ಭಾರತ ತಂಡದ ಡ್ರೆಸ್ಸಿಂಗ್ ರೂಂ ರಹಸ್ಯವನ್ನು ಬಹಿರಂಗ ಪಡಿಸಿದ ರೋಹಿತ್ ಶರ್ಮಾ..!

ಈ ಮೂಲಕ ಡ್ರೆಸ್ಸಿಂಗ್​ ರೂಂನಲ್ಲಿ ಟೀಂ ಇಂಡಿಯಾ ಆಟಗಾರರು ಏನು ಮಾಡುತ್ತಾರೆ, ಯಾರಿಗೆ ಏನೆಲ್ಲಾ ಅಭ್ಯಾಸವಿದೆ ಎಂಬ ಮಾಹಿತಿಗಳನ್ನು ಹೊರ ಹಾಕಿದ್ದಾರೆ.

zahir | news18
Updated:May 30, 2019, 2:49 PM IST
ಭಾರತ ತಂಡದ ಡ್ರೆಸ್ಸಿಂಗ್ ರೂಂ ರಹಸ್ಯವನ್ನು ಬಹಿರಂಗ ಪಡಿಸಿದ ರೋಹಿತ್ ಶರ್ಮಾ..!
@dnaindia.com
  • News18
  • Last Updated: May 30, 2019, 2:49 PM IST
  • Share this:
ಏಕದಿನ ವಿಶ್ವಕಪ್‌ ಆರಂಭಕ್ಕೂ ಮುನ್ನ ಐಸಿಸಿ ಮಾಡಿರುವ ಸಂದರ್ಶನದಲ್ಲಿ ಟೀಂ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ರೂಂ ರಹಸ್ಯಗಳನ್ನು ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.  ಭಾರತ ತಂಡದ ಆರಂಭಿಕ ಆಟಗಾರ ರೋಹಿತ್​ರೊಂದಿಗೆ ತನ್ನ ಸಹಪಾಠಿಗಳ ಕುರಿತಾದ ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಸ್ಯಭರಿತವಾಗಿದ್ದ ಈ ಪ್ರಶ್ನೆಗಳಿಗೆ ಹಿಟ್​ ಮ್ಯಾನ್​, ತನ್ನ ಸಹ ಆಟಗಾರರ ಹೆಸರುಗಳನ್ನು ಸೂಚಿಸಿದ್ದಾರೆ. ಈ ಮೂಲಕ ಡ್ರೆಸ್ಸಿಂಗ್​ ರೂಂನಲ್ಲಿ ಟೀಂ ಇಂಡಿಯಾ ಆಟಗಾರರು ಏನು ಮಾಡುತ್ತಾರೆ, ಯಾರಿಗೆ ಏನೆಲ್ಲಾ ಅಭ್ಯಾಸವಿದೆ ಎಂಬ ಮಾಹಿತಿಗಳನ್ನು ಹೊರ ಹಾಕಿದ್ದಾರೆ.

ಐಸಿಸಿಯ ಪ್ರಶ್ನೆಗಳಿಗೆ ರೋಹಿತ್​ರ ಉತ್ತರ ಹೀಗಿತ್ತು:

ಅತಿ ಹೆಚ್ಚು ಸೆಲ್ಫಿ ಇಷ್ಟಪಡುವ ಆಟಗಾರ?

ಉತ್ತರ: ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾದ ಕೆಟ್ಟ ಡ್ಯಾನ್ಸರ್?
ಉತ್ತರ: ಹಾರ್ದಿಕ್ ಪಾಂಡ್ಯ

ಕರೋಕೆ ಹಾಡಲು ಮೈಕ್ ಕಿತ್ತಿಕೊಳ್ಳುವುದು? ಉತ್ತರ: ಶಿಖರ್ ಧವನ್ .

ಫ್ಲೈಟ್ ಅಪ್‌ಗ್ರೇಡ್ ಬಯಸುವವರು?
ಉತ್ತರ: ಟೀಂ ಇಂಡಿಯಾದ ಎಲ್ಲರೂ.

ರೋಮ್ಯಾಂಟಿಕ್ ಕಾಮೆಡಿ ಎಂಜಾಯ್ ಮಾಡುವವರು?
ಉತ್ತರ: ಭುವನೇಶ್ವರ್ ಕುಮಾರ್

ಕೆಟ್ಟ ರೂಮ್​ಮೇಟ್?
ಉತ್ತರ: ಶಿಖರ್ ಧವನ್, ತುಂಬಾ ಡೆರ್ಟಿ

ಗೂಗಲ್‌ನಲ್ಲಿ ತಮ್ಮನ್ನೇ ತಾವು ಹುಡುಕಾಡುವವರು?
ಉತ್ತರ: ಮತ್ತದೇ ಉತ್ತರ ಹಾರ್ದಿಕ್

ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುವವರು?
ಉತ್ತರ: ಕ್ಯಾಪ್ಟನ್ -ವಿರಾಟ್ ಕೊಹ್ಲಿ

ಕಾಫಿ ಕುಡಿಯುವ ಚಟ ಇರುವುದು?
ಉತ್ತರ: ನನಗೆ (ರೋಹಿತ್ ಶರ್ಮಾ)

ಎದ್ದೇಳುವಾಗ ಗೊಣಗಾಡುವವರು?
ಉತ್ತರ: ನಾನೇ (ರೋಹಿತ್ ಶರ್ಮಾ)

ಬಸ್‌ ಹತ್ತಲು ತಡವಾಗಿ ಬರುವವರು?
ಉತ್ತರ: ಆತ ತಂಡದ ಆಟಗಾರನಲ್ಲ. ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್

ಯಾವತ್ತೂ ಫೋನ್​ನಲ್ಲಿರುವವರು?
ಉತ್ತರ: ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ

First published:May 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ