ವಿಶ್ವಕಪ್​ನೊಂದಿಗೆ ವಿಶ್ವದಾಖಲೆ ಕೈ ತಪ್ಪಿಸಿಕೊಂಡ ರೋಹಿತ್ ಶರ್ಮಾ..!

Rohit Sharma : 2003ರ ವಿಶ್ವಕಪ್​ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ನಿರ್ಮಿಸಿರುವ ರನ್​ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್​ಗೆ ಬೇಕಾಗಿದದ್ದು ಕೇವಲ 27 ರನ್​ಗಳು ಮಾತ್ರ.

zahir | news18
Updated:July 10, 2019, 8:50 PM IST
ವಿಶ್ವಕಪ್​ನೊಂದಿಗೆ ವಿಶ್ವದಾಖಲೆ ಕೈ ತಪ್ಪಿಸಿಕೊಂಡ ರೋಹಿತ್ ಶರ್ಮಾ..!
Rohit sharma
zahir | news18
Updated: July 10, 2019, 8:50 PM IST
ಐಸಿಸಿ ವಿಶ್ವಕಪ್ 2019ರ ಟೂರ್ನಿಯ ಮೊದಲ ಸೆಮಿ ಫೈನಲ್​ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 18 ರನ್​ಗಳಿಂದ ಸೋಲನುಭವಿಸಿದೆ. ಈ ಮೂಲಕ ವರ್ಲ್ಡ್​ಕಪ್ ಗೆಲ್ಲುವ ನೆಚ್ಚಿನ ತಂಡವೊಂದು ಟೂರ್ನಿಯಿಂದ ಹೊರ ಬಿದ್ದಿದೆ. ಲೀಗ್​ ಹಂತದಲ್ಲಿ ಶತಕಗಳ ಮೂಲಕ ಸಂಚಲನ ಸೃಷ್ಟಿಸಿದ್ದ ರೋಹಿತ್ ಶರ್ಮಾ ಕಿವೀಸ್ ವಿರುದ್ಧ ವಿಫಲರಾಗಿರುವುದು ಸೋಲಿಗೆ ಮತ್ತೊಂದು ಕಾರಣ ಎನ್ನಬಹುದು.

ಪ್ರತಿ ಪಂದ್ಯದಲ್ಲೂ ಅದ್ಭುತ ಆರಂಭ ಒದಗಿಸಿದ್ದ ರೋಹಿತ್ ಸೆಮಿಯಲ್ಲಿ ಮೊದಲಿಗರಾಗಿ ನಿರ್ಗಮಿಸಿದ್ದರು. ಕೇವಲ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದ ಹಿಟ್​ಮ್ಯಾನ್ ಇದೇ ಪಂದ್ಯದ ಮೂಲಕ ಕ್ರಿಕೆಟ್​ ಇತಿಹಾಸದಲ್ಲೇ ಯಾರೂ ಮಾಡಲಾಗದಂತಹ ದಾಖಲೆಯನ್ನು ಕೈಚೆಲ್ಲಿಕೊಂಡರು.

ವರ್ಲ್ಡ್​ಕಪ್ ಇತಿಹಾಸದಲ್ಲೇ ಸರ್ವಶ್ರೇಷ್ಠ ದಾಖಲೆ ಎನ್ನಲಾಗಿರುವ 673 ರನ್​ಗಳ ರೆಕಾರ್ಡ್​ ಮುರಿಯುವ ಅವಕಾಶವೊಂದು ಸೆಮಿ ಫೈನಲ್​ನಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅವರ ಮುಂದಿತ್ತು.

2003ರ ವಿಶ್ವಕಪ್​ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ನಿರ್ಮಿಸಿರುವ ರನ್​ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್​ಗೆ ಬೇಕಾಗಿದದ್ದು ಕೇವಲ 27 ರನ್​ಗಳು ಮಾತ್ರ. ಅದಾಗಲೇ ಹಿಟ್​ಮ್ಯಾನ್  ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 647 ರನ್​ ಕಲೆ ಹಾಕಿ ಟೂರ್ನಿಯಲ್ಲೇ ಅತ್ಯಧಿಕ ರನ್​ ಬಾರಿಸಿದ ಆಟಗಾರರನಾಗಿ ಅಗ್ರಸ್ಥಾನದಲ್ಲಿದ್ದರು.

ಇನ್ನು ಕಿವೀಸ್ ವಿರುದ್ಧ 12 ರನ್​ ಕಲೆ ಹಾಕಿದರೆ ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನಕ್ಕೇರುತ್ತಿದ್ದರು. ಈ ಹಿಂದೆ ಆಸ್ಟ್ರೇಲಿಯಾ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್  659 ರನ್​ಗಳನ್ನು ಬಾರಿಸಿ ದ್ವಿತೀಯ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು.

ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್​ನಿಂದ 27 ರನ್​ಗಳು ಸಿಡಿದರೆ ಸಚಿನ್​ರ 673ರನ್ ದಾಖಲೆ ನಿರ್ನಾಮವಾಗಲಿದೆ ಎಂದೇ ಹೇಳಲಾಗಿತ್ತು. ಈ ಮೂಲಕ ಭಾರತದ ಪರ ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್​ಮ್ಯಾನ್ ಪಾತ್ರವಾಗಲಿದ್ದಾರೆ ಎನ್ನಲಾಗಿತ್ತು.

ಆದರೆ ಮ್ಯಾಟ್ ಹೆನ್ರಿ ಎಸೆತದಲ್ಲಿ ವಿಕೆಟ್​ ಕೀಪರ್​ ಲಾಥಮ್​ಗೆ ಕ್ಯಾಚ್ ನೀಡಿ ರೋಹಿತ್ ಕೇವಲ 1 ರನ್​ಗೆ ನಿರ್ಗಮಿಸಿದರು. ಈ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕುವ ಅವಕಾಶವನ್ನು ಮಿಸ್ ಮಾಡಿಕೊಂಡರು.

ಅದೇ ರೀತಿ ಈ ಪಂದ್ಯದಲ್ಲಿ ರೋಹಿತ್ 53 ರನ್​ಗಳನ್ನು ಹಾಕಿದ್ದರೆ ಕ್ರಿಕೆಟ್​ ಇತಿಹಾಸದಲ್ಲೇ ಟೂರ್ನಿಯೊಂದರಲ್ಲಿ 700 ರನ್​ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಾಣವಾಗುತ್ತಿತ್ತು. ಆದರೆ ಸೆಮಿ ಫೈನಲ್​ನಲ್ಲಿ ಮುಗ್ಗರಿಸುವ ಮೂಲಕ ಟೀಂ ಇಂಡಿಯಾದ ಆಟಗಾರ ಅಂತಹದೊಂದು ಸರ್ವಶ್ರೇಷ್ಠ ದಾಖಲೆಯನ್ನು ಕೈಚೆಲ್ಲಿಕೊಂಡಿದ್ದಾರೆ. ಅಲ್ಲದೆ ಟೂರ್ನಿಯುದ್ದಕ್ಕೂ ರನ್​ ಮಳೆ ಸುರಿಸಿ ಸೋಲಿನೊಂದಿಗೆ ವಿಶ್ವಕಪ್ 2019ಗೆ ವಿದಾಯ ಹೇಳಿದ್ದಾರೆ.

First published:July 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...