ರೋಹಿತ್ ಶರ್ಮಾ ಮುಂದಿದೆ 3 ವಿಶ್ವದಾಖಲೆಗಳು: ಲಂಕಾ ವಿರುದ್ಧ ಸಚಿನ್ ದಾಖಲೆಗಳು ಉಡೀಸ್?

ICC World cup 2019: ಹಾಗೆಯೇ ವಿಶ್ವಕಪ್​ ಟೂರ್ನಿಯ ಲೀಗ್​ ಹಂತದಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ದಾಖಲೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಆದರೆ ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಕೀಬ್​ ಅಲ್ ಹಸನ್ 606 ರನ್​ ಸಿಡಿಸುವ ಮೂಲಕ ಸಚಿನ್​ರ 586 ರನ್​ಗಳ ದಾಖಲೆ ಮುರಿದಿದ್ದರು.

zahir | news18
Updated:July 6, 2019, 3:12 PM IST
ರೋಹಿತ್ ಶರ್ಮಾ ಮುಂದಿದೆ 3 ವಿಶ್ವದಾಖಲೆಗಳು: ಲಂಕಾ ವಿರುದ್ಧ ಸಚಿನ್ ದಾಖಲೆಗಳು ಉಡೀಸ್?
Rohit Sharma
  • News18
  • Last Updated: July 6, 2019, 3:12 PM IST
  • Share this:
ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ವಿಶ್ವಕಪ್​ನಲ್ಲಿ 4 ಶತಕ ಹಾಗೂ ಒಂದು ಅರ್ಧಶತಕ ಸಿಡಿದಿವೆ. ಈಗಾಗಲೇ ಭಾರತದ ಪರ ಒಂದೇ ವಿಶ್ವಕಪ್​ನಲ್ಲಿ 4 ಶತಕ ಸಿಡಿಸಿದ ಆಟಗಾರನೆಂಬ ಹೆಗ್ಗಳಿಕೆ ಪಡೆದಿರುವ ರೋಹಿತ್ ಮುಂದಿದೆ ಇನ್ನು 3 ವಿಶ್ವದಾಖಲೆ ಬರೆಯುವ ಅವಕಾಶ.

ಟೂರ್ನಿಯಲ್ಲಿ 544 ರನ್​ಗಳೊಂದಿಗೆ ಅತ್ಯಧಿಕ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರೋಹಿತ್ ಬ್ಯಾಟ್​ನಿಂದ ಇನ್ನೊಂದು ಶತಕ ಮೂಡಿ ಬಂದರೆ ಶ್ರೀಲಂಕಾ ಆಟಗಾರ ಕುಮಾರ ಸಂಗಾಕ್ಕರ ಹೆಸರಿನಲ್ಲಿರುವ ದಾಖಲೆ ಬದಿಗೆ ಸರಿಯಲಿದೆ. 2015ರ ವಿಶ್ವಕಪ್​ನಲ್ಲಿ 4 ಶತಕಗಳನ್ನು ಬಾರಿಸಿ ಸಂಗಾಕ್ಕರ ವಿಶ್ವದಾಖಲೆಯನ್ನು ಬರೆದಿದ್ದರು. ಈ ದಾಖಲೆಯನ್ನು ಇದೀಗ ರೋಹಿತ್ ಸರಿಗಟ್ಟಿದ್ದು, ಲಂಕಾ ವಿರುದ್ದದ ಪಂದ್ಯದಲ್ಲೇ ಶ್ರೀಲಂಕಾ ಆಟಗಾರನ ದಾಖಲೆ ಅಳಿಸಿ ಹಾಕುವ ಚಾನ್ಸ್​ ಹಿಟ್​ಮ್ಯಾನ್​ಗೆ ಒದಗಿ ಬಂದಿದೆ. ಈ ಮೂಲಕ ವಿಶ್ವಕಪ್​ವೊಂದರಲ್ಲಿ 5 ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ಕೀರ್ತಿ ರೋಹಿತ್​ಗೆ ಪಾಲಾಗಲಿದೆ.

ಇನ್ನು 130 ರನ್​ಗಳಿಸಿದರೆ ಮಾಸ್ಟರ್​ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ವಿಶ್ವಕಪ್​ ಟೂರ್ನಿಯ ಅತ್ಯಧಿಕ ರನ್ ದಾಖಲೆ ರೋಹಿತ್ ಹೆಸರಿಗೆ ಬರಲಿದೆ. ಸದ್ಯ 544 ರನ್​ ಬಾರಿಸಿರುವ ಹಿಟ್​ಮ್ಯಾನ್ ಮುಂದಿರುವುದು 673 ರನ್​ಗಳ ಗುರಿ. ಇಲ್ಲಿ ರೋಹಿತ್​ಗೆ ಲಂಕಾ ವಿರುದ್ಧದ ಪಂದ್ಯದಲ್ಲಿ ಹಾಗೂ ಸೆಮಿ ಫೈನಲ್​ನಲ್ಲಿ ಬ್ಯಾಟಿಂಗ್ ಅವಕಾಶ ಸಿಗುವುದರಿಂದ ಸಚಿನ್ ದಾಖಲೆಯನ್ನು ಅಳಿಸಿ ಹಾಕುವ ಸಾಧ್ಯತೆ ಹೆಚ್ಚಿದೆ.

ಹಾಗೆಯೇ ವಿಶ್ವಕಪ್​ ಟೂರ್ನಿಯ ಲೀಗ್​ ಹಂತದಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ದಾಖಲೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಆದರೆ ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಕೀಬ್​ ಅಲ್ ಹಸನ್ 606 ರನ್​ ಸಿಡಿಸುವ ಮೂಲಕ ಸಚಿನ್​ರ 586 ರನ್​ಗಳ ದಾಖಲೆ ಮುರಿದಿದ್ದರು.

ಇದೀಗ ಕೊನೆಯ ಲೀಗ್ ಹಂತದ ಪಂದ್ಯವಾಡುತ್ತಿರುವ ರೋಹಿತ್ 63 ರನ್​ಗಳಿಸಿದರೆ ಈ ದಾಖಲೆ ತಮ್ಮ ಹೆಸರಿಗೆ ಬರಲಿದೆ. ಹಾಗೆಯೇ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಅಗ್ರಸ್ಥಾನಕ್ಕೇರಲಿದ್ದಾರೆ.
First published: July 6, 2019, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading