HOME » NEWS » Sports » CRICKET ROAD SAFETY WORLD SERIES SACHIN DRIVES SEHWAG CUTS ZAHEER KHAN YORKERS TAKE EVERYONE 10 YEARS BACK VB

ಸಚಿನ್ ಡ್ರೈವ್, ಸೆಹ್ವಾಗ್ ಕಟ್ಸ್; ಜಹೀರ್ ಯಾರ್ಕರ್; ಹಳೆಯ ಹುಲಿಗಳ ಕಾದಾಟದಲ್ಲಿ ಮತ್ತೆ ಮರುಕಳಿಸಿತು ಗತವೈಭವ!

India Legends, Sachin-Sehwag: ದಿಗ್ಗಜರ ಅಪರೂಪದ ಕಾದಾಟವನ್ನು ಕಣ್ತುಂಬಿಕೊಳ್ಳಲು ವಾಂಖೆಡೆ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದು ವಿಶೇಷ.

news18-kannada
Updated:March 8, 2020, 4:30 PM IST
ಸಚಿನ್ ಡ್ರೈವ್, ಸೆಹ್ವಾಗ್ ಕಟ್ಸ್; ಜಹೀರ್ ಯಾರ್ಕರ್; ಹಳೆಯ ಹುಲಿಗಳ ಕಾದಾಟದಲ್ಲಿ ಮತ್ತೆ ಮರುಕಳಿಸಿತು ಗತವೈಭವ!
ಮಹಾರಾಷ್ಟ್ರದಲ್ಲೂ ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಟೂರ್ನಿಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
  • Share this:
ಬೆಂಗಳೂರು (ಮಾ. 08): ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಭಾರತ ಕ್ರಿಕೆಟ್ ತಂಡದ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್, ವೆಸ್ಟ್​ ಇಂಡೀಸ್ ಪ್ರಿನ್ಸ್ ದಿಗ್ಗಜ ಬ್ರಿಯಾನ್ ಲಾರ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಜೊತೆಗೆ ಮಾಜಿ ದಿಗ್ಗಜ ಆಟಗಾರರ ಕಾದಾಟ ನಿನ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಬರಪೂರದ ಮನರಂಜನೆ ನೀಡಿತು. ಇದಕ್ಕೆ ಕಾರಣವಾಗಿದ್ದು, ರಸ್ತೆ ಸುರಕ್ಷತೆ ಜಾಗೃತಿಗಾಗಿ ಆಯೋಜಿಸಲಾಗಿರುವ ರಸ್ತೆ ಸುರಕ್ಷತೆ ವಿಶ್ವ ಟಿ-20 ಸರಣಿ!

ಒಂದುಕಡೆ ಸಚಿನ್ ತಮ್ಮ ಡ್ರೈವ್, ಗ್ಲಾನ್ಸ್ ಶಾಟ್ ಮೂಲಕ ಗಮನ ಸೆಳೆದರೆ ಮತ್ತೊಂದೆಡೆ ಸೆಹ್ವಾಗ್ ಇನ್ನಿಂಗ್ಸ್​ನ ಮೊದಲೆರಡು ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿ ತಮ್ಮ ಹಳೆಯ ಶೈಲಿಯ ಡ್ಯಾಶಿಂಗ್ ಬ್ಯಾಟಿಂಗ್ ಅನ್ನು ಪ್ರೇಕ್ಷಕರ ಕಣ್ಣೆದುರು ತಂದರು. ಯುವರಾಜ್ ತಮ್ಮ ಸಿಗ್ನೇಚರ್ ಶೈಲಿಯಲ್ಲಿ ಸಿಕ್ಸ್​ ಸಿಡಿಸಿದ್ದು ಮಾತ್ರ ಕ್ರಿಕೆಟ್ ಪ್ರಿಯರನ್ನು ಮೂಕವಿಸ್ಮಿತವಾಗಿಸಿತು. ಬ್ರಿಯಾನ್ ಲಾರ ಮತ್ತದೇ ಕ್ಲಾಸ್ ಶಾಟ್‌ಗಳ ಮೂಲಕ ತಮ್ಮ ಹಳೆಯ ಗತವೈಭವವನ್ನು ಮೆರೆದರು.

 



IND vs SA: ದ. ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಕಮ್​ಬ್ಯಾಕ್ ಮಾಡಿದ 3 ಸ್ಟಾರ್ ಆಟಗಾರರು!ಈ ದಿಗ್ಗಜರ ಅಪರೂಪದ ಕಾದಾಟವನ್ನು ಕಣ್ತುಂಬಿಕೊಳ್ಳಲು ವಾಂಖೆಡೆ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದು ವಿಶೇಷ.

ಈ ಪಂದ್ಯದಲ್ಲಿ ಕೇವಲ ಕ್ರಿಕೆಟಿಗರಷ್ಟೇ ಅಲ್ಲದೆ ಮಾಜಿ ಅಂಪೈರ್ ಸೈಮನ್ ಟೌಫೆಲ್ ಸಹ ಅಂಪೈರ್ ಜವಾಬ್ದಾರಿಯನ್ನು ನಿಭಾಯಿಸಿದ್ದು ಮತ್ತೊಂದು ವಿಶೇಷ. ಬಹುಶ: ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತ ಅತ್ಯುತ್ತಮ ಮನರಂಜನೆ ಸಿಗಲು ಸಾಧ್ಯವಿಲ್ಲ ಎನ್ನಬಹುದು.

ಇದೇ ಮುಂಬಯಿನ ವಾಂಖೆಡೆ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಅವರು 2013 ರಲ್ಲಿ ಕೊನೆಯ ಪಂದ್ಯವನ್ನಾಡಿದ್ದರು. ಇದಾಗಿ 7 ವರ್ಷಗಳ ಬಳಿಕ ಸಚಿನ್ ಮಗದೊಮ್ಮೆ ಕಾಲಿರಿಸಿದಾಗ 'ಸಚಿನ್ ಸಚಿನ್' ಎಂಬ ಕೂಗು ಇಡೀ ವಾಂಖೆಡೆಯಲ್ಲಿ ಮೊಳಗಿತು. ಇದು ಒಂದು ಕಡೆಯಾದರೆ, ಸಚಿನ್- ಸೆಹ್ವಾಗ್ ಜೊತೆಯಾಟಕ್ಕೆ ಕೇವಲ ಭಾರತೀಯರಷ್ಟೇ ಅಲ್ಲದೆ ವೆಸ್ಟ್​ ಇಂಡೀಸ್ ದಿಗ್ಗಜರೂ ಕೂಡ ಮನಸೋತರು.

 



Women’s T20 World Cup Final: ಚೊಚ್ಚಲ ವಿಶ್ವಕಪ್ ಗೆಲ್ಲುವ ಭಾರತ ಮಹಿಳೆಯರ ಕನಸು ಭಗ್ನ; 5ನೇ ಬಾರಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ

ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆರಂಭಿಕ ಜೋಡಿ ಸಚಿನ್-ಸೆಹ್ವಾಗ್ ಮೊದಲ ವಿಕೆಟ್​ಗೆ 83 ರನ್​ಗಳ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತು.

ವೆಸ್ಟ್​ ಇಂಡೀಸ್ ಲೆಜೆಂಡ್ ತಂಡದ ಪರ 45 ವರ್ಷದ ಶಿವನಾರಯಣ್ ಚಂದ್ರಪಾಲ್ 41 ಎಸೆತಗಳಲ್ಲಿ 6 ಬೌಂಡರಿ, 2 ಅಮೋಘ ಸಿಕ್ಸರ್ ಬಾರಿಸಿ 61 ರನ್ ಚಚ್ಚಿ ತಮ್ಮ ತಂಡದ ಪರ ಗರಿಷ್ಠ ಸ್ಕೋರ್ ಕಲೆಹಾಕಿದರು. ಭಾರತ ಲೆಜೆಂಡ್ ಪರ ವಿರೇಂದ್ರ ಸೆಹ್ವಾಗ್ 57 ಎಸೆತಗಳಲ್ಲಿ 11 ಬೌಂಡರಿಯೊಂದಿಗೆ ಅಜೇಯ 74 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

 



ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್ ಲೆಜೆಂಡ್ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ಭಾರತ 18.2 ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು 151 ರನ್ ಬಾರಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

 

First published: March 8, 2020, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories