ಎಲ್ಲ ಮಾದರಿ ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲೂ ರೋಹಿಟ್: ಹೊಸ ದಾಖಲೆ ಬರೆದ ಹಿಟ್​ಮ್ಯಾನ್

ICC Rankings: ನಂಬರ್ 1 ಸ್ಥಾನವನ್ನು ಪಡೆಯಲು ವಿರಾಟ್ ಕೊಹ್ಲಿ ವಿಫಲರಾಗಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 937 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇನ್ನು ಕೊಹ್ಲಿ 926 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

zahir | news18-kannada
Updated:October 24, 2019, 11:04 AM IST
ಎಲ್ಲ ಮಾದರಿ ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲೂ ರೋಹಿಟ್: ಹೊಸ ದಾಖಲೆ ಬರೆದ ಹಿಟ್​ಮ್ಯಾನ್
ಇದರ ಜೊತೆ ರೋಹಿತ್ ಇನ್ನು 111 ರನ್ ಕಲೆಹಾಕಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 14000 ರನ್ ಗಳಿಸಿದ 8ನೇ ಭಾರತೀಯ ಬ್ಯಾಟ್ಸ್ಮನ್ ಎಂದ ಸಾಧನೆ ಮಾಡಲಿದ್ದಾರೆ.
  • Share this:
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಎಲ್ಲ ಮಾದರಿಯ ಕ್ರಿಕೆಟ್​ನಲ್ಲೂ ಟಾಪ್ 10 ರ‍್ಯಾಂಕ್  ಪಟ್ಟಿಯೊಳಗೆ ಕಾಣಿಸಿಕೊಂಡ ಭಾರತ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೇ ಮೊದಲ ಬಾರಿಗೆ ಟೆಸ್ಟ್​ನಲ್ಲಿ ಆರಂಭಿಕ ಆಟಗಾರನ ಪಾತ್ರದಲ್ಲಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅಮೋಘ 212 ರನ್ ಸಿಡಿಸಿದ್ದರು. ಈ ಭರ್ಜರಿ ಬ್ಯಾಟಿಂಗ್​ನಿಂದ ಐಸಿಸಿ ಟೆಸ್ಟ್ ಆಟಗಾರರ ರ‍್ಯಾಂಕಿಂಗ್​ನಲ್ಲಿ 12 ಸ್ಥಾನ ಮೇಲಕ್ಕೇರಿ 10ನೇ ಸ್ಥಾನ ತಲುಪಿದ್ದಾರೆ.

ಸದ್ಯ ರೋಹಿತ್ ಟೆಸ್ಟ್​ನಲ್ಲಿ 10ನೇ ರ್ಯಾಂಕ್ ಪಡೆದಿದ್ದರೆ, ಏಕದಿನ ಕ್ರಿಕೆಟ್​ನಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ 8ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ಟೆಸ್ಟ್​, ಏಕದಿನ ಹಾಗೂ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದರು. ಇದೀಗ ಅಂತಹದ್ದೇ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ. ಏತನ್ಮಧ್ಯೆ, ರಾಂಚಿಯಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಅಜಿಂಕ್ಯ ರಹಾನೆ ಈ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​​ನಲ್ಲಿ ಕಾಣಿಸಿಕೊಳ್ಳಲು ರವಿ ಬೆಳಗೆರೆ ಪಡೆದ ಸಂಭಾವನೆ ಇಷ್ಟೇನಾ?

ಆದರೆ ನಂಬರ್ 1 ಸ್ಥಾನವನ್ನು ಪಡೆಯಲು ವಿರಾಟ್ ಕೊಹ್ಲಿ ವಿಫಲರಾಗಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 937 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇನ್ನು ಕೊಹ್ಲಿ 926 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬೌಲರ್​ಗಳ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡಾ 839 ಅಂಕಗಳೊಂದಿಗೆ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.ಐಸಿಸಿ ಟೆಸ್ಟ್ ಶ್ರೇಯಾಂಕಗಳಲ್ಲಿ ಅಗ್ರ 5 ಆಟಗಾರರು:

ಬ್ಯಾಟ್ಸ್‌ಮನ್‌ಗಳು:
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
ವಿರಾಟ್ ಕೊಹ್ಲಿ (ಭಾರತ)
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
ಚೇತೇಶ್ವರ ಪೂಜಾರ (ಭಾರತ)
ಅಜಿಂಕ್ಯ ರಹಾನೆ (ಭಾರತ)

ಬೌಲರ್‌ಗಳು:
ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)
ಕಗಿಸೊ ರಬಡಾ (ದಕ್ಷಿಣ ಆಫ್ರಿಕಾ)
ಜೇಸನ್ ಹೋಲ್ಡರ್ (ವೆಸ್ಟ್​ ಇಂಡೀಸ್)
ಜಸ್ಪ್ರಿತ್ ಬುಮ್ರಾ (ಭಾರತ)
ಜೇಮ್ಸ್ ಅಂಡರ್ಸನ್ (ಇಂಗ್ಲೆಂಡ್)

ಆಲ್‌ರೌಂಡರ್‌ಗಳು:
ಜೇಸನ್ ಹೋಲ್ಡರ್ (ವೆಸ್ಟ್​ ಇಂಡೀಸ್)
ರವೀಂದ್ರ ಜಡೇಜಾ (ಭಾರತ)
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)
ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
ವೆರ್ನಾನ್ ಫಿಲಾಂಡರ್ (ದಕ್ಷಿಣ ಆಫ್ರಿಕಾ)Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್
First published: October 24, 2019, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading