IPL 2021| ಇಂಗ್ಲೆಂಡ್​ ಟೆಸ್ಟ್​ ಮುಂದೂಡಿಕೆ; ಐಪಿಎಲ್​ ಟೂರ್ನಿಗಾಗಿ ಯುಎಇ ಗೆ ಹಾರಿದ ಭಾರತದ ಆಟಗಾರರು

ಎರಡೂ ತಂಡಗಳ ಹಲವಾರು ಆಟಗಾರರು ತಮ್ಮ ಐಪಿಎಲ್ 2021 ತಂಡಗಳೊಂದಿಗೆ ಸೇರಿಕೊಳ್ಳಲು ಯುಎಇಗೆ ಹೊರಟಿದ್ದಾರೆ. ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಈಗಾಗಲೇ ಅಬುದಾಬಿಗೆ ಚಾರ್ಟರ್ ಫ್ಲೈಟ್‌ನಲ್ಲಿ ಮೊದಲನೇಯವರಾಗಿ ತೆರಳಿದ್ದಾರೆ.

ಐಪಿಎಲ್.

ಐಪಿಎಲ್.

 • Share this:
  ಮ್ಯಾಂಚೆಸ್ಟರ್‌ (ಸೆಪ್ಟೆಂಬರ್​ 11); ಎಲ್ಲಾ ಅಂದುಕೊಂಡತೆ ಆಗಿದಿದ್ದರೆ ಭಾರತ ತಂಡ ಇಂಗ್ಲೆಂಡ್​ (India vs England) ವಿರುದ್ಧ ಇಂದು 5ನೇ ಟೆಸ್ಟ್​ ಪಂದ್ಯದ ಎರಡನೇ ದಿನದ ಆಟ ಆಡಬೇಕಿತ್ತು. ಆದರೆ, ಕೊರೋನಾ ವೈರಸ್ (CoronaVirus) ಕಾರಣಕ್ಕೆ ಈ ಪಂದ್ಯವನ್ನು ಮುಂದೂಡಲಾಗಿದೆ. ಪಂದ್ಯದ ಮುನ್ನಾ ದಿನ ಸಹಾಯಕ ಫಿಸಿಯೋ ಯೋಗೇಶ್ ಪರ್ಮಾರ್ ಅವರಿಗೂ ಸಹ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕು ಇತರರಿಗೂ ಹರಡದಂತೆ ತಡೆಯುವ ಸಲುವಾಗಿ ಪಂದ್ಯವನ್ನು ಮುಂದೂಡಲಾಗಿತ್ತು. ಆದರೆ, ಸೆಪ್ಟೆಂಬರ್​ 19 ರಿಂದ ಯುಎಇ ನಲ್ಲಿ ನಡೆಯಬೇಕಿರುವ ಐಪಿಎಲ್​ ಟೂರ್ನಿ ಈ ವರ್ಷ ಮುಗಿಯಲೇಬೇಕಿದೆ. ಹೀಗಾಗಿ ಈ ಟೂರ್ನಿಯ ನಂತರವೇ ಟೆಸ್ಟ್ ಪಂದ್ಯ ನಡೆಯಲಿದೆ. ಪರಿಣಾಮ ಎರಡೂ ತಂಡಗಳ ಹಲವಾರು ಆಟಗಾರರು ತಮ್ಮ ಐಪಿಎಲ್ 2021 ತಂಡಗಳೊಂದಿಗೆ ಸೇರಿಕೊಳ್ಳಲು ಯುಎಇಗೆ ಹೊರಟಿದ್ದಾರೆ. ರೋಹಿತ್ ಶರ್ಮಾ(Rohit Sharma), ಜಸ್‌ಪ್ರೀತ್ ಬುಮ್ರಾ (jasprit bumrah) ಮತ್ತು ಸೂರ್ಯಕುಮಾರ್ ಯಾದವ್ (Suryakumar yadav) ಅವರು ಮ್ಯಾಂಚೆಸ್ಟರ್‌ನಿಂದ ಅಬುದಾಬಿಗೆ (Abudhabi) ಚಾರ್ಟರ್ ಫ್ಲೈಟ್‌ನಲ್ಲಿ ಮೊದಲನೇಯವರಾಗಿ ತೆರಳಿದ್ದರೆ, ದುಬೈನಲ್ಲಿರುವ ರಾಯಲ್ ಚಾಲೆಂಜರ್ಸ್ (Royal Challengers) ಬೆಂಗಳೂರು ಕ್ಯಾಂಪ್ ಅನ್ನು ಸೇರಿಕೊಳ್ಳಲು ವಿರಾಟ್ ಕೊಹ್ಲಿ (Virat kohli) ಮತ್ತು ಸಿರಾಜ್ ಮೊಹಮ್ಮದ್ (Siraj mohammad) ಶಿಘ್ರದಲ್ಲೇ ಪ್ರಯಾಣ ಬೆಳಸಲಿದ್ದಾರೆ ಎನ್ನಲಾಗಿದೆ.

  ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಇಂಡಿಯನ್ಸ್​, "ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಈ ಮೂವರೂ ತಮ್ಮ ಕುಟುಂಬಗಳೊಂದಿಗೆ ಇಂದು ಬೆಳಿಗ್ಗೆ ಅಬುದಾಬಿಗೆ ಆಗಮಿಸಿದ್ದಾರೆ. ಈ ಆಟಗಾರರನ್ನು ಐಪಿಎಲ್ ಮಾರ್ಗಸೂಚಿಯಂತೆ ಇಂದಿನಿಂದ 6 ದಿನಗಳ ಕಾಲ ಐಸೋಲೇಶನ್​ಗೆ ಒಳಪಡಿಸಲಾಗುವುದು. ಅಬುದಾಬಿಗೆ ಆಗಮಿಸುತ್ತಿದ್ದಂತೆ ಅವರಿಗೆ RT-PCR ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ, ಈ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್​ ಇಲ್ಲವೆಂಬುದು ಪತ್ತೆಯಾಗಿದೆ" ಎಂದು ತಿಳಿಸಲಾಗಿದೆ.

  ರಾಯಲ್​ ಚಾಲೆಂಜರ್ಸ್​ ಸಹ ಇದೇ ರೀತಿಯ ಹೇಳಿಕೆ ಬಿಡುಗಡೆ ಮಾಡಿದ್ದು, "ಶನಿವಾರ ನಾಯಕ ವಿರಾಟ್ ಕೊಹ್ಲಿ ಮತ್ತು ಸಿರಾಜ್ ಮೊಹಮ್ಮದ್ ಇತರರಿಂದ ಪ್ರತ್ಯೇಕವಾಗಿ ದುಬೈಗೆ ಹಾರಾಟ ನಡೆಸಲಿದ್ದಾರೆ. ಆದ್ದರಿಂದ ಫ್ರಾಂಚೈಸಿ ನಮ್ಮ ಆಟಗಾರರ ಸುರಕ್ಷತೆಯನ್ನು ಆದ್ಯತೆಯ ವಿಚಾರವಾಗಿ ಪರಿಗಣಿಸಿದೆ" ಎಂದು ತಿಳಿಸಿದೆ.

  ಇನ್ನೂ ಭಾರತ ಮತ್ತು ಇಂಗ್ಲೆಂಡ್‌ನ ಉಳಿದ ಐಪಿಎಲ್​ ಆಟಗಾರರು ಶನಿವಾರ ಯುಎಇಗೆ ಪ್ರತ್ಯೇಕ ಚಾರ್ಟರ್ ವಿಮಾನದಲ್ಲಿ ತೆರಳುವ ನಿರೀಕ್ಷೆ ಇದೆ. ಮ್ಯಾಂಚೆಸ್ಟರ್‌ನಿಂದ ಆಗಮಿಸುವ ಎಲ್ಲಾ ಆಟಗಾರರು ತಮ್ಮ ಹೋಟೆಲ್ ಕೊಠಡಿಗಳಲ್ಲಿ ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು.

  ಇದನ್ನೂ ಓದಿ: US Open- ರಾಜೀವ್ ರಾಮ್ ಡಬಲ್ಸ್ ಚಾಂಪಿಯನ್- ಇತಿಹಾಸದ ಹೊಸ್ತಿಲಲ್ಲಿ ಜೋಕೋವಿಚ್

  ಹಿಂದಿನ ಯೋಜನೆಯ ಪ್ರಕಾರ, ಪಟೌಡಿ ಟ್ರೋಫಿಯ ಅಂತಿಮ ಟೆಸ್ಟ್‌ನ ನಿಗದಿತ ಮುಕ್ತಾಯದ ಮರುದಿನ ಸೆಪ್ಟೆಂಬರ್ 15 ರಂದು ಆಟಗಾರರು ತಮ್ಮ ಐಪಿಎಲ್ ತಂಡಗಳನ್ನು ಸೇರಬೇಕಿತ್ತು. ಆದಾಗ್ಯೂ, ಸಹಾಯಕ ಫಿಸಿಯೋ ಥೆರಪಿಸ್ಟ್ ಯೋಗೇಶ್ ಪರ್ಮಾರ್ ಬುಧವಾರ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಭಾರತೀಯ ಆಟಗಾರರು ಮೈದಾನಕ್ಕೆ ಇಳಿಯಲು ಹಿಂಜರಿದರು.

  ಬಿಸಿಸಿಐ ಜೊತೆಗಿನ ಚರ್ಚೆಗಳಲ್ಲಿ ಆಟಗಾರರು ಕೊರೋನಾ ಸೋಂಕಿನ ಬಗ್ಗೆ ತಮಗಿದ್ದ ಭಯದ ಬಗ್ಗೆ ವಿವರಿಸಿದ್ದಾರೆ. ನಂತರ ಎರಡು ಮಂಡಳಿಗಳ ನಡುವಿನ ಚರ್ಚೆಗಳು ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ವಿಸ್ತರಿಸಲ್ಪಟ್ಟು, ಕೊನೆಗೆ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿತ್ತು.

  ಇದನ್ನೂ ಓದಿ: Ajinkya Rahane| ಮುಗಿಯಿತೇ ಅಜಿಂಕ್ಯಾ ರಹಾನೆ ಕ್ರಿಕೆಟ್​ ಭವಿಷ್ಯ, ಏನು ಹೇಳುತ್ತಿವೆ ಅಂಕಿಅಂಶ?

  ಭಾರತೀಯರು ಟೆಸ್ಟ್ ಆಡುವುದನ್ನು ವಿರೋಧಿಸಲು ಒಂದು ಪ್ರಮುಖ ಕಾರಣವೆಂದರೆ ಓಲ್ಡ್ ಟ್ರಾಫರ್ಡ್‌ನಲ್ಲಿರುವ ಸುತ್ತುವರಿದ ಡ್ರೆಸ್ಸಿಂಗ್ ರೂಮ್ ಎಂದು ತಿಳಿದುಬಂದಿದೆ. ಅದೂ ಅಲ್ಲದೆ, ಫಿಸಿಯೋ ಥೆರಪಿಸ್ಟ್ ಯೋಗೇಶ್ ಪರ್ಮಾರ್ ಹೆಚ್ಚಿನ ಸಂಖ್ಯೆಯ ಆಟಗಾರರಿಗೆ ಚಿಕಿತ್ಸೆ ನೀಡುತ್ತಿದ್ದರಿಂದ, ಅವರ ನಿಕಟ ಸಂಪರ್ಕಗಳು ಯಾರು? ಎಂಬುದನ್ನು ನಿರ್ಧರಿಸುವುದು ಕಷ್ಟಕರವಾಗಿತ್ತು. ಬಿಸಿಸಿಐ ಜೊತೆಗಿನ ಚರ್ಚೆಯಲ್ಲಿ, ಆಟಗಾರರು ಕೊರೋನಾ ಸೋಂಕು ತಮ್ಮ ಕುಟುಂಬದ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
  Published by:MAshok Kumar
  First published: