Video: ಸ್ಟೀವ್ ಸ್ಮಿತ್ ಕಳ್ಳಾಟವನ್ನು ಕಾಲೆಳೆದ ರೋಹಿತ್ ಶರ್ಮಾ..!

ಭಾರತ-ಆಸ್ಟ್ರೇಲಿಯಾ ನಡುವಣ ಅಂತಿಮ ಟೆಸ್ಟ್ ಕುತೂಹಲಘಟ್ಟದತ್ತ ಸಾಗಿದೆ. ಭಾನುವಾರ 33 ರನ್​ಗಳ ಅಲ್ಪ ಮುನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 294 ರನ್​ಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು 328 ರನ್​ಗಳ ಟಾರ್ಗೆಟ್ ನೀಡಿದೆ. ಇನ್ನು ಒಂದು ದಿನದಾಟ ಉಳಿದಿದ್ದು, ಭಾರತಕ್ಕೆ ಗೆಲುವಿನ ಅವಕಾಶವಿದೆ.

india vs australia

india vs australia

  • Share this:
    ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಅಂತಿಮ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆಯಿತು. ಒಂದೆಡೆ ಅನಾನುಭವಿ ಬೌಲಿಂಗ್ ಪಡೆಯನ್ನು ಮುನ್ನಡೆಸಿದ ಮೊಹಮ್ಮದ್ ಸಿರಾಜ್ ಚೊಚ್ಚಲ ಬಾರಿ 5 ವಿಕೆಟ್ ಕಬಳಿಸಿ ಮಿಂಚಿದ್ರೆ, ಮತ್ತೊಂದೆಡೆ ಆಸ್ಟ್ರೇಲಿಯಾದ ಐದು ಕ್ಯಾಚ್​ಗಳನ್ನು ಹಿಡಿಯುವ ಮೂಲಕ ರೋಹಿತ್ ಶರ್ಮಾ ವಿಶೇಷ ಸಾಧನೆಗೈದರು.

    ಇನ್ನೊಂದೆಡೆ ರೋಹಿತ್ ಶರ್ಮಾ ಮೈದಾನದಲ್ಲೇ ಸ್ಟೀವ್ ಸ್ಮಿತ್ ಅವರನ್ನು ಕಾಲೆಳೆಯುವ ಮೂಲಕ ಗಮನ ಸೆಳೆದರು. ಹೌದು, ಸಿಡ್ನಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಭಾರತದ 2ನೇ ಇನಿಂಗ್ಸ್​ ವೇಳೆ ಕ್ರೀಸ್​ ಮಧ್ಯೆ ಪ್ರವೇಶಿಸಿದ್ದರು. ಅಷ್ಟೇ ಅಲ್ಲದೆ ರಿಷಭ್ ಪಂತ್ ಎಳೆದಿದ್ದ ಗಾರ್ಡ್ ಲೈನ್​ ಅನ್ನು ಶೂನಿಂದ ಅಳಿಸಿ ಹಾಕಲು ಯತ್ನಿಸಿದ್ದರು. ಈ ವಿಡಿಯೋ ಸ್ಟಂಪ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ಸ್ಮಿತ್ ಅವರ ಈ ನಡೆಯನ್ನು ಮೋಸದಾಟ, ಕಳ್ಳಾಟ ಎಂದು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು.

    ಈ ವಿಷಯ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಸ್ಟೀವ್ ಸ್ಮಿತ್ ಸದಾ ಬ್ಯಾಟಿಂಗ್ ಬಗ್ಗೆಯೇ ಯೋಚಿಸುತ್ತಾರೆ. ಹೀಗಾಗಿ ಅವರು ಫೀಲ್ಡಿಂಗ್ ವೇಳೆ ಕ್ರೀಸ್​ಗೆ ತೆರಳಿ, ಗಾರ್ಡ್​ ಲೈನ್ ಎಳೆದಿದ್ದರು ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್, ನಾಯಕ ಟಿಮ್ ಪೈನ್ ಸಮಜಾಯಿಷಿ ನೀಡಿದ್ದರು.

    ಇತ್ತ ನಾಲ್ಕನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನ ಕೂಡ ಅಂತಹದ್ದೇ ಘಟನೆ ಜರುಗಿತು. ಆದರೆ ಈ ಬಾರಿ ಕ್ರೀಸ್​ನಲ್ಲಿದ್ದ ಫೀಲ್ಡರ್ ರೋಹಿತ್ ಶರ್ಮಾ ಎಂಬುದು ವಿಶೇಷ. ಡ್ರಿಂಕ್ಸ್ ಬ್ರೇಕ್ ವೇಳೆ ಕ್ರೀಸ್​ಗೆ ಆಗಮಿಸಿದ ರೋಹಿತ್, ಬ್ಯಾಟಿಂಗ್ ಅಭ್ಯಾಸಿಸುವಂತೆ ನಟಿಸಿದರು. ಅತ್ತ ಪಿಚ್​ನಲ್ಲಿದ್ದ ಸ್ಟೀವ್ ಸ್ಮಿತ್ ಕೂಡ ಅದನ್ನೇ ವೀಕ್ಷಿಸುತ್ತಿದ್ದರು.



    ಮೇಲ್ನೋಟಕ್ಕೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸ್ಟೀವ್ ಸ್ಮಿತ್‌ರನ್ನು ಅಪಹಾಸ್ಯ ಮಾಡಲೆಂದೇ ಬ್ಯಾಟಿಂಗ್ ಅಭ್ಯಾಸಿಸುವಂತೆ ನಟಿಸಿದ್ದರು. ಏಕೆಂದರೆ ಓಪನರ್ ಸ್ಟ್ರೈಕರ್‌ನ ತುದಿಯತ್ತ ಸ್ಮಿತ್ ಕೂಡ ನಿಂತಿದ್ದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
    Published by:zahir
    First published: