RR vs DC: ಪಂತ್ ಆರ್ಭಟಕ್ಕೆ ಬೆಚ್ಚಿಬಿದ್ದ ರಾಜಸ್ಥಾನ್; ಚೆನ್ನೈಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಡೆಲ್ಲಿ

ಈ ಗೆಲುವಿನೊಂದಿಗೆ ಡೆಲ್ಲಿ 14 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಾಜಸ್ಥಾನ್ ಏಳನೆ ಸ್ಥಾನದಲ್ಲೇ ಉಳಿದಿದ್ದು, ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ.

zahir | news18
Updated:April 22, 2019, 11:49 PM IST
RR vs DC: ಪಂತ್ ಆರ್ಭಟಕ್ಕೆ ಬೆಚ್ಚಿಬಿದ್ದ ರಾಜಸ್ಥಾನ್; ಚೆನ್ನೈಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಡೆಲ್ಲಿ
ಈ ಗೆಲುವಿನೊಂದಿಗೆ ಡೆಲ್ಲಿ 14 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಾಜಸ್ಥಾನ್ ಏಳನೆ ಸ್ಥಾನದಲ್ಲೇ ಉಳಿದಿದ್ದು, ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ.
zahir | news18
Updated: April 22, 2019, 11:49 PM IST
ಜೈಪುರ (ಏ22): ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ wಎಲ್ಲಿ ಕ್ಯಾಪಿಟಲ್ಸ್​ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಅಜಿಂಕ್ಯ ರಹಾನೆ ಶತಕದ ಹೊರತಾಗಿಯು ರಾಜಸ್ಥಾನ್ ಸೋಲುಂಡಿತ್ತು ಪ್ಲೇ ಆಫ್​ ಹಾದಿ ಮತ್ತಷ್ಟು ಕಠಿಣ ವಾಗಿದೆ. ರಿಷಭ್ ಪಂತ್​ರ ಸ್ಪೋಟಕ ಆಟದ ನೆರವಿನಿಂದ ಡೆಲ್ಲಿ ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಆರ್​ಆರ್​​ ನೀಡಿದ್ದ 192 ರನ್​​ಗಳ ಕಠಿಣ ಸವಾಲು ಬೆನ್ನಟ್ಟಿದ ಡೆಲ್ಲಿಗೆ ಓಪನರ್​ಗಳಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬೊಂಬಾಟ್ ಆರಂಭ ಒದಗಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಧವನ್ ರಾಜಸ್ಥಾನ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮ ಪವರ್ ಪ್ಲೇ ಅಂತ್ಯವಾಗುವ ಹೊತ್ತಿಗೆ ತಂಡದ ಮೊತ್ತ 60ರ ಗಡಿ ದಾಟಿತು. ಈ ಸಂದರ್ಭ ಧವನ್ ಅರ್ಧಶತಕ ಸಿಡಿಸಿ ನಿರ್ಗಮಿಸಿದರು. 27 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 54 ರನ್​​ ಗಳಿಸಿ ಧವನ್ ಔಟ್ ಆದರೆ, ಬಂದ ಬೆನ್ನಲ್ಲೆ ನಾಯಕ ಶ್ರೇಯಸ್ ಐಯರ್ ಕೇವಲ 4 ರನ್​ಗೆ ಸುಸ್ತಾದರು.

ಈ ಸಂದರ್ಭ ಪೃಥ್ವಿ ಜೊತೆಯಾದ ರಿಷಭ್ ಪಂತ್ ಗೆಲುವಿಗಾಗಿ ಹೋರಾಟ ನಡೆಸಿದರು. ಕಠಿಣ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದ ಈ ಜೋಡಿ ಉತ್ತಮ ಆಟ ಪ್ರದರ್ಶಿಸಿತು. ಪಂತ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ, ಶಾ ಉತ್ತಮ ಸಾತ್ ನೀಡಿದರು. ಈ ಜೋಡಿ ಇನ್ನೇನು ತಂಡಕ್ಕೆ ಗೆಲುವು ತಂದುಕೊಡುತ್ತೆ ಎಂಬೊತ್ತಿಗೆ ಪೃಥ್ವಿ ಕೆಟ್ಟ ಹೊಡೆತಕ್ಕೆ ಮಾರುಹೋಗಿ ಬಲಿಯಾದರು. ಪರಿಣಾಮ ಪಂತ್-ಶಾ 84 ರನ್​ಗಳ ಮನಮೋಹಕ ಜೊತೆಯಾಟ ಅಂತ್ಯವಾಯಿತು.

39 ಎಸೆತಗಳಲ್ಲಿ 42 ರನ್ ಗಳಿಸಿ ಶಾ ನಿರ್ಗಮಿಸಿದ ಬಳಿಕ ಕ್ರೀಸ್​ಗೆ ಬಂದ ರಾಥರ್​​​​​​ಫಾರ್ಡ್ ಪಂತ್ ಜೊತೆ ಗೂಡಿ ತಂಡವನ್ನು ಗೆಲ್ಲಿಸುವ ಹೊಣೆ ಹೊತ್ತರು. ಆದರೆ 5 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಿಡಿಸಿ ರಾಥರ್​​​​​​ಫಾರ್ಡ್ 11 ರನ್​ಗೆ ಔಟ್ ಆಗಿ ಆಘಾತ ನೀಡಿದರು. ಈ ಸಂದರ್ಭ ಹೊಡಿಬಡಿ ಆಟವಾಡಿ ಪಂತ್​ ಡೆಲ್ಲಿಗೆ ಭರ್ಜರಿ ತಂದುಕೊಟ್ಟರು. 19.2 ಓವರ್​ಗಳಲ್ಲೇ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕುವ ಮೂಲಕ 6 ವಿಕೆಟ್​ಗಳ ಗೆಲುವು ತನ್ನದಾಗಿಸಿತು. ಪಂತ್ 36 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸ್​ ಚಚ್ಚಿ ಅಜೇಯ 78 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಆರ್​ಆರ್​ ಪರ ಗೋಪಾಲ್ 2, ಕುಲ್ಕರ್ಣಿ ಹಾಗೂ ಪರಾಗ್ ತಲಾ 1 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಡೆಲ್ಲಿ 14 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಾಜಸ್ಥಾನ್ ಏಳನೆ ಸ್ಥಾನದಲ್ಲೇ ಉಳಿದಿದ್ದು, ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ.

ಇದಕ್ಕೂ ಮೊದಲು ಟಾಸ್​ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಐಯರ್ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಆರಂಭ ಉತ್ತಮವಾಗಿರಲಿಲ್ಲ. ಪಂದ್ಯದ 2ನೇ ಓವರ್​ನಲ್ಲೇ ಆರಂಭಿಕ ಜೋಡಿಯನ್ನು ಡೆಲ್ಲಿ ಹುಡುಗರು ಬೇರ್ಪಡಿಸಿದ್ದರು. ತಂಡದ ಮೊತ್ತ 5 ಆಗಿದ್ದಾಗ ಹೊಂದಾಣಿಕೆಯ ಕೊರತೆಯಿಂದ ಸ್ಯಾಮ್ಸನ್​(0) ರಬಾಡರ ನೇರ ಎಸೆತಕ್ಕೆ ರನೌಟ್ ಆಗಿ ಹೊರ ನಡೆದರು.
Loading...

ಬಳಿಕ ಕ್ರೀಸ್​ಗೆ ಆಗಮಿಸಿದ ನಾಯಕ ಸ್ಟೀವ್ ಸ್ಮಿತ್ ಜತೆಗೂಡಿ ರಹಾನೆ ಜವಾಬ್ದಾರಿಯುತವಾಗಿ ಇನಿಂಗ್ಸ್ ಕಟ್ಟಿದರು. ನಿಧಾನಗತಿಯೊಂದಿಗೆ ರನ್​ ಪೇರಿಸುತ್ತಾ ಹೋದ ಈ ಜೋಡಿ ಕ್ರೀಸ್​ನಲ್ಲಿ ನೆಲೆಯೂರುತ್ತಿದ್ದಂತೆ ಭರ್ಜರಿ ಹೊಡೆತಗಳಿಗೆ ಕೈ ಹಾಕಿದರು. ನಾನಾ ದಿಕ್ಕಿನಲ್ಲಿ 8 ಬೌಂಡರಿ ಬಾರಿಸಿದ ಸ್ಮಿತ್ ಆಕರ್ಷಕ ಅರ್ಧಶತಕ ಸಿಡಿಸಿದರು. 32 ಎಸೆತಗಳನ್ನು ಎದುರಿಸಿದ ಸ್ಮಿತ್ 50 ರನ್​ಗಳಿಸಿ ಅಕ್ಷರ್ ಎಸೆತದಲ್ಲಿ ಔಟಾದರು. ಈ ವೇಳೆಗೆ ರಹಾನೆಯೊಂದಿಗೆ 130 ರನ್​ಗಳ ಅದ್ಭುತ ಜತೆಯಾಟಕ್ಕೆ ಸ್ಮಿತ್ ಸಾಕ್ಷಿಯಾಗಿದ್ದರು.

ಅದಾಗಲೇ ಫಾರ್ಮ್​ಗೆ ಮರಳಿದ್ದ ರಹಾನೆ ತನ್ನ ಬತ್ತಲಿಕೆಯಿಂದ ಕಲಾತ್ಮಕ ಹೊಡೆತಗಳನ್ನು ಡೆಲ್ಲಿ ಬೌಲರ್​ಗಳ ವಿರುದ್ಧ ಪ್ರಯೋಗಿಸಿದ್ದರು. ಈ ವೇಳೆ 11 ಬೌಂಡರಿಗಳು ಮೂಡಿ ಬಂದರೆ ಅದರೊಂದಿಗೆ ಭರ್ಜರಿ 3 ಸಿಕ್ಸರ್​ಗಳೂ ಸಹ ಸಿಡಿದಿದ್ದವು. ಮೈದಾನದ ಮೂಲೆ ಮೂಲೆ ಚೆಂಡನ್ನು ತಲುಪಿಸಿದ ರಹಾನೆ 58ನೇ ಎಸೆತದಲ್ಲಿ ತಮ್ಮ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿ ಸಂಭ್ರಮಿಸಿದರು.

ಈ ನಡುವೆ ಬೆನ್​ ಸ್ಟೋಕ್ಸ್​ (8) ಬೇಗನೆ ವಿಕೆಟ್​ ಒಪ್ಪಿಸಿದರೆ, ಅಸ್ಟನ್ ಟರ್ನರ್ (0) ಬಂದ ವೇಗದಲ್ಲೇ ಮರಳಿದರು. ಇನ್ನು ಕೊನೆಯ ಓವರ್​ಗಳ ವೇಳೆ ರಹಾನೆ ಜೊತೆಗೂಡಿದ ಸ್ಟುವರ್ಟ್​ ಬಿನ್ನಿ ಭರ್ಜರಿ ಹೊಡೆತಗಳ ಮೂಲಕ ಗಮನ ಸೆಳೆದರು.

12 ಎಸೆತಗಳನ್ನು ಎದುರಿಸಿದ ಬಿನ್ನಿ 19 ರನ್​ಗಳ ಉಪಯುಕ್ತ ಕಾಣಿಕೆ ನೀಡಿ ಕೊನೆಯ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಭರ್ಜರಿ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ 63 ಎಸೆತಗಳಲ್ಲಿ 105 ರನ್​ಗಳಿಸಿ ಅಜೇಯರಾಗುಳಿದರು. ಈ ಮೂಲಕ 6 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 191 ಕ್ಕೆ ತಲುಪಿಸಿದರು. ಡೆಲ್ಲಿ ಪರ ರಬಾಡ 2 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ, ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್​ ಪಡೆದರು.

 First published:April 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626