Vinay BhatVinay Bhat
|
news18-kannada Updated:October 18, 2019, 8:19 AM IST
ಈ ಬಾರಿ ಸ್ಟೈನ್ ಜೊತೆ ಕೇನ್ ರಿಚರ್ಡಸನ್ ಒಂದುಕಡೆ ಇದ್ದರೆ, ಸಾಕಷ್ಟು ಅನುಭವ ಪಡೆದಿರುವ ನವ್ದೀಪ್ ಸೈನಿ, ಉಮೇಶ್ ಯಾದವ್, ಯಜುವೇಂದ್ರ ಚಹಾಲ್ ಆಲ್ರೌಂಡರ್ ಕ್ರಿಸ್ ಮೊರೀಸ್ ತಂಡದ ಭಾಗವಾಗಿದ್ದಾರೆ.
ಬೆಂಗಳೂರು (ಅ. 18): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿದೆ.
ಆರ್ಸಿಬಿ ಫ್ರಾಂಚೈಸಿ ನವನಿತಾ ಗೌತಮ್ ಎಂಬವರನ್ನು ತಮ್ಮ ಕ್ರೀಡಾ ಮಸಾಜ್ ಥೆರಫಿಸ್ಟ್ ಆಗಿ ನೇಮಕ ಮಾಡಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮಹಿಳಾ ಬೆಂಬಲ ಸಿಬ್ಬಂದಿಯನ್ನು ನೇಮಿಸಿದ ಮೊದಲ ತಂಡ ಆರ್ಸಿಬಿ ಆಗಿದೆ.
IPL 2020: ಐಪಿಎಲ್ನಲ್ಲೂ ರೈನಾಗೆ ಎದುರಾಯ್ತು ಸಂಕಷ್ಟ; ಬದಲಿ ಆಟಗಾರನತ್ತ CSK ಚಿತ್ತ?
ಆರ್ಸಿಬಿ ತಂಡ ಮುಖ್ಯ ಫಿಸಿಯೋಥೆರಫಿ ಇವಾನ್ ಸ್ಪೀಚ್ಲಿ ಮತ್ತು ಬಸು ಶಂಕರ್ ಜೊತೆ ನವನೀತ ಅವರು ತಂಡಕ್ಕೆ ಬೇಕಾದ ಮಾರ್ಗದರ್ಶನ, ತಯಾರಿ, ದೈಹಿಕ ಕಾಯಿಲೆ ಸೇರಿದಂತೆ ಮಸಾಜ್ ಥೆರಫಿಯನ್ನು ನೋಡಿಕೊಳ್ಳಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್ಸಿಬಿ ತಂಡದ ಮುಖ್ಯಸ್ಥ ಸಂಜೀವ್ ಚುರಿವಾಲ, "ಈ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದಕ್ಕೆ ಖುಷಿಯಿದೆ. ತಂಡ ಸರಿಯಾದ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಮಹಿಳೆಯರು ಎಲ್ಲ ರಂಗಗಳಲ್ಲಿ ಭಾಗವಹಿಸಬೇಕು, ಅವರಿಗೆ ಮಹತ್ವ ನೀಡಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡೆವು" ಎಂದು ಹೇಳಿದ್ದಾರೆ.
ವಿಜಯ್ ಹಜಾರೆ ಟ್ರೋಫಿ: ನಾಕೌಟ್ ಹಂತಕ್ಕೆ ಪುದುಚೇರಿ; ಕರ್ನಾಟಕ ಸೇರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ 8 ತಂಡಗಳ ಪಟ್ಟಿ
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
First published:
October 18, 2019, 8:19 AM IST