ಸಚಿನ್ ದಾಖಲೆ ಛಿದ್ರ: ವಿಶ್ವಕಪ್​ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ರೋಹಿತ್ ಶರ್ಮಾ

ಶಕೀಬ್ ಬರೆದಿದ್ದ ದಾಖಲೆಯನ್ನು ಇದೀಗ ರೋಹಿತ್ ಶರ್ಮಾ ಮುರಿದಿದ್ದಾರೆ. ಈಗಾಗಲೇ ವಿಶ್ವಕಪ್​ನಲ್ಲಿ 610 ರನ್​ಗಳನ್ನು ದಾಟಿರುವ ಹಿಟ್​ಮ್ಯಾನ್ ಲೀಗ್ ಹಂತದಲ್ಲಿ 600ಕ್ಕೂ ಹೆಚ್ಚಿನ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • News18
  • Last Updated :
  • Share this:
ವಿಶ್ವಕಪ್​ನಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾರ ದಾಖಲೆಯ ಆರ್ಭಟ ಮುಂದುವರೆದಿದೆ. ಕೆಲ ದಿನಗಳ ಹಿಂದೆಯಷ್ಟೇ ನಾಲ್ಕು ಶತಕ ಸಿಡಿಸಿ ಸೌರವ್​ ಗಂಗೂಲಿ ದಾಖಲೆ ನಿರ್ನಾಮ ಮಾಡಿದ್ದ ರೋಹಿತ್, ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಈ ಹಿಂದೆ ವಿಶ್ವಕಪ್​ ಟೂರ್ನಿಯ ಲೀಗ್​ ಹಂತದ ಪಂದ್ಯದಲ್ಲಿ ಅತ್ಯಧಿಕ ರನ್ ಸಿಡಿಸಿದ ದಾಖಲೆಯನ್ನು ಸಚಿನ್ ತೆಂಡೂಲ್ಕರ್​ ಬರೆದಿದ್ದರು. 2003ರ ವಿಶ್ವಕಪ್​ ವೇಳೆ ಸಚಿನ್ 586 ರನ್ ಕಲೆ ಹಾಕಿದ್ದರು. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ 64 ರನ್​ ಸಿಡಿಸುವ ಮೂಲಕ ಲೀಗ್ ಹಂತದಲ್ಲಿ 606 ರನ್​ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

ಶಕೀಬ್ ಬರೆದಿದ್ದ ದಾಖಲೆಯನ್ನು ಇದೀಗ ರೋಹಿತ್ ಶರ್ಮಾ ಮುರಿದಿದ್ದಾರೆ. ಈಗಾಗಲೇ ವಿಶ್ವಕಪ್​ನಲ್ಲಿ 610 ರನ್​ಗಳನ್ನು ದಾಟಿರುವ ಹಿಟ್​ಮ್ಯಾನ್ ಲೀಗ್ ಹಂತದಲ್ಲಿ 600ಕ್ಕೂ ಹೆಚ್ಚಿನ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಲದೆ ವಿಶ್ವಕಪ್​ನ ಲೀಗ್ ಹಂತದಲ್ಲಿ ಗರಿಷ್ಠ ರನ್ ಬಾರಿಸಿದ ಸಚಿನ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹಾಗೆಯೇ ವಿಶ್ವಕಪ್ ಇತಿಹಾಸದಲ್ಲಿ 600ರನ್​ ಬಾರಿಸಿದ ಆಟಗಾರರ ಪಟ್ಟಿಗೆ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದಾರೆ. 2003 ರಲ್ಲಿ ಸಚಿನ್ 673 ರನ್​ ಬಾರಿಸಿದರೆ, 2007 ರಲ್ಲಿ ಮ್ಯಾಥ್ಯೂ ಹೇಡನ್ 659 ರನ್ ಸಿಡಿಸಿದ್ದರು. ಅದೇ ರೀತಿ 606 ರನ್​ಗಳೊಂದಿಗೆ ಶಕೀಬ್  ಅಲ್​ ಹಸನ್ ಎಂಟ್ರಿ ಕೊಟ್ಟಿದ್ದರು.

ಇದೀಗ ಈ ಆರು ನೂರರ ಎಲೈಟ್​ ಗ್ರೂಪ್​ನಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ.  ಈ ಮೂಲಕ ವಿಶ್ವಕಪ್​ನಲ್ಲಿ 600 ಪ್ಲಸ್ ಬಾರಿಸಿದ ಭಾರತದ 2ನೇ ಹಾಗೂ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಆಟಗಾರ ಪಾತ್ರರಾಗಿದ್ದಾರೆ. ಇನ್ನು ಈ ಬಾರಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 610+ ರನ್​ಗಳೊಂದಿಗೆ ರೋಹಿತ್ ಮುಂಚೂಣಿಯಲ್ಲಿದ್ದಾರೆ.

First published: