ಹೀಗ್ಯಾಕೆ ಮಾಡ್ತಾರೆ ಶಿಖರ್​ ಧವನ್​? ರೋಹಿತ್​ ಶರ್ಮಾ ಮಾಡಿದ ಈ ವಿಡಿಯೋ ಭಾರೀ ವೈರಲ್​

ರೋಹಿತ್​ ಶರ್ಮಾ ತೆಗೆದಿರುವ ವಿಡಿಯೋದಲ್ಲಿ ಶಿಖರ್​ ಧವನ್​ ನಿದ್ದೆಯಲ್ಲಿ ಮಾತನಾಡುತ್ತಿದ್ದಾರೆ. ಆರಂಭದಲ್ಲಿ ರೋಹಿತ್​ ಶರ್ಮಾ ನನ್ನೊಂದಿಗೆ ಮಾತಾನಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ.

news18-kannada
Updated:September 21, 2019, 8:38 PM IST
ಹೀಗ್ಯಾಕೆ ಮಾಡ್ತಾರೆ ಶಿಖರ್​ ಧವನ್​? ರೋಹಿತ್​ ಶರ್ಮಾ ಮಾಡಿದ ಈ ವಿಡಿಯೋ ಭಾರೀ ವೈರಲ್​
ರೋಹಿತ್​ ಶರ್ಮಾ ಮತ್ತು ಶಿಖರ್​ ಧವನ್​
  • Share this:
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್​ ಧವನ್​ ಕುರಿತಂತೆ ರೋಹಿತ್​ ಶರ್ಮಾ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರು ಮೂರನೇ ಟಿ20 ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ವಿಮಾನದಲ್ಲಿ ರೋಹಿತ್ ಶರ್ಮಾ ಅವರು  ಶಿಖರ್​ ಧವನ್​ ರ ಅವಸ್ಥೆಯನ್ನು ನೋಡಿ ವಿಡಿಯೋವನ್ನು ಮಾಡಿದ್ದಾರೆ.

ರೋಹಿತ್​ ಶರ್ಮಾ ತೆಗೆದಿರುವ ವಿಡಿಯೋದಲ್ಲಿ ಶಿಖರ್​ ಧವನ್​ ನಿದ್ದೆಯಲ್ಲಿ ಮಾತನಾಡುತ್ತಿದ್ದಾರೆ. ಆರಂಭದಲ್ಲಿ ರೋಹಿತ್​ ಶರ್ಮಾ ನನ್ನೊಂದಿಗೆ ಮಾತಾನಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಶಿಖರ್​ ನಿದ್ದೆಯ ಮಂಪರಿನಲ್ಲಿ ಮಾತಾನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

 
ಇದನ್ನೂ ಓದಿ: ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡಲು ಬಿಡೋದಿಲ್ಲ; ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​

ರೋಹಿತ್​ ತೆಗೆದಿರುವ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್​ ಮಾಡಿದ್ದಾರೆ. ಈ ವಿಡಿಯೋ ನೋಡಿದ ಯುವರಾಜ್​ ಸಿಂಗ್​ ನಗುವಿನ ಚಿನ್ಹೆ ಹಾಕಿ ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ‘ಮುಂದಿನ ಪಂದ್ಯದಲ್ಲಿ ನನ್ನನ್ನು ರನ್​​ ಔಟ್​ ಮಾಡಬೇಡಿ‘ ಎಂದು ಕಮೆಂಟ್​ ಮಾಡಿದ್ದಾರೆ.

ಇನ್ನು ಶಿಖರ್​ ಧವನ್​ ಕೂಡ ಈ ವಿಡಿಯೋಗೆ ಸ್ಪಷ್ಟಣೆ ನೀಡಿದ್ದು, ನಾನು ಶಾಯರಿವೊಂದನ್ನು ಅಭ್ಯಾಸ ಮಾಡುತ್ತಿದ್ದೆ, ಅದನ್ನು ರೋಹಿತ್​ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾರೆ. 
First published:September 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ