ಇನ್​ಸ್ಟಾಗ್ರಾಂನಲ್ಲಿ ಹಿಟ್​ಮ್ಯಾನ್ ಮತ್ತೆ ಎಡವಟ್ಟು; ಈ ಬಾರಿ ರೋಹಿತ್ ಮಾಡಿದ್ದೇನು ಗೊತ್ತಾ?

ಈ ಹಿಂದೆ ಟ್ವಟ್ಟರ್​​ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಅನ್​ಫಾಲೋ ಮಾಡಿ ರೋಹಿತ್ ಸುದ್ದಿಯಾಗಿದ್ದರು. ಸದ್ಯ ಕೊಹ್ಲಿ ಆಪ್ತ ಸ್ನೇಹಿತ ರಾಹುಲ್​ ವಿಚಾರದಲ್ಲೂ ರೋಹಿತ್ ಇಕ್ಕಟ್ಟಿಗೆ ಸಿಲುಕಿದ್ದಾರೆ.

ರೋಹಿತ್ ಶರ್ಮಾ, ಕೆ ಎಲ್ ರಾಹುಲ್

ರೋಹಿತ್ ಶರ್ಮಾ, ಕೆ ಎಲ್ ರಾಹುಲ್

  • Share this:
ಬೆಂಗಳೂರು (ಸೆ. 01): 2013 ರಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ​ಪಂದ್ಯ ಆಡುವ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟ ರೋಹಿತ್ ಶರ್ಮಾ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಬ್ಯಾಟ್ ಬೀಸಿದ ಹಿಟ್​ಮ್ಯಾನ್ ಅಪರೂಪಕ್ಕೆ ಟೆಸ್ಟ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದರಷ್ಟೆ. 2019 ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಪರಿಣಾಮ ರೋಹಿತ್ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆಯಾದರು.

ಹೀಗಾಗಿ ರೋಹಿತ್ ಮತ್ತೆ ಟೆಸ್ಟ್​ ಕ್ರಿಕೆಟ್​​ಗೆ ಕಮ್​ಬ್ಯಾಕ್ ಮಾಡಬೇಕೆಂಬ ಹಂಬಲಹೊಂದಿದ್ದರು. ಅದರಂತೆ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ, ರೋಹಿತ್ ಆಯ್ಕೆ ಆಗಿದ್ದಷ್ಟೆ ಬಿಟ್ಟರೆ ಎರಡೂ ಟೆಸ್ಟ್​​ನಲ್ಲಿ ಅವಕಾಶ ಪಡೆಯಲಿಲ್ಲ.

ಇದರಿಂದ ಹಿಟ್​ಮ್ಯಾನ್ ಅಭಿಮಾನಿಗಳು ಬೇಸರ ಕೂಡ ವ್ಯಕ್ತ ಪಡಿಸಿದ್ದರು. ಪದೇಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಬೆಸ್ಟ್​ ಫ್ರೆಂಡ್ ಕೆ ಎಲ್ ರಾಹುಲ್​ಗೆ ಅವಕಾಶ ನೀಡುವುದು ಬಿಟ್ಟು ರೋಹಿತ್​ರನ್ನು ಆಡಿಸಿ ಎಂಬ ಕೂಗು ಕೇಳಿಬರುತ್ತಿತ್ತು.

ಇಶಾಂತ್ ಶರ್ಮಾ ಚೊಚ್ಚಲ ಅರ್ಧಶತಕ; ಡ್ರೆಸ್ಸಿಂಗ್ ರೂಮ್​ನಲ್ಲಿ ಕೊಹ್ಲಿ ಮಾಡಿದ್ದೇನು ನೋಡಿ!

ಅಲ್ಲದೆ ಅಭಿಮಾನಿಗಳು ಇನ್​ಸ್ಟಾಗ್ರಾಂನಲ್ಲಿ ರೋಹಿತ್ ಹಾಗೂ ಕೆ ಎಲ್ ರಾಹುಲ್​ರ ಟೆಸ್ಟ್​ ಕ್ರಿಕೆಟ್​ನ ಅಂಕಿಅಂಶಗಳನ್ನು ಹಾಕಿ ರೋಹಿತ್ ಅತ್ಯುತ್ತಮ ಆಟಗಾರ ಎಂದು ಬಿಂಬಿಸಿದ್ದಾರೆ. ಈ ರೀತಿ ಇರುವ ಪೋಸ್ಟ್​ಗೆ ರೋಹಿತ್ ಶರ್ಮಾ ಲೈಕ್ ಕೊಟ್ಟಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Rohit Sharma controversially likes a dig taken at KL Rahul
ರೋಹಿತ್ ಶರ್ಮಾ ಲೈಕ್ ಕೊಟ್ಟಿರುವುದು


ಈ ಹಿಂದೆ ಟ್ವಿಟ್ಟರ್​​ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಅನ್​ಫಾಲೋ ಮಾಡಿ ರೋಹಿತ್ ಸುದ್ದಿಯಾಗಿದ್ದರು. ಸದ್ಯ ಕೊಹ್ಲಿ ಆಪ್ತ ಸ್ನೇಹಿತ ರಾಹುಲ್​ ವೈಫಲ್ಯ ಕಂಡರೂ ಅವಕಾಶ ನೀಡುತ್ತಿರುವುದು ಏಕೆ?, ರೋಹಿತ್​ಗೆ ಅವಕಾಶ ನೀಡಿ ಎಂಬರ್ಥದಲ್ಲಿರುವ ಪೋಸ್ಟ್​ಗೆ ರೋಹಿತ್ ಲೈಕ್ ಮಾಡಿ ಸುದ್ದಿಯಲ್ಲಿದ್ದಾರೆ. ಅಲ್ಲದೆ ರೋಹಿತ್ ಬೇಕಂತಲೆ ವಿವಾದವನ್ನು ತಮ್ಮ ಮೈಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

  

First published: