? ಆಗ ಮನೋಜ್ ತಿವಾರಿ, ಈಗ ಸಂಜು ಸ್ಯಾಮ್ಸನ್​ಗೆ ಅನ್ಯಾಯ


ಇನ್ನು, ಗಾಯಕ್ವಾಡ್ ಓವರ್ ನ ಎಲ್ಲ ಬಾಲುಗಳಿಗೆ ಸಿಕ್ಸರ್ ಬಾರಿಸಿರುವ ಕ್ರಿಕೆಟ್ ಜಗತ್ತಿನ ಕೆಲವೇ ಅತಿರಥ ಮಹಾರಥರ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿ ಯಾರು ಯಾರು ಇದ್ದಾರೆ ಎಂಬುದನ್ನು ಒಮ್ಮೆ ನೋಡುವುದಾದರೆ, ಇದರಲ್ಲಿರುವವರು ಗ್ಯಾರಿ ಸೋಬರ್ಸ್ (1968), ರವಿ ಶಾಸ್ತ್ರಿ (1985), ಹರ್ಶೆಲ್ ಗಿಬ್ಸ್ (2007), ಯುವರಾಜ್ ಸಿಂಗ್ (2007), ರಾಸ್ ವೈಟ್ಲೀ (2017), ಹಜರತುಲ್ಲಾ ಜಜಾಯ್ (2018), ಲಿಯೋ ಕಾರ್ಟರ್ (2020), ಕಿರಾನ್ ಪೊಲ್ಲಾರ್ಡ್ (2021), ತಿಸಾರಾ ಪೆರೆರಾ (2021) ಹಾಗೂ ಜಸ್ಕರಣ್ ಮಲಹೋತ್ರಾ (2021).

Published by:ಗುರುಗಣೇಶ ಡಬ್ಗುಳಿ
First published: