news18-kannada Updated:February 14, 2021, 7:29 PM IST
ರಿಷಭ್ ಪಂತ್
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ವಿಕೆಟ್ ಕೀಪಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದ ರಿಷಭ್ ಪಂತ್, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 37ನೇ ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ಇಂಗ್ಲೆಂಡ್ ಒಲ್ಲಿ ಪೋಪೆ ಚೆಂಡೆನ್ನು ಡೀಪ್ ಫೈನ್ ಲೆಗ್ನತ್ತ ಬಾರಿಸಲು ಯತ್ನಿಸಿದ್ದರು. ಆದರೆ ಚೆಂಡು ಬ್ಯಾಟ್ ಸವರಿ ಲೆಗ್ ಸೈಡ್ನತ್ತ ಚಿಮ್ಮಿತ್ತು.
ಈ ವೇಳೆ ಅದ್ಭುತ ಡೈವಿಂಗ್ ಮೂಲಕ ಚೆಂಡನ್ನು ಕ್ಯಾಚ್ ಹಿಡಿದ ರಿಷಭ್ ಪಂತ್ ಎಲ್ಲರನ್ನೂ ಚಕಿತಗೊಳಿಸಿದರು. ಈ ಅದ್ಭುತ ಕ್ಯಾಚ್ನಿಂದಾಗಿ ಮೊಹಮ್ಮದ್ ಸಿರಾಜ್ ಭಾರತದಲ್ಲಿನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೊದಲ ವಿಕೆಟ್ ಪಡೆಯುವಲ್ಲಿ ಯಶಕಂಡರು.
ರಿಷಭ್ ಪಂತ್ ಅವರ ಈ ಅದ್ಭುತ ಕ್ಯಾಚ್ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವ ವಿಕೆಟ್ ಕೀಪರ್ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಇನ್ನು ಈ ಪಂದ್ಯದದ 2ನೇ ದಿನ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.
ಮೊದಲ ಇನಿಂಗ್ಸ್ನಲ್ಲಿ ಭಾರತ ನೀಡಿದ 329 ರನ್ಗಳನ್ನು ಬೆನ್ನತ್ತಿದ ಆಂಗ್ಲರು ಕೇವಲ 134 ರನ್ಗಳಿಗೆ ಸರ್ವಪತನ ಕಂಡಿತು. 195 ರನ್ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತವು ಶುಭ್ಮನ್ ಗಿಲ್ (14) ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಇದಾಗ್ಯೂ ಟೀಮ್ ಇಂಡಿಯಾ 54 ರನ್ಗಳಿಸುವುದರೊಂದಿಗೆ 249 ರನ್ಗಳ ಮುನ್ನಡೆಯೊಂದಿಗೆ 2ನೇ ದಿನದಾಟವನ್ನು ಅಂತ್ಯಗೊಳಿಸಿದೆ. ಸದ್ಯ ಕ್ರೀಸ್ನಲ್ಲಿ ರೋಹಿತ್ ಶರ್ಮಾ (25) ಹಾಗೂ ಚೇತೇಶ್ವರ ಪೂಜಾರ (7) ಇದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Published by:
zahir
First published:
February 14, 2021, 7:29 PM IST