ರನ್ ಮೆಷಿನ್ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರೋಹಿತ್ ಶರ್ಮಾ!

Virat Kohli-Rohit Sharma: ಭಾರತ ಪರ 2019ರಲ್ಲಿ ಗರಿಷ್ಠ ರನ್ ಕಲೆಹಾಕಿದ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 20 ಪಂದ್ಯಗಳಲ್ಲಿ 1054 ರನ್ ಬಾರಿಸಿ 2ನೇ ಸ್ಥಾನ ಅಲಂಕರಿಸಿದ್ದಾರೆ.

Vinay Bhat | news18
Updated:July 26, 2019, 4:04 PM IST
ರನ್ ಮೆಷಿನ್ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ
  • News18
  • Last Updated: July 26, 2019, 4:04 PM IST
  • Share this:
ಬೆಂಗಳೂರು (ಜು. 26): ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ 2019ರ ಏಕದಿನ ಪಂದ್ಯಗಳಲ್ಲಿ ಭಾರತ ಪರ ಅತಿ ಹೆಚ್ಚು ರನ್​ ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಚ್ಚರಿ ಎಂದರೆ ರನ್​ ಮಷಿನ್​ ವಿರಾಟ್​ ಕೊಹ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿಶ್ವಕಪ್​ನಲ್ಲಿ ಹಿಟ್​ಮ್ಯಾನ್​ ರೋಹಿತ್​ ಶೇ 92.42 ಸರಾಸರಿಯಲ್ಲಿ 647 ರನ್​ಗಳನ್ನ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 2019ರಲ್ಲಿ ಒಟ್ಟು 22 ಪಂದ್ಯಗಳನ್ನಾಡಿರುವ ರೋಹಿತ್ 57.33 ಸರಾಸರಿಯಲ್ಲಿ 1204 ರನ್ ಗಳಿಸಿದ್ದಾರೆ. ಆ ಮೂಲಕ ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ರನ್ ಗಳಿಸಿ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.

ಭಾರತ ಪರ 2019ರಲ್ಲಿ ಗರಿಷ್ಠ ರನ್ ಕಲೆಹಾಕಿದ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 20 ಪಂದ್ಯಗಳಲ್ಲಿ 1054 ರನ್ ಬಾರಿಸಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಂ ಎಸ್ ಧೋನಿಯಿದ್ದರೆ, 4 ಹಾಗೂ 5ನೇ ಸ್ಥಾನದಲ್ಲಿ ಕ್ರಮವಾಗಿ ಶಿಖರ್ ಧವನ್ ಹಾಗೂ ಕೆ ಎಲ್ ರಾಹುಲ್ ಇದ್ದಾರೆ.

ಕೊಹ್ಲಿ-ರೋಹಿತ್ ಜಗಳ; ಟೀಂ ಇಂಡಿಯಾ ಬೌಲಿಂಗ್ ಕೋಚ್ ಹೇಳುವುದೇ ಬೇರೆ!

2019 Indian Top 5 Batsmans
2019ರ ಸಾಲಿನಲ್ಲಿ ಭಾರತ ಪರ ಗರಿಷ್ಠ ರನ್ ಕಲೆಹಾಕಿದ ಟಾಪ್ 5 ಬ್ಯಾಟ್ಸ್​ಮನ್​ಗಳು


ಒಟ್ಟಾರೆಯಾಗಿ 2019ರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದವರ ಪೈಕಿ ಮೊದಲ ಸ್ಥಾನ ರೋಹಿತ್​ಗಿದ್ದರೆ, ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಇದ್ದು, 23 ಪಂದ್ಯಗಳಿಂದ ಫಿಂಚ್ 1141 ರನ್ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿ ಆಸೀಸ್​ನ ಮತ್ತೊಬ್ಬ ಆಟಗಾರ ಉಸ್ಮಾನ್ ಖ್ವಾಜಾ ಇದ್ದು, 22 ಪಂದ್ಯಗಳಿಂದ 1085 ರನ್ ಗಳಿಸಿದ್ದಾರೆ. ನಾಲ್ಕನೇ ಸ್ಥಾನವಲ್ಲಿ ಕೊಹ್ಲಿ ಅಲಂಕರಿಸಿದ್ದಾರೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading