ಬೆಂಗಳೂರು (ಜು. 25): ವಿಶ್ವಕಪ್ನಿಂದ ಟೀಂ ಇಂಡಿಯಾ ಹೊರ ಬೀಳುತ್ತಿದ್ದಂತೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬ ಸ್ಪೋಟಕ ಸುದ್ದಿಗಳು ಹೊರ ಬಿದ್ದಿದ್ದವು.
ಸೆಮಿ ಫೈನಲ್ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಮುಖ್ಯ ಕಾರಣ. ಇವರಿಬ್ಬರ ನಿರ್ಧಾರವೇ ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯಗಳು ತಂಡದ ಆಟಗಾರರಲ್ಲಿದೆ ಎನ್ನಲಾಗಿತ್ತು. ಟೀಂ ಇಂಡಿಯಾದ ಕೆಲ ಆಟಗಾರರು ಕೋಚ್ ಶಾಸ್ತ್ರಿಯ ಪ್ಲ್ಯಾನ್ಗಳ ಬಗ್ಗೆ ದೂಷಿಸಿದರೆ ಮತ್ತೆ ಕೆಲವರು ವಿಶ್ವಕಪ್ ಟೂರ್ನಿಯಲ್ಲಿ ನಾಯಕನ ನಿರ್ಧಾರದ ಬಗ್ಗೆ ಸಂತುಷ್ಟರಾಗಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಇಷ್ಟೇ ಅಲ್ಲದೆ ಭಾರತ ತಂಡವು ವಿಶ್ವಕಪ್ ಟೂರ್ನಿ ವೇಳೆ ಎರಡು ಗುಂಪುಗಳಾಗಿ ವಿಂಗಡನೆಯಾಗಿತ್ತು. ಒಂದಷ್ಟು ಆಟಗಾರರು ಉಪ ನಾಯಕ ರೋಹಿತ್ ಶರ್ಮಾರನ್ನು ಬೆಂಬಲಿಸುತ್ತಿದ್ದರೆ, ಕೆಲವರು ನಾಯಕ ಕೊಹ್ಲಿ ಜೊತೆಗಿದ್ದರು ಎನ್ನಲಾಗಿತ್ತು. ಜೊತೆಗೆ ಹಿಂದಿನಿಂದಲು ರೋಹಿತ್-ಕೊಹ್ಲಿ ಮಧ್ಯೆ ಒಳ ಜಗಳ ನಡೆಯುತ್ತಲೇ ಇದೆ ಎಂಬ ಸುದ್ದಿಯೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ