HOME » NEWS » Sports » CRICKET ROAD SAFETY WORLD SERIES 2020 21 INDIA LEGENDS VS WEST INDIES LEGENDS ZP

Road Safety World Series 2020-21: ವೆಸ್ಟ್ ಇಂಡೀಸ್ ಲೆಜೆಂಡ್ಸ್​ಗೆ ಬೃಹತ್ ಟಾರ್ಗೆಟ್ ನೀಡಿದ ಇಂಡಿಯಾ ಲೆಜೆಂಡ್ಸ್​..!

ಈ ಹಂತದಲ್ಲಿ ಜೊತೆಗೂಡಿದ್ದು ಡೇಂಜರಸ್ ಯೂಸುಫ್ ಪಠಾಣ್ ಹಾಗೂ ಸಿಕ್ಸರ್ ಸಿಂಗ್ ಯುವರಾಜ್. ಸಿಕ್ಸ್, ಫೋರ್​ಗಳೊಂದಿಗೆ ತಮ್ಮ ಸ್ಪೋಟಕ ಇನಿಂಗ್ಸ್ ಆರಂಭಿಸಿದ ಯೂಸುಫ್ ಪಠಾಣ್ ರನ್​ಗತಿಯನ್ನು ಹೆಚ್ಚಿಸಿದರು.

news18-kannada
Updated:March 17, 2021, 8:48 PM IST
Road Safety World Series 2020-21: ವೆಸ್ಟ್ ಇಂಡೀಸ್ ಲೆಜೆಂಡ್ಸ್​ಗೆ ಬೃಹತ್ ಟಾರ್ಗೆಟ್ ನೀಡಿದ ಇಂಡಿಯಾ ಲೆಜೆಂಡ್ಸ್​..!
Road Safety World Series 2020-21
  • Share this:
ರಾಯ್‌ಪುರ್‌ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಸೆಮಿಫೈನಲ್​ನಲ್ಲಿ ಇಂಡಿಯಾ ಲೆಜೆಂಡ್ಸ್ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಕ್ಕೆ 219 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ನಾಯಕ ಬ್ರಿಯಾನ್ ಲಾರಾ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಟೀಮ್ ಇಂಡಿಯಾದ ಮಾಜಿ ಆರಂಭಿಕರಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್​ ಓಪನರ್​ಗಳಾಗಿ ಕಣಕ್ಕಿಳಿದರು. ಮೊದಲ ಓವರ್​ನಿಂದಲೇ ಬ್ಯಾಟ್ ಪ್ರಹಾರ ಶುರು ಮಾಡಿದ ವೀರು ಬೌಂಡರಿಗಳ ಸುರಿಮಳೆ ಸುರಿಸಿದರು. ಪರಿಣಾಮ ಐದು ಓವರ್​ ವೇಳೆಗೆ ಇಂಡಿಯಾ ಲೆಜೆಂಡ್ಸ್ ಸ್ಕೋರ್ 50ರ ಗಡಿದಾಟಿತು. ಈ ಹಂತದಲ್ಲಿ 17 ಎಸೆತಗಳಲ್ಲಿನ 35 ರನ್​ ಬಾರಿಸಿದ್ದ ಸೆಹ್ವಾಗ್ ಟಿನೊ ಬೆಸ್ಟ್ ಎಸೆತದಲ್ಲಿ ಅವರಿಗೇನೇ ಕ್ಯಾಚ್ ನೀಡಿ ಹೊರನಡೆದರು.

ಸ್ಪೋಟಕ ಬ್ಯಾಟ್ಸ್​ಮನ್ ಸೆಹ್ವಾಗ್ ಔಟ್​ ಆಗುತ್ತಿದ್ದಂತೆ ಮಾಸ್ಟರ್ ಬ್ಲಾಸ್ಟರ್​ ಸಚಿನ್ ಸಿಡಿಯಲಾರಂಭಿಸಿದರು. ವಿಂಡೀಸ್ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ಸಚಿನ್ 3 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ ಮೊಹಮ್ಮದ್ ಕೈಫ್ ಜೊತೆಗೂಡಿ 10 ವೇಳೆಗಾಗಲೇ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. 2 ಬೌಂಡರಿ ಹಾಗೂ 2 ಸಿಕ್ಸರ್​ಗಳೊಂದಿಗೆ ಅಬ್ಬರಿಸಿದ ಕೈಫ್ 21 ಎಸೆತಗಳಲ್ಲಿ 27 ರನ್​ ಬಾರಿಸಿ ಈ ವೇಳೆ ವಿಕೆಟ್ ಒಪ್ಪಿಸಿದರು.

ಅತ್ತ ಸಚಿನ್ ತೆಂಡೂಲ್ಕರ್ 42 ಎಸೆತಗಳಲ್ಲಿ 65 ರನ್​ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಈ ವೇಳೆ ಬೌಂಡರಿ ಲೈನ್​ನಲ್ಲಿ ಎಡ್ವರ್ಡ್ಸ್ ಹಿಡಿದ ಸೂಪರ್​ ಕ್ಯಾಚ್​ಗೆ ಸಚಿನ್ ನಿರ್ಗಮಿಸಲೇಬೇಕಾಯಿತು. ಅಷ್ಟರಲ್ಲಾಗಲೇ ಸಚಿನ್ ತಂಡದ ಮೊತ್ತವನ್ನು 14.1 ಓವರ್​ನಲ್ಲಿ 140 ಕ್ಕೆ ತಂದು ನಿಲ್ಲಿಸಿದರು.

ಈ ಹಂತದಲ್ಲಿ ಜೊತೆಗೂಡಿದ್ದು ಡೇಂಜರಸ್ ಯೂಸುಫ್ ಪಠಾಣ್ ಹಾಗೂ ಸಿಕ್ಸರ್ ಸಿಂಗ್ ಯುವರಾಜ್. ಸಿಕ್ಸ್, ಫೋರ್​ಗಳೊಂದಿಗೆ ತಮ್ಮ ಸ್ಪೋಟಕ ಇನಿಂಗ್ಸ್ ಆರಂಭಿಸಿದ ಯೂಸುಫ್ ಪಠಾಣ್ ರನ್​ಗತಿಯನ್ನು ಹೆಚ್ಚಿಸಿದರು. ಈ ವೇಳೆ ಸುಲೈಮಾನ್ ಬೆನ್ ಓವರ್​ನಲ್ಲಿ ಯುವರಾಜ್​ಗೆ ಎರಡು ಜೀವದಾನ ಕೂಡ ಲಭಿಸಿತು. ವೆಸ್ಟ್ ಇಂಡೀಸ್ ಲೆಜೆಂಡ್ಸ್ ಆಟಗಾರರು ಬಿಟ್ಟ ಕ್ಯಾಚ್​ನ ಸಂಪೂರ್ಣ ಲಾಭ ಪಡೆದ ಯುವಿ ಅಬ್ಬರಿಸಲಾರಂಭಿಸಿದರು.

ಅಲ್ಲದೆ ನಾಗಮುತ್ತು ಎಸೆದ 19ನೇ ಓವರ್​ನ ಮೊದಲ 3 ಎಸೆತಗಳಲ್ಲಿ ಯುವರಾಜ್ ಸಿಂಗ್ 3 ಭರ್ಜರಿ ಸಿಕ್ಸರ್ ಸಿಡಿಸಿದರು. 4ನೇ ಬಾಲ್​ ಡಾಟ್ ಮಾಡಿದ ಯುವಿ 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಬಾರಿಸಿದರು. ಹೀಗೆ ಒಂದೇ ಓವರ್​ನಲ್ಲಿ 24 ರನ್​ ಕಲೆಹಾಕಿದರು.

ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಯೂಸುಫ್ ಪಠಾಣ್  1 ರನ್​ ಕಲೆಹಾಕಿದರು. 2ನೇ ಎಸೆತದಲ್ಲಿ ಯುವರಾಜ್ ಸಿಂಗ್ ಸಿಕ್ಸ್ ಸಿಡಿಸಿದರು. 3ನೇ ಬಾಲ್​ನಲ್ಲಿ ಯಾವುದೇ ರನ್ನಿಲ್ಲ. 4ನೇ ಬಾಲ್​ನಲ್ಲಿ 2 ರನ್ ಓಡಿದ ಯುವಿ ಐದನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಇನ್ನು ಅಂತಿಮ ಎಸೆತದಲ್ಲಿ 1 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 218 ಕ್ಕೆ ತಂದು ನಿಲ್ಲಿಸಿದರು.

ಇಂಡಿಯಾ ಲೆಜೆಂಡ್ಸ್ ಪರ ಯೂಸುಫ್ ಪಠಾಣ್ 20 ಎಸೆತಗಳಲ್ಲಿ 3 ಸಿಕ್ಸರ್ 2 ಬೌಂಡರಿಯೊಂದಿಗೆ 37 ರನ್​ ಬಾರಿಸಿದರೆ, ಯುವರಾಜ್ ಸಿಂಗ್ 6 ಸಿಕ್ಸರ್ 1 ಬೌಂಡರಿಯೊಂದಿಗೆ 20 ಎಸೆತಗಳಲ್ಲಿ 49 ರನ್ ಸಿಡಿಸಿದರು.
Published by: zahir
First published: March 17, 2021, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories