HOME » NEWS » Sports » CRICKET ROAD SAFETY WORLD SERIES 2021 VIRENDER SEHWAG SACHIN TENDULKAR FIRE INDIA LEGENDS TO 10 WICKET WIN ZP

Road Safety World Series 2021: ಸೆಹ್ವಾಗ್ ಸಿಡಿಲಬ್ಬರಕ್ಕೆ ತತ್ತರಿಸಿದ ಬಾಂಗ್ಲಾ ಲೆಜೆಂಡ್ಸ್​..!

110 ರನ್​ಗಳ ಸುಲಭ ಗುರಿ ಬೆನ್ನತ್ತಲು ಕ್ರೀಸ್​ಗಿಳಿದ ಟೀಮ್ ಇಂಡಿಯಾದ ಮಾಜಿ ಓಪನರ್​ಗಳಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಈ ಹಿಂದಿನಂತೆಯೇ ಅಬ್ಬರಿಸಿದರು.

news18-kannada
Updated:March 7, 2021, 8:10 PM IST
Road Safety World Series 2021: ಸೆಹ್ವಾಗ್ ಸಿಡಿಲಬ್ಬರಕ್ಕೆ ತತ್ತರಿಸಿದ ಬಾಂಗ್ಲಾ ಲೆಜೆಂಡ್ಸ್​..!
Sehwag-Sachin
  • Share this:
ಭಾರತೀಯ ದಿಗ್ಗಜ ಕ್ರಿಕೆಟಿಗರು ಮತ್ತೆ ಕಣಕ್ಕಿಳಿದಿದ್ದಾರೆ. ಅದು ಕೂಡ ಈ ಹಿಂದಿನಂತೆ ಅಬ್ಬರದೊಂದಿಗೆ ಎಂಬುದು ವಿಶೇಷ. ಹೌದು ಛತ್ತೀಸ್‌ಗಢದ ರಾಯ್‌ಪುರ್‌ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರೋಡ್ ಸ್ಟೇಫ್ಟಿ ವರ್ಲ್ಡ್ ಸೀರೀಸ್ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ್ ಲೆಜೆಂಡ್ಸ್‌ ತಂಡ ನಿಝಾಮುದ್ದೀನ್ ಅವರ 49 ರನ್​ಗಳ ನೆರವಿನಿಂದ 19.4ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 109 ರನ್ ಕಲೆಹಾಕಿತ್ತು. ಇಂಡಿಯಾ ಲೆಜೆಂಡ್ಸ್​ ಪರ ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ಯುವರಾಜ್ ಸಿಂಗ್ ತಲಾ 2 ವಿಕೆಟ್‌ ಪಡೆದು ಗಮನ ಸೆಳೆದರು.

110 ರನ್​ಗಳ ಸುಲಭ ಗುರಿ ಬೆನ್ನತ್ತಲು ಕ್ರೀಸ್​ಗಿಳಿದ ಟೀಮ್ ಇಂಡಿಯಾದ ಮಾಜಿ ಓಪನರ್​ಗಳಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಈ ಹಿಂದಿನಂತೆಯೇ ಅಬ್ಬರಿಸಿದರು. ಆರಂಭದಿಂದಲೇ ಬಾಂಗ್ಲಾ ಬೌಲರುಗಳ ಬೆಂಡೆತ್ತಿದ ಸೆಹ್ವಾಗ್ ತಮ್ಮ ಹಳೆಯ ನೈಜ ಆಟವನ್ನು ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದ ವೀರು ಸ್ಪೋಟಕ ಬ್ಯಾಟಿಂಗ್ ನಡೆಸಿದರು.

ಪರಿಣಾಮ ಸೆಹ್ವಾಗ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 5 ಭರ್ಜರಿ ಸಿಕ್ಸರ್​ಗಳು. ಹಾಗೆಯೇ 10 ಬೌಂಡರಿಗಳೊಂದಿಗೆ ಕೇವಲ 35 ಎಸೆತಗಳಲ್ಲಿ ಸೆಹ್ವಾಗ್ 80 ರನ್​ಗಳನ್ನು ಚಚ್ಚಿದರು.

ಮತ್ತೊಂದೆಡೆ ಸೆಹ್ವಾಗ್​ಗೆ ಸಾಥ್ ನೀಡಿದ ಸಚಿನ್ ತೆಂಡೂಲ್ಕರ್ 5 ಮನಮೋಹಕ ಬೌಂಡರಿಗಳೊಂದಿಗೆ 26 ಎಸೆತಗಳಲ್ಲಿ 33 ರನ್ ಬಾರಿಸಿದರು. ಕೇವಲ 10.1 ಓವರ್​ನಲ್ಲಿ 114 ರನ್​ಗಳ ಗುರಿಮುಟ್ಟುವ ಮೂಲಕ ಇಂಡಿಯಾ ಲೆಜೆಂಡ್ಸ್ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇನ್ನು ಮಾರ್ಚ್​ 9 ರಂದು ಇಂಡಿಯಾ ಲೆಜೆಂಡ್ಸ್ ತಂಡವು ಇಂಗ್ಲೆಂಡ್ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.
Published by: zahir
First published: March 7, 2021, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories