HOME » NEWS » Sports » CRICKET ROAD SAFETY WORLD SERIES 2021 SCHEDULE SQUADS TELECAST IN INDIA STREAMING ZP

Road Safety World Series 2021: ರೋಡ್ ಸೇಫ್ಟಿ ವರ್ಲ್ಡ್​ ಸಿರೀಸ್ ಟೂರ್ನಿ ಇಂದಿನಿಂದ ಆರಂಭ: ಇಂಡಿಯಾ ಲೆಜೆಂಡ್ಸ್ ತಂಡ ಹೀಗಿದೆ..!

ಇಂಡಿಯಾ ಲೆಜೆಂಡ್ಸ್​ ಟೀಮ್: ಸಚಿನ್ ತೆಂಡೂಲ್ಕರ್ (ನಾಯಕ), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಯೂಸುಫ್ ಪಠಾಣ್, ನಮನ್ ಓಜಾ, ಎಸ್ ಬದ್ರಿನಾಥ್, ವಿನಯ್ ಕುಮಾರ್.

news18-kannada
Updated:March 5, 2021, 6:03 PM IST
Road Safety World Series 2021: ರೋಡ್ ಸೇಫ್ಟಿ ವರ್ಲ್ಡ್​ ಸಿರೀಸ್ ಟೂರ್ನಿ ಇಂದಿನಿಂದ ಆರಂಭ: ಇಂಡಿಯಾ ಲೆಜೆಂಡ್ಸ್ ತಂಡ ಹೀಗಿದೆ..!
Road Safety World Series 2021
  • Share this:
ಕ್ರಿಕೆಟ್ ದಂತಕಥೆಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೌದು, ಇಂದಿನಿಂದ ರೋಡ್ ಸೇಫ್ಟಿ ವರ್ಲ್ಡ್​ ಸಿರೀಸ್ ಟೂರ್ನಿ ಆರಂಭವಾಗಲಿದ್ದು, ದಿಗ್ಗಜ ಕ್ರಿಕೆಟಿಗರು ಮೈದಾನಕ್ಕಿಳಿಯಲಿದ್ದಾರೆ. ಮೊದಲ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್- ಬಾಂಗ್ಲಾದೇಶ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.

ಕಳೆದ ವರ್ಷ ರೋಡ್ ಸೇಫ್ಟಿ ಟೂರ್ನಿ ನಡೆದರೂ ಕೊರೋನಾ ಕಾರಣದಿಂದ ಅರ್ಧದಲ್ಲೇ ಪಂದ್ಯಾವಳಿಯನ್ನು ಮೊಟಕುಗೊಳಿಸಲಾಗಿತ್ತು. ಇದೀಗ ಮತ್ತೆ 15 ಪಂದ್ಯಗಳ ಲೀಗ್ ಪುನಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಅಲ್ಲದೆ ಟೂರ್ನಿಯ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಅದರಂತೆ ಮಾರ್ಚ್ 5 ರಿಂದ ಟೂರ್ನಿ ಆರಂಭವಾಗಲಿದೆ.

ಈ ಬಾರಿ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡವು ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಅದರ ಬದಲಾಗಿ ಬಾಂಗ್ಲಾದೇಶ ಲೆಜೆಂಡ್ಸ್ ತಂಡ ಕಣಕ್ಕಿಳಿಯಲಿದೆ. ಇದಲ್ಲದೆ, ಇಂಗ್ಲೆಂಡ್ ಲೆಜೆಂಡ್ಸ್ ಸಹ ಈ ಬಾರಿ ಭಾಗವಹಿಸಲಿದೆ. ಇನ್ನು ಈ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಕೈಫ್ ಬ್ರಿಯಾನ್ ಲಾರಾ  ಸೇರಿದಂತೆ ಅನೇಕ ಪ್ರಸಿದ್ಧ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ದಿಲ್ಶಾನ್ , ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ಜಾಂಟಿ ರೋಡ್ಸ್​, ವೆಸ್ಟ್ ಇಂಡೀಸ್​ನ ಶಿವನಾರಾಯಣ್ ಚಂದ್ರಪಾಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಮಾರ್ಚ್ 5 ರಿಂದ ಆರಂಭವಾಗುವ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 21 ರಂದು ನಡೆಯಲಿದೆ.

ತಂಡಗಳು:
ಇಂಡಿಯಾ ಲೆಜೆಂಡ್ಸ್
ಬಾಂಗ್ಲಾದೇಶ ಲೆಜೆಂಡ್ಸ್
ದಕ್ಷಿಣ ಆಫ್ರಿಕಾ ಲೆಜೆಂಡ್ಸ್ಇಂಗ್ಲೆಂಡ್ ಲೆಜೆಂಡ್ಸ್
ಶ್ರೀಲಂಕಾ ಲೆಜೆಂಡ್ಸ್
ವೆಸ್ಟ್ ಇಂಡೀಸ್ ಲೆಜೆಂಡ್ಸ್

ಇಂಡಿಯಾ ಲೆಜೆಂಡ್ಸ್​ ಟೀಮ್: ಸಚಿನ್ ತೆಂಡೂಲ್ಕರ್ (ನಾಯಕ), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಯೂಸುಫ್ ಪಠಾಣ್, ನಮನ್ ಓಜಾ, ಎಸ್ ಬದ್ರಿನಾಥ್, ವಿನಯ್ ಕುಮಾರ್.

ಪಂದ್ಯ ನಡೆಯುವ ಸ್ಥಳ:
ರಾಯ್​ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣ.

ಮೊದಲ ಪಂದ್ಯ:
ಇಂಡಿಯಾ ಲೆಜೆಂಡ್ಸ್ vs ಬಾಂಗ್ಲಾದೇಶ

ಸಮಯ:
ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ.

ಎಲ್ಲಿ ವೀಕ್ಷಿಸಬಹುದು?
ಡಿಜಿಟಲ್:- ವೂಟ್ ಆ್ಯಪ್ ಮತ್ತು ಜಿಯೋ ಆಪ್‌
ಟಿವಿ:- ಕಲರ್ಸ್ ಸಿನಿಪ್ಲೆಕ್ಸ್, ಕರ್ಲಸ್ ಕನ್ನಡ ಸಿನೆಮಾ, ರಿಶ್ತೆ ಚಾನೆಲ್​ಗಳಲ್ಲಿ ವೀಕ್ಷಿಸಬಹುದು.

ಇಂಡಿಯಾ ಲೆಜೆಂಡ್ಸ್​ ಟೀಮ್: ಸಚಿನ್ ತೆಂಡೂಲ್ಕರ್ (ನಾಯಕ), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಯೂಸುಫ್ ಪಠಾಣ್, ನಮನ್ ಓಜಾ, ಎಸ್ ಬದ್ರಿನಾಥ್, ವಿನಯ್ ಕುಮಾರ್.
Published by: zahir
First published: March 5, 2021, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories