ಹಿಟ್ಮ್ಯಾನ್ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಆಡುವಾಗ ಇಂಜುರಿ ಸಮಸ್ಯೆಗೆ ತುತ್ತಾಗಿದ್ದರು. ಇದೇ ಕಾರಣಕ್ಕೆ ಅವರನ್ನು ಆಸ್ಟ್ರೇಲಿಯಾ ಟೂರ್ನಿಂದ ಹೊರಗಿಡಲಾಗಿದೆ ಎನ್ನಲಾಗಿತ್ತು. ಈ ಮಧ್ಯೆ ಅವರು ಮುಂಬೈ ಪರ ಆಡಿದ್ದು ಸಾಕಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಈಗ ಈ ಎಲ್ಲ ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ.
ಪಿಟಿಐ ಜೊತೆ ನಡೆಸಿದ ವಿಸ್ತೃತ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ನನಗೆ ಬೇರೆಯವರು ಏನು ಹೇಳುತ್ತಾರೆ ಎನ್ನುವ ವಿಚಾರ ಬೇಡ. ನಾನು ಅದನ್ನು ಕೇಳಿಸಿಕೊಳ್ಳುವುದೂ ಇಲ್ಲ ಎಂದಿದ್ದಾರೆ. ಈ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ಇನ್ನು, ಇಂಜುರಿ ವಿಚಾರದ ಬಗ್ಗೆ ಮಾತನಾಡಿರುವ ಅವರು, ನನ್ನ ಗಾಯದ ಸಮಸ್ಯೆ ಸಂಪೂರ್ಣವಾಗಿ ವಾಸಿ ಆಗಿಲ್ಲ. ಟಿ20 ಅನ್ನೋದು ಕಡಿಮೆ ಅವಧಿಯ ಗೇಮ್. ಹೀಗಾಗಿ ಅದನ್ನು ಸುಲಭವಾಗಿ ಆಡಬಹುದು. ಆದರೆ, ಏಕದಿನ ಪಂದ್ಯಗಳನ್ನಾಡುವಾಗ ಅದಕ್ಕೆ ಹೆಚ್ಚಿನ ಸಿದ್ಧತೆ ಬೇಕು. ಹೀಗಾಗಿ, ನಾನು ಐಪಿಎಲ್ನಲ್ಲಿ ಆಡಿದ್ದೆ ಮತ್ತು ಏಕದಿನ ಪಂದ್ಯಗಳನ್ನಾಡಲಿಲ್ಲ. ನನಗೆ ಈ ಗಾಯದ ಸಮಸ್ಯೆಯಿಂದ ಹೊರ ಬರಲು ಕನಿಷ್ಠ 25 ದಿನಗಳ ಅವಶ್ಯಕತೆ ಬೇಕೆನ್ನಿಸಿತು. ಹೀಗಾಗಿ, ನಾನು ಏಕದಿನ ಪಂದ್ಯ ಹಾಗೂ ಟಿ20 ಆಡಲು ಒಪ್ಪಿಲ್ಲ ಎಂದಿದ್ದಾರೆ ರೋಹಿತ್ ಶರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ