• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಉಳಿದ ಐಪಿಎಲ್ ತಂಡದಲ್ಲಿ ಊರಿನ ಹೆಸರಿದೆ, ಆರ್​ಸಿಬಿ ತಂಡದಲ್ಲಿ ಯಾಕಿಲ್ಲ?; ನಿಲ್ಲದ ಅಭಿಮಾನಿಗಳ ಕಿಚ್ಚು!

ಉಳಿದ ಐಪಿಎಲ್ ತಂಡದಲ್ಲಿ ಊರಿನ ಹೆಸರಿದೆ, ಆರ್​ಸಿಬಿ ತಂಡದಲ್ಲಿ ಯಾಕಿಲ್ಲ?; ನಿಲ್ಲದ ಅಭಿಮಾನಿಗಳ ಕಿಚ್ಚು!

RCB

RCB

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆಂಗಳೂರು ಎಫ್‌ಸಿ ಸುನಿಲ್ ಛೆಟ್ರಿ ಚಿತ್ರವನ್ನು ಆರ್​ಸಿಬಿ ಹಂಚಿಕೊಂಡಿದೆ. ಜೊತೆಗೆ ‘ಭಾರತದ ಹೆಮ್ಮೆ ಬೆಂಗಳೂರಿನ ಹೆಮ್ಮೆ’ ಎಂದು ಬರೆದುಕೊಂಡಿದೆ.

  • Share this:

    ಬೆಂಗಳೂರು (ನ. 26): ಇಂಡಿಯನ್ ಪ್ರೀಮಿಯರ್ ಲೀಗ್​ನ ಆರ್​ಸಿಬಿ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಪದ ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆರ್​ಸಿಬಿ ಅಭಿಮಾನಿಗಳು ನಾವಿನ್ನು ರಾಯಲ್ ಚಾಜೆಂಜರ್ಸ್​ ತಂಡಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.

    ಟ್ವಿಟ್ಟರ್​ನಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಆರ್​ಸಿಬಿ ಮೊನ್ನೆಯಷ್ಟೆ ಬೆಂಗಳೂರು ಪದ ಕೈಬಿಟ್ಟು ‘ರಾಯಲ್ ಚಾಲೆಂಜರ್ಸ್​’ ಎಂದು ಬದಲಾವಣೆ ಮಾಡಿಕೊಂಡಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಟ್ವೀಟ್ ಮಾಡುವ ಮುಲಕ ಬೇಸರ ಹೊರಹಾಕಿದ್ದರು.

     



    ಆರ್​ಸಿಬಿ ತಂಡಕ್ಕೆ ನಾಚಿಕೆಯಾಗಬೇಕು!; ಕೊಹ್ಲಿ ತಂಡದ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು; ಅಷ್ಟಕ್ಕೂ ಆಗಿದ್ದೇನು?

    "ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ, ನಾವು ನಿಮ್ಮನ್ನು ಇಷ್ಟಪಡಲು ಕಾರಣ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ 'ಬೆಂಗಳೂರು'. ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು. ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗೇ ಇರುತ್ತೇವೆ" ಎಂದು ಹೇಳಿದ್ದರು.

    ಈ ನಡುವೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆಂಗಳೂರು ಎಫ್‌ಸಿ ಸುನಿಲ್ ಛೆಟ್ರಿ ಚಿತ್ರವನ್ನು ಆರ್​ಸಿಬಿ ಹಂಚಿಕೊಂಡಿದೆ. ಜೊತೆಗೆ ‘ಭಾರತದ ಹೆಮ್ಮೆ ಬೆಂಗಳೂರಿನ ಹೆಮ್ಮೆ’ ಎಂದು ಬರೆದುಕೊಂಡಿದೆ. ಈ ಮೂಲಕ ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದೆ. ಆದರೆ, ಇದರಿಂದ ಮತ್ತಷ್ಟು ಕೆರಳಿಸಿರುವ ಅಭಿಮಾನಿಗಳು ಈ ಟ್ವೀಟ್​ಗೆ ಕಮೆಂಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

     


    ಆಸ್ಟ್ರೇಲಿಯಾ ನೆಲದಲ್ಲಿ ಪಾಕಿಸ್ತಾನ ಕೊನೆಯ ಟೆಸ್ಟ್​ ಗೆದ್ದಿದ್ದು ಕೊಹ್ಲಿಗೆ 7 ವರ್ಷ ಇರುವಾಗ!

    “ನಾವು ಇಷ್ಟು ವರ್ಷ ಬೆಂಬಲ ನೀಡಿದ್ದು ಬೆಂಗಳೂರು ಎಂಬ ಹೆಸರಿಗೆ. ನೀವು ಒಂದು ಕಪ್ ಗೆದ್ದಿಲ್ಲಾ ಎಂದರೂ ನಿಮ್ಮ ಮೇಲಿರುವ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗ ಅಭಿಮಾನಕ್ಕೆ ಒಳ್ಳೆಯ ಮರ್ಯಾದೆ ಕೊಟ್ಟಿದ್ದೀರ. ನಮಗೆ ಬೇಕಾಗಿರುವುದು ಬೆಂಗಳೂರು, ರಾಯಲ್ ಚಾಲೆಂಜರ್ಸ್ ಅಲ್ಲ. ನಮ್ಮ ಕನ್ನಡಿಗರಿರುವ ಪಂಜಾಬ್ ತಂಡಕ್ಕೆ ನಮ್ಮ ಬೆಂಬಲ ಎಂಬ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    ಇನ್ನು ಐಪಿಎಲ್​ನಲ್ಲಿರುವ ಉಳಿದೆಲ್ಲಾ ತಂಡದ ಟ್ವಿಟ್ಟರ್​ ಖಾತೆಯಲ್ಲಿ ತಮ್ಮ ತಮ್ಮ ಊರಿನ ಹೆಸರಿದೆ. ಆದರೆ, ಆರ್​ಸಿಬಿ ತಂಡದಲ್ಲಿ ಮಾತ್ರ ಯಾಕಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ.

     


     


    Chris Gayle: ಎರಡು ಪಂದ್ಯದಲ್ಲಿ ಫೇಲ್ ಆದರೆ ನಾನು ಆ ತಂಡಕ್ಕೆ ಬೇಡ; ವಿದಾಯದ ವೇಳೆ ಗೇಲ್ ಭಾವುಕ!

    ಐಪಿಎಲ್ 12 ಆವೃತ್ತಿ ಕೊನೆಗೊಂಡಿದ್ದರು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲವಾಗಿದೆ. ಇಷ್ಟಾದರು ಅಭಿಮಾನಿಗಳು ಮಾತ್ರ ಆರ್​ಸಿಬಿ ತಂಡವನ್ನು ಬೆಂಬಲಿಸುವುದರಲ್ಲಿ ಹಿಂದೆ ಸರಿದಿಲ್ಲ. ಪ್ರತಿ ಬಾರಿಯು ಕಪ್ ನಮ್ದೆ ಎಂದು ಪ್ರೋತ್ಸಾಹ ನೀಡುತ್ತಲೇ ಬರುತ್ತಿದ್ದಾರೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಪಂದ್ಯ ನಡೆಯುತ್ತಿದ್ದರೆ ಕಿಕ್ಕಿರಿದು ಬೆಂಗಳೂರಿನ ಅಭಿಮಾನಿಗಳು ಸೇರುತ್ತಾರೆ. ಕನ್ನಡಿಗರು ತಮ್ಮ ನೆಚ್ಚಿನ ತಂಡದ ಮೇಲೆ ಇಷ್ಟೆಲ್ಲಾ ಪ್ರೀತಿ ತೋರುವಾಗ ಬೆಂಗಳೂರು ಹೆಸರನ್ನೇ ಟ್ವಿಟ್ಟರ್​ನಲ್ಲಿ ತೆಗೆದು ಹಾಕಿರುವುದು ಅನೇಕರಿಗೆ ನೋವುಂಟು ಮಾಡಿದೆ.

     








     

    top videos
      First published: