HOME » NEWS » Sports » CRICKET RISHABH PANT WILL LEAVE MS DHONI AND ADAM GILCHRIST BEHIND BY SOME DISTANCE INZAMAM UL HAQ ZP

Rishabh Pant:ಪಾಕ್ ಮಾಜಿ ನಾಯಕನ ಹೇಳಿಕೆ: ಧೋನಿ, ಗಿಲ್‌ಕ್ರಿಸ್ಟ್​ನ್ನು ಹಿಂದಿಕ್ಕಲಿದ್ದಾರೆ ರಿಷಭ್ ಪಂತ್..!

ಕಳೆದ 30-35 ವರ್ಷಗಳಲ್ಲಿ ನಾನು ನೋಡಿದ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳೆಂದರೆ ಧೋನಿ ಹಾಗೂ ಗಿಲ್​ಕ್ರಿಸ್ಟ್. ಈ ಇಬ್ಬರು ಆಟಗಾರರು ಪಂದ್ಯದ ಚಿತ್ರಣವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದರು.

news18-kannada
Updated:March 28, 2021, 3:59 PM IST
Rishabh Pant:ಪಾಕ್ ಮಾಜಿ ನಾಯಕನ ಹೇಳಿಕೆ: ಧೋನಿ, ಗಿಲ್‌ಕ್ರಿಸ್ಟ್​ನ್ನು ಹಿಂದಿಕ್ಕಲಿದ್ದಾರೆ ರಿಷಭ್ ಪಂತ್..!
ಪಂತ್-ಗಿಲ್ಲಿ-ಧೋನಿ
  • Share this:
ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗಿನಿಂದಲೂ, ಎಂ.ಎಸ್.ಧೋನಿ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಅವರೊಂದಿಗಿನ ಹೋಲಿಕೆಗಳು ನಿಂತಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸ್ಟಂಪ್‌ಗಳ ಹಿಂದಿನ ಕೈಚಳಕದಿಂದ ಧೋನಿ ಮತ್ತು ಗಿಲ್‌ಕ್ರಿಸ್ಟ್ ವಿಶ್ವದ ಅತ್ಯುತ್ತಮ ವಿಕೆಟ್‌ಕೀಪರ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ರಿಷಭ್ ಪಂತ್ ಅಬ್ಬರವನ್ನು ಪರಿಗಣಿಸಿ, ಈತ ಇವರಿಬ್ಬರನ್ನೂ ಮೀರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್.

ಕಳೆದ ಕೆಲ ತಿಂಗಳಿಂದ ಭರ್ಜರಿ ಪ್ರದರ್ಶನ ನೀಡುತ್ತಿರುವ ಪಂತ್ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಬಾರಿಸಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 77 ರನ್ ಬಾರಿಸಿರುವ ಪಂತ್ ಎಲ್ಲರ ಗಮನ ಸೆಳೆದಿದ್ದಾರೆ. ಪಂತ್ ಅವರ ಈ ಬಿರುಸಿನ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಇಂಝಮಾಮ್ ಉಲ್ ಹಕ್, ರಿಷಭ್ ಪಂತ್ ಬತ್ತಳಿಕೆಯಲ್ಲಿ ಕೆಲವೊಂದು ಅದ್ಭುತ ಹೊಡೆತಗಳ ಅಸ್ತ್ರಗಳಿವೆ. ಇದೇ ಮಾದರಿಯಲ್ಲಿ ಯುವ ಆಟಗಾರ ಬ್ಯಾಟಿಂಗ್ ಮುಂದುವರೆಸಿದರೆ, ವಿಶ್ವದ ಶ್ರೇಷ್ಠ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ಗಳನ್ನು ಸುಲಭವಾಗಿ ಹಿಂದಿಕಲಿದ್ದಾರೆ ಎಂದು ಪಾಕ್ ಮಾಜಿ ನಾಯಕ ಹೇಳಿದ್ದಾರೆ.

ನಾನು ಆರು-ಏಳು ತಿಂಗಳುಗಳಿಂದ ಪಂತ್ ಅವರ ಬ್ಯಾಟಿಂಗ್ ಗಮನಿಸುತ್ತಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ಹಾಗೂ ವಿವಿಧ ಕ್ರಮಾಂಕದಲ್ಲಿ ಅವರು ಬ್ಯಾಟ್ ಬೀಸುತ್ತಿರುವ ಪರಿ ನಿಜಕ್ಕೂ ಅದ್ಭುತವಾಗಿದೆ ಎಂದು ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ.

ಕಳೆದ 30-35 ವರ್ಷಗಳಲ್ಲಿ ನಾನು ನೋಡಿದ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳೆಂದರೆ ಧೋನಿ ಹಾಗೂ ಗಿಲ್​ಕ್ರಿಸ್ಟ್. ಈ ಇಬ್ಬರು ಆಟಗಾರರು ಪಂದ್ಯದ ಚಿತ್ರಣವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದರು. ಇದೀಗ ಇದೇ ಹಾದಿಯಲ್ಲಿದ್ದಾರೆ ಪಂತ್. ಅವರ ಈ ಬ್ಯಾಟಿಂಗ್ ಶೈಲಿಯನ್ನು ಮುಂದುವರೆಸಿದರೆ ಧೋನಿ ಹಾಗೂ ಗಿಲ್​ಕ್ರಿಸ್ಟ್​ ಅವರನ್ನು ಹಿಂದಿಕ್ಕಬಹುದು ಎಂದು ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ.
Published by: zahir
First published: March 28, 2021, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories