ಭಾರತ-ಆಸ್ಟ್ರೇಲಿಯಾ ನಡುವಣ ಅಂತಿಮ ಟೆಸ್ಟ್ ಕುತೂಹಲಘಟ್ಟದತ್ತ ಮುಖ ಮಾಡಿದೆ. ಭಾನುವಾರ 33 ರನ್ಗಳ ಅಲ್ಪ ಮುನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 294 ರನ್ಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು 328 ರನ್ಗಳ ಟಾರ್ಗೆಟ್ ನೀಡಿದೆ. ಇನ್ನು ಒಂದು ದಿನದಾಟ ಉಳಿದಿದ್ದು, ಭಾರತಕ್ಕೆ ಗೆಲುವಿನ ಅವಕಾಶವಿದೆ. ಆದರೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುತ್ತಿರುವುದರಿಂದ ಅಂತಿಮ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಾಣುವ ಸಾಧ್ಯತೆ ಹೆಚ್ಚಿದೆ.
ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಮಾರಕ ಬೌಲಿಂಗ್ಗೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಸಿರಾಜ್ ಚೊಚ್ಚಲ ಬಾರಿ ಟೆಸ್ಟ್ನಲ್ಲಿ 5 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 4 ವಿಕೆಟ್ ಕಬಳಿಸಿ ಮಿಂಚಿದರು. ಇಬ್ಬರು ಬೌಲರುಗಳ ಪರಾಕ್ರಮದಿಂದ ಅತ್ತ ರೋಹಿತ್ ಶರ್ಮಾ ಕೂಡ ವಿಶೇಷ ಸಾಧನೆಗೈದು ಗಮನ ಸೆಳೆದರು.
ಹೌದು, ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನಲ್ಲಿ ಹಿಟ್ಮ್ಯಾನ್ ಐದು ಕ್ಯಾಚ್ಗಳನ್ನು ಹಿಡಿಯುವ ಮೂಲಕ ಕ್ಷೇತ್ರರಕ್ಷಣೆಯಲ್ಲಿ ದಾಖಲೆಯ ಹಿರಿಮೆಗೆ ಪಾತ್ರರಾದರು. ಈ ಮೂಲಕ ಆಸೀಸ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ 5 ಕ್ಯಾಚ್ ಪಡೆದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಏಕನಾಥ ಸೋಲ್ಕರ್ (1969/70), ಕೃಷ್ಣಮಾಚಾರಿ ಶ್ರೀಕಾಂತ್ (1991/92), ರಾಹುಲ್ ದ್ರಾವಿಡ್ (1997/98) ಅವರು ಈ ಸಾಧನೆ ಮಾಡಿದ್ದರು.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಟಿಮ್ ಪೈನ್ ಕ್ಯಾಚ್ ಪಡೆದು ಮಿಂಚಿದ್ದರು. ಹಾಗೆಯೇ ಎರಡನೇ ಇನ್ನಿಂಗ್ಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಕ್ಯಾಮರೋನ್ ಗ್ರೀನ್ ಕ್ಯಾಚ್ ಹಿಡಿಯುವ ಮೂಲಕ ಆಸ್ಟ್ರೇಲಿಯಾ ಆಟಗಾರರನ್ನು ಪೆವಿಲಿಯನ್ಗೆ ಕಳುಹಿಸಿದ್ದರು.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ