Deep Dasgupta: ವಿರಾಟ್ ಕೊಹ್ಲಿ ಸ್ಥಾನಕ್ಕೆ ರೋಹಿತ್ ಶರ್ಮಾ ಬರಲಿದ್ದಾರೆ..!

ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿದಾಗಿನಿಂದ, ಭಾರತೀಯ ತಂಡದ ಸಾಧನೆ ತುಂಬಾ ಉತ್ತಮವಾಗಿದೆ. ಐಸಿಸಿ ಪಂದ್ಯಾವಳಿಗಳಲ್ಲೂ ಭಾರತ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ.

rohit-virat

rohit-virat

 • Share this:
  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಚರ್ಚೆಗಳು ಮುಂದುವರೆದಿದೆ. ಮುಂಬರುವ ಟಿ 20 ವಿಶ್ವಕಪ್ ಕೊಹ್ಲಿಯ ನಾಯಕತ್ವದ ಭವಿಷ್ಯವನ್ನು ನಿರ್ಧರಿಸಲಿದೆ ಎಂದಿದ್ದಾರೆ ಭಾರತದ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್‌ ಗುಪ್ತಾ. ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಸೋತರೆ, ಕೊಹ್ಲಿ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

  ವಿರಾಟ್ ಕೊಹ್ಲಿ ಇದುವರೆಗೆ ಮೂರು ಐಸಿಸಿ ಟೂರ್ನಿಗಳಲ್ಲಿ ನಾಯಕನಾಗಿ ಭಾರತವನ್ನು ಮುನ್ನಡೆಸಿದ್ದಾರೆ. ಅದರಲ್ಲಿ ಎರಡು ಬಾರಿ ಫೈನಲ್ ತಲುಪಿದ್ದಾರೆ. ಆದರೆ ಕೊಹ್ಲಿ ನಾಯಕತ್ವದಲ್ಲಿ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ತಂಡಕ್ಕೆ ಇನ್ನೂ ಸಾಧ್ಯವಾಗಿಲ್ಲ. ಟಿ20 ವಿಶ್ವಕಪ್ 2021 ರ ಫಲಿತಾಂಶವು ಕೊಹ್ಲಿಯ ನಾಯಕತ್ವದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಒಂದು ವೇಳೆ ಟಿ20 ವಿಶ್ವಕಪ್​ನಲ್ಲಿ ಸೋತರೆ ನಾಯಕತ್ವ ಕೈತಪ್ಪಲಿದೆ. ಅಲ್ಲದೆ ನಾಯಕತ್ವಕ್ಕಾಗಿ ಅಗ್ರ ಸ್ಪರ್ಧಿಗಳಲ್ಲಿ ರೋಹಿತ್ ಶರ್ಮಾ ಒಬ್ಬರು ಎಂದು ದೀಪ್​ ದಾಸ್ ಗುಪ್ತಾ ತಿಳಿಸಿದ್ದಾರೆ.

  ಈ ಮೊದಲು ರೋಹಿತ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಮತ್ತು ಪೂರ್ಣ ಪ್ರಮಾಣ ನಾಯಕನ ನಡುವೆ ವ್ಯತ್ಯಾಸವಿದೆ. ಏಕೆಂದರೆ ಹಂಗಾಮಿ ನಾಯಕರಾದ ಯಾರು ಕೂಡ ಹೆಚ್ಚು ಬದಲಾವಣೆ ಬಯಸುವುದಿಲ್ಲ. ನೀವು ಪೂರ್ಣ ಪ್ರಮಾಣದ ನಾಯಕರಾಗಿದ್ದಾಗ, ನೀವು ಕೆಲ ಬದಲಾವಣೆಗಳನ್ನು ಮಾಡಲು ಬಯಸುತ್ತೀರಿ. ಏಕೆಂದರೆ ನೀವು ತಂಡವನ್ನು ನಿಮ್ಮ ರೀತಿಯಲ್ಲಿ ಮುನ್ನಡೆಸಲು ಬಯಸುತ್ತೀರಿ ಎಂದು ದೀಪ್ ದಾಸ್ ಗುಪ್ತಾ ವಿವರಿಸಿದರು.

  ಇದಾಗ್ಯೂ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿದಾಗಿನಿಂದ, ಭಾರತೀಯ ತಂಡದ ಸಾಧನೆ ತುಂಬಾ ಉತ್ತಮವಾಗಿದೆ. ಐಸಿಸಿ ಪಂದ್ಯಾವಳಿಗಳಲ್ಲೂ ಭಾರತ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ. ಆದರೆ ಫೈನಲ್ಸ್ ಮತ್ತು ಸೆಮಿಫೈನಲ್‌ನಂತಹ ಪ್ರಮುಖ ಪಂದ್ಯಗಳಲ್ಲಿ ಆಗುತ್ತಿರುವ ತಪ್ಪುಗಳೇ ಇದೀಗ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇದಕ್ಕೆ ಇತ್ತೀಚಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಕೂಡ ಹೊರತಾಗಿರಲಿಲ್ಲ. ವಿರಾಟ್ ವೇಗಿಗಳ ಹೊರತಾಗಿಯೂ ತಂಡದಲ್ಲಿ ಇಬ್ಬರು ಸ್ಪಿನ್ ಬೌಲರ್‌ಗಳನ್ನು ಆಯ್ಕೆ ಮಾಡಿಕೊಂಡರು. ಇದು ಕೂಡ ಸೋಲಿಗೆ ಕಾರಣವಾಯ್ತು ಎಂದು ದೀಪ್ ದಾಸ್ ಗುಪ್ತಾ ತಿಳಿಸಿದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: