Rohit Sharma: ನನ್ನ ಬಗ್ಗೆ ಮಾತನಾಡಿ, ನನ್ನ ಕುಟುಂಬದ ಬಗ್ಗೆ ಅಲ್ಲ; ರೋಹಿತ್ ಶರ್ಮಾ ಹೀಗೆ ಹೇಳಿದ್ದೇಕೆ?

ಐಸಿಸಿ ಕ್ರಿಕೆಟ್ ವಿಶ್ವಕಪ್ ನಡುವೆ ಟೀಂ ಇಂಡಿಯಾ ಆಟಗಾರನೊಬ್ಬ ಪತ್ನಿಯ ಜೊತೆ 15 ದಿನಗಳಿಗಿಂತ ಹೆಚ್ಚು ಕಾಲ ಜೊತೆಯಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಈರೀತಿ ಹೇಳಿಕೆ ನೀಡಿದ್ದಾರೆ.

news18-kannada
Updated:January 7, 2020, 3:23 PM IST
Rohit Sharma: ನನ್ನ ಬಗ್ಗೆ ಮಾತನಾಡಿ, ನನ್ನ ಕುಟುಂಬದ ಬಗ್ಗೆ ಅಲ್ಲ; ರೋಹಿತ್ ಶರ್ಮಾ ಹೀಗೆ ಹೇಳಿದ್ದೇಕೆ?
ರೋಹಿತ್ ಶರ್ಮಾ
  • Share this:
ಕಳೆದ ವರ್ಷ ಭಾರತೀಯ ಕ್ರಿಕೆಟ್​ನಲ್ಲಿ ದೊಡ್ಡದಾಗಿ ಸುದ್ದಿ ಆಗಿದ್ದು ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ನಡುವೆ ಬಿರುಕು ಬಿಟ್ಟಿದೆ ಎಂಬ ವಿಚಾರ. ಕೊಹ್ಲಿ ಹಾಗೂ ರೋಹಿತ್ ಮಧ್ಯೆ ಮನಸ್ಥಾಪ ಇದೆ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂಬ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಆದರೆ, ಸದ್ಯ ಈ ಎಲ್ಲ ವಿವಾದಗಳಿಗೆ ಸ್ವತಃ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ. ಇದೇ ಮೊದಲ ಬಾರಿಗೆ ಹಿಟ್​ಮ್ಯಾನ್​ ವಿವಾದದ ಬಗ್ಗೆ ಮಾತನಾಡಿದ್ದಾರೆ. ನಾನು ಮತ್ತು ಕೊಹ್ಲಿ ಅತ್ಯುತ್ತಮ ಸ್ನೇಹಿತರು​. ನಮ್ಮಿಬ್ಬರ ನಡುವೆ ನೀವು ಅಂದುಕೊಂಡಂತೆ ಏನು ಆಗಲಿಲ್ಲ ಎಂದು ಹೇಳಿದ್ದಾರೆ.

IND vs SL 2nd T20: ಟೀಂ ಇಂಡಿಯಾದಲ್ಲಿ ನಡೆಯುತ್ತಾ ಅಚ್ಚರಿಯ ಬದಲಾವಣೆ?; ಇಲ್ಲಿದೆ ಸಂಭವನೀಯ ತಂಡ

ಅಲ್ಲದೆ ಐಸಿಸಿ ಕ್ರಿಕೆಟ್ ವಿಶ್ವಕಪ್ ನಡುವೆ ಟೀಂ ಇಂಡಿಯಾ ಆಟಗಾರನೊಬ್ಬ ಪತ್ನಿಯ ಜೊತೆ 15 ದಿನಗಳಿಗಿಂತ ಹೆಚ್ಚು ಕಾಲ ಜೊತೆಯಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಈರೀತಿ ಹೇಳಿಕೆ ನೀಡಿದ್ದಾರೆ.

"ಈ ವಿಚಾರವನ್ನು ಮೊದಲು ನನಗೆ ನನ್ನ ಸ್ನೇಹಿತರು ತಿಳಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದನ್ನ ತಿಳಿಸಿದರು. ಅದಕ್ಕೆ ನಾನು ನಕ್ಕಿ ಸುಮ್ಮನಾದೆ. ನಂತರ ಇದು ದೊಡ್ಡದಾಯಿತು. ನನ್ನ ಕುಟುಂಬದವರನ್ನೂ ಇದರಲ್ಲಿ ಕರೆ ತಂದರು"

"ನನ್ನ ಕುಟುಂಬವನ್ನು ಈ ವಿಚಾರದಲ್ಲಿ ತಂದಿದ್ದಿ ನನಗೆ ತುಂಬಾ ನೋವಾಯಿತು. ನನ್ನ ಕುಟುಂಬದ ಬಗ್ಗೆ ಮಾತನಾಡುವುದು ಹಾಗೂ ನನ್ನ ಕುಟುಂಬವನ್ನ ಇದರಲ್ಲಿ ಎಳೆದು ತರುವ ಕೆಲಸ ಮಾಡಬೇಡಿ. ನನ್ನ ಬಗ್ಗೆ ಮಾತನಾಡಿ, ಆದ್ರೆ ನನ್ನ ಕುಟುಂಬದ ವಿಚಾರ ಬೇಡ" ಎಂದು ಹೇಳಿದ್ದಾರೆ.

ಈ ಸಲ ಕಪ್ ನಮ್ದೆ: ಆಸ್ಟ್ರೇಲಿಯಾದಿಂದ ಘೋಷವಾಕ್ಯ ಮೊಳಗಿಸಿದ ಆರ್​ಸಿಬಿ ಆಟಗಾರ"ಈ ವಿವಾದದಲ್ಲಿ ಅನುಷ್ಕಾ ಶರ್ಮಾ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು. ಇದರಿಂದ ಕೊಹ್ಲಿಗೂ ತುಂಬಾ ನೋವಾಗಿರಬಹುದು. ನಾವಿಬ್ಬರೂ ಒಟ್ಟಾಗಿ ದೇಶ ಸೇವೆ ಮಾಡುತ್ತಿದ್ದೇವೆ. ನಮ್ಮಿಬ್ಬರ ಸಂಬಂಧ ಹಾಳು ಮಾಡಲು ಪ್ರಯತ್ನ ಮಾಡಬೇಡಿ"

"ನನ್ನ ಕುಟುಂಬ ಪ್ರತಿಬಾರಿ ನನ್ನ ಬೆಂಬಲಕ್ಕೆ ನಿಂತಿದೆ. ನನಗೆ ಸಂತೋಷವನ್ನುಂಟು ಮಾಡಿದೆ. ಇತರರು ನನ್ನ ಬಗ್ಗೆ ಏನು ಕಾಮೆಂಟ್ ಮಾಡುತ್ತಾರೆ ನನಗೆ ಗೊತ್ತಿಲ್ಲ. ಇಂತಹ ಯಾವುದೇ ವಿಚಾರ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ರೋಹಿತ್ ಹೇಳಿದ್ದಾರೆ.

First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ