HOME » NEWS » Sports » CRICKET ROAD SAFETY WORLD SERIES YUVRAJ SINGH LAUDS INDIA LEGENDS WIN AGAINST SRI LANKA LEGENDS SHARES EPIC SELFIE STG MAK

ರಸ್ತೆ ಸುರಕ್ಷತೆ ವಿಶ್ವ ಸರಣಿ: ಶ್ರೀಲಂಕಾ ವಿರುದ್ಧ ಭಾರತ ಲೆಜೆಂಡ್ಸ್ ಗೆಲುವಿಗೆ ಯುವರಾಜ್ ಸಿಂಗ್ ಸಂಭ್ರಮಿಸಿದ್ದು ಹೀಗೆ!

ಯುವರಾಜ್‌ ಸಿಂಗ್‌ ಪೋಸ್ಟ್‌ಗೆ 7 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು, ಸಾವಿರಾರು ಬಳಕೆದಾರರು ಯುವರಾಜ್‌ ಸಿಂಗ್‌ ಮತ್ತು ತಂಡವನ್ನು ಕಾಮೆಂಟ್‌ಗಳ ಮೂಲಕ ಅಭಿನಂದಿಸಿದ್ದಾರೆ.

news18-kannada
Updated:May 17, 2021, 2:11 PM IST
ರಸ್ತೆ ಸುರಕ್ಷತೆ ವಿಶ್ವ ಸರಣಿ: ಶ್ರೀಲಂಕಾ ವಿರುದ್ಧ ಭಾರತ ಲೆಜೆಂಡ್ಸ್ ಗೆಲುವಿಗೆ ಯುವರಾಜ್ ಸಿಂಗ್ ಸಂಭ್ರಮಿಸಿದ್ದು ಹೀಗೆ!
ಯುವರಾಜ್ ಸಿಂಗ್.
  • Share this:
ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ ನಡೆದ ಮೊದಲ ರಸ್ತೆ ಸುರಕ್ಷತೆ ವಿಶ್ವ ಟಿ - 20 ಕ್ರಿಕೆಟ್‌ ಸರಣಿಯ ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 14 ರನ್‌ಗಳಿಂದ ಬಗ್ಗುಬಡಿದಿದೆ. ತಿಲಕರತ್ನೆ ದಿಲ್ಶನ್ ನೇತೃತ್ವದ ತಂಡದ ವಿರುದ್ಧ ಟೀಂ ಇಂಡಿಯಾ ಲೆಜೆಂಡ್ಸ್ ತಂಡದಲ್ಲಿದ್ದ ಯುವರಾಜ್ ಸಿಂಗ್ ಮತ್ತು ಯೂಸುಫ್ ಪಠಾಣ್ ಅವರು ಅದ್ಭುತ ಆಲ್‌ರೌಂಡ್‌ ಪ್ರದರ್ಶನ ನೀಡಿದರು. ಈ ಹಿನ್ನೆಲೆ ಫೈನಲ್ಸ್ ಗೆಲುವಿನ ಬಳಿಕ ಯುವರಾಜ್ ತಮ್ಮ ಇಂಡಿಯಾ ಲೆಜೆಂಡ್ಸ್ ತಂಡದ ಸದಸ್ಯರೊಂದಿಗಿನ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಲೆಜೆಂಡ್ಸ್ ತಂಡದವರನ್ನು 'ಯುವಕರು' ಎಂದ ಯುವರಾಜ್‌ ಸಿಂಗ್‌ ಅವರನ್ನು ಅಭಿನಂದಿಸಿದರು. "ಉತ್ತಮ ಯುವಕರು !!! ಅಭಿನಂದನೆಗಳು'' ಎಂದು ಯುವರಾಜ್‌ ಸಿಂಗ್‌ ಸಾಮಾಜಿಕ ಜಾಲತಾಣದಲ್ಲಿ ಕ್ಯಾಪ್ಷನ್‌ ಹಂಚಿಕೊಂಡಿದ್ದಾರೆ.

ಈ ಸೆಲ್ಫಿ ಪೋಸ್ಟ್‌ನಲ್ಲಿ ನಾಯಕ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಮನ್‌ಪ್ರೀತ್ ಗೋನಿ, ಇರ್ಫಾನ್ ಪಠಾಣ್, ರೋಹನ್ ಗವಾಸ್ಕರ್ ಮುಂತಾದವರನ್ನು ಒಳಗೊಂಡ ಉತ್ಸಾಹಭರಿತ ಇಂಡಿಯಾ ಲೆಜೆಂಡ್ಸ್ ತಂಡದ ಸದಸ್ಯರು ಇದ್ದಾರೆ. ಯುವರಾಜ್‌ ಸಿಂಗ್‌ ಪೋಸ್ಟ್‌ಗೆ 7 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು, ಸಾವಿರಾರು ಬಳಕೆದಾರರು ಯುವರಾಜ್‌ ಸಿಂಗ್‌ ಮತ್ತು ತಂಡವನ್ನು ಕಾಮೆಂಟ್‌ಗಳ ಮೂಲಕ ಅಭಿನಂದಿಸಿದ್ದಾರೆ.

ಇನ್ನು, ಸರಣಿಯ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಲೆಜೆಂಡ್ಸ್ ಸವಾಲಿನ 181/4 ಮೊತ್ತವನ್ನು ದಾಖಲಿಸಿತು. ತಂಡ  ಒಂದೆರಡು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೂ ಸಹ ನಾಯಕ ಸಚಿನ್ ತೆಂಡೂಲ್ಕರ್ 23 ಎಸೆತಗಳಲ್ಲಿ 30 ರನ್‌ ಸಿಡಿಸಿದ್ದು, ಯುವರಾಜ್‌ ಸಿಂಗ್ ಅವರೊಂದಿಗೆ 43 ರನ್‌ಗಳ ಜೊತೆಯಾಟ ನೀಡಿದರು. ಇನ್ನು, ಸಚಿನ್‌ ಔಟಾದ ನಂತರ ಯುವರಾಜ್ ಮತ್ತು ಯೂಸುಫ್ ಪಠಾಣ್ - ಇಬ್ಬರೂ ಸಹ ವೇಗವಾಗಿ ಆಕರ್ಷಕ ಅರ್ಧ ಶತಕಗಳನ್ನು ಸಿಡಿಸಿದರು.  ಯುವರಾಜ್‌ ಸಿಂಗ್  41 ಎಸೆತಗಳಲ್ಲಿ 60 ರನ್‌ಗಳನ್ನು ಹೊಡೆದಇದ್ದು, ಈ ಪೈಕಿ 4 ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ ಯೂಸುಫ್ ಪಠಾಣ್‌ ಕೇವಲ 36 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಚಚ್ಚಿದ್ದು ಅಜೇಯ 62 ರನ್ ಗಳಿಸಿದರು.

ಇದನ್ನೂ ಓದಿ: England squad: ಭಾರತದ ವಿರುದ್ಧದ ಏಕದಿನಕ್ಕೆ ಇಂಗ್ಲೆಂಡ್ ತಂಡ ಪ್ರಕಟ: ಸ್ಟಾರ್ ಆಟಗಾರರು ಹೊರಕ್ಕೆ..!

ಭಾರತ ಲೆಜೆಂಡ್ಸ್‌ ತಂಡದ ಉತ್ತಮ ಮೊತ್ತವನ್ನು ಚೇಸ್‌ ಮಾಡಿದ ಶ್ರೀಲಂಕಾ ಲೆಜೆಂಡ್ಸ್ ತಂಡದ ಬ್ಯಾಟ್ಸ್‌ಮನ್‌ಗಳಾದ ಸನತ್ ಜಯಸೂರ್ಯ (35 ಎಸೆತಗಳಲ್ಲಿ 43 ರನ್), ಚಿಂತಕ ಜಯಸಿಂಘೆ (30 ಎಸೆತಗಳಲ್ಲಿ 40 ರನ್) ಮತ್ತು ಕೌಶಲ್ಯ ವೀರರತ್ನ (15 ಎಸೆತಗಳಲ್ಲಿ 38 ರನ್) ಆರಂಭದಲ್ಲಿ ಉತ್ತಮ ಆಟವಾಡಿ ಭಾರತ ತಂಡಕ್ಕೆ ಶಾಕ್‌ ನೀಡಿದ್ದರು. ಆದರೆ, ಕೊನೆಯ ಓವರ್‌ನಲ್ಲಿ 24 ರನ್‌ಗಳು ಅಗತ್ಯವಿದ್ದ ವೇಳೆ ಮುನಾಫ್ ಪಟೇಲ್ ತಮ್ಮ ಬೌಲಿಂಗ್‌ನಲ್ಲಿ ಕೇವಲ 2 ರನ್‌ ನೀಡಿದರು. ಈ ಮೂಲಕ ಲಂಕಾ ತಂಡ 20 ಓವರ್‌ಗಳಲ್ಲಿ 167/7 ಗಳಿಸಲಷ್ಟೇ ಸಾಧ್ಯವಾಯಿತು.
Youtube Video

ಈ ಮೂಲಕ ಸಚಿನ್‌ ನೇತೃತ್ವದ ತಂಡ ಆರಾಮದಾಯಕ ಗೆಲುವು ಸಾಧಿಸಿತು. ಉತ್ತಮ ಆಲ್‌ರೌಂಡ್‌ ಪ್ರದರ್ಶನ ನೀಡಿದ ಯೂಸುಫ್ ಪಠಾಣ್ ‘ಪಂದ್ಯಶ್ರೇಷ್ಠ’ಎನಿಸಿಕೊಂಡರೆ, ಶ್ರೀಲಂಕಾ ಲೆಜೆಂಡ್ಸ್ ನಾಯಕ ದಿಲ್ಶನ್ ಪಂದ್ಯಾವಳಿಯಲ್ಲಿ ಉತ್ತಮ ಆಲ್‌ರೌಂಡ್‌ ಪ್ರದರ್ಶನಕ್ಕೆ 'ಸರಣಿ ಶ್ರೇಷ್ಠ' ಪುರಸ್ಕೃತರಾದರು. ಆಡಿದ 8 ಪಂದ್ಯಗಳಲ್ಲಿ ಲಂಕಾ ಲೆಜೆಂಡ್ಸ್ ತಂಡದ ನಾಯಕ ತಿಲಕರತ್ನೆ ದಿಲ್ಶನ್ 271 ರನ್ ಗಳಿಸಿದರು ಮತ್ತು 12 ವಿಕೆಟ್‌ಗಳನ್ನು ಗಳಿಸಿದರು. ಈ ಮೂಲಕ ತಮ್ಮ ತಂಡವನ್ನು ರನ್ನರ್‌ ಅಪ್‌ ಅನ್ನಾಗಿ ಮಾಡುವಲ್ಲಿ ಯಶಸ್ವಿಯಾದರು.
Published by: MAshok Kumar
First published: March 22, 2021, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories