Rishabh Single Hand Six- ಒಂದೇ ಕೈಯಲ್ಲಿ ಸಿಕ್ಸರ್; ರಿಷಭ್ ಪಂತ್ ಆಟಕ್ಕೆ ಸಖತ್ ಮೀಮ್ಸ್

Rishabh Pant Memes- ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಒಂದೇ ಕೈಯನಲ್ಲಿ ಶಾಟ್​ಗಳನ್ನ ಭಾರಿಸಿ ಸಿಕ್ಸರ್ ಸಿಡಿಸಿದ್ದರು. ಇವರ ಈ ಶಾಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಮೀಮ್ಗಳಿಗೆ ಕಾರಣವಾಗಿವೆ.

ರಿಷಭ್ ಪಂತ್

ರಿಷಭ್ ಪಂತ್

 • Share this:
  ನಿನ್ನೆ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭಾರತ (India beat Afghanistan in T20 World Cup) ಅದ್ವಿತೀಯ ಪ್ರದರ್ಶನ ನೀಡಿ 66 ರನ್​ಗಳಿಂದ ಸೋಲಿಸಿತು. ಭಾರತಕ್ಕೆ ಬಹಳ ಮಹತ್ವದ್ದಾಗಿದ್ದ ಈ ಪಂದ್ಯದಲ್ಲಿ ಸಿಕ್ಕ ಗೆಲುವಿನಿಂದಾಗಿ ಭಾರತದ ಸೆಮಿಫೈನಲ್ ಆಸೆ ಇನ್ನೂ ಜೀವಂತ ಉಳಿಯಲು ಸಾಧ್ಯವಾಗಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ದಾಖಲೆಯ ಆರಂಭಿಕ ಜೊತೆಯಾಟ ಪ್ರಮುಖ ಹೈಲೈಟ್​ಗಳಲ್ಲಿ ಒಂದು. ಹಾಗೆಯೇ, ರಿಷಭ್ ಪಂತ್ (Rishabh Pant) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಬಿಡುಬೀಸಾಗಿ ಬ್ಯಾಟಿಂಗ್ ಮಾಡಿ ಭಾರತದ ಸ್ಕೋರನ್ನ 210 ರನ್​ಗೆ ಉಬ್ಬಿಸಿದರು. ಪಂತ್ ಮತ್ತು ಪಾಂಡ್ಯ 3ನೇ ವಿಕೆಟ್​ಗೆ ಕೇವಲ 32 ಬಾಲ್​ನಲ್ಲಿ 63 ರನ್​ಗಳ ಮುರಿಯದ ಜೊತೆಯಾಟ ನೀಡಿದರು.

  ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಲಯಕ್ಕೆ ಮರಳಿದ್ದು ಟೀಮ್ ಇಂಡಿಯಾ ಪಾಳಯಕ್ಕೆ ಸಂತಸದ ಸಂಗತಿ. ಹಾಗೆಯೇ, ರಿಷಭ್ ಪಂತ್ ತಮ್ಮ ಅದ್ಭುತ ಶಾಟ್​ಗಳ ಪ್ರದರ್ಶನವನ್ನ ಈ ಪಂದ್ಯದಲ್ಲೂ ಮುಂದುವರಿಸಿದರು. ಒಂದು ಕೈನಲ್ಲಿ ಸಿಕ್ಸರ್ ಭಾರಿಸುವ ರಿಷಭ್ ಪಂತ್ ಅವರ ಶಾಟ್​ಗಳಿಗೆ (Rishabh Pant’s one-handed sixer shot) ಅಬುಧಾಬಿಯ ಮೈದಾನ ಸಾಕ್ಷಿಯಾಯಿತು.

  ರಿಷಭ್ ಪಂತ್ ಅವರ ಮೀಮ್​ಗಳು ಸೋಷಿಯಲ್ ಮೀಡಿಯಾದಲ್ಲಿ (Memes on Rishabh Pant in Social Media) ಬಹಳ ಫೇಮಸ್. ವಿಕೆಟ್ ಕೀಪಿಂಗ್ ಮಾಡುವಾಗ ಅವರು ಆಡುವ ವಟವಟ ಮಾತುಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೂ ಬಹಳ ಫೇಮಸ್ ಅವರು. ಫೀಲ್ಡ್ ಆಚೆ ಅವರ ತಮಾಷೆ, ಕೀಟಲೆಗಳು ಹೀಗೆ ಬಹಳ ವಿಚಾರದಲ್ಲಿ ರಿಷಬ್ ಪಂತ್ ಸೋಷಿಯಲ್ ಮೀಡಿಯಾದಲ್ಲಿ ಡಾರ್ಲಿಂಗ್ ಎನಿಸಿದ್ದಾರೆ.

  ನಿನ್ನೆಯ ಪಂದ್ಯದಲ್ಲಿ ಪಂತ್ ಅವರ ಸಿಂಗಲ್ ಹ್ಯಾಂಡ್ ಸಿಕ್ಸರ್ ಶಾಟ್​ಗಳು ಸಖತ್ ಮೀಮ್ಸ್​ಗೆ ಕಾರಣವಾಗಿವೆ:

  ಒಬ್ಬ ಟ್ವಿಟ್ಟರ್ ಯೂಸರ್ ತನ್ನ ಪಂತ್ ಪ್ರೇಮವನ್ನು ತೋರ್ಪಡಿಸಿದ್ದು ಹೀಗೆ: ಫಾರ್ಮ್ ತಾತ್ಕಾಲಿಕ, ಒನ್ ಹ್ಯಾಂಡ್ ಸಿಕ್ಸ್ ಖಾಯಂ ಎಂದು ಬರೆದಿದ್ದಾರೆ.

  ಇದು ಶಾಟ್ ಮಾತ್ರ ಅಲ್ಲ, ಒಂದು ಇಮೋಶನ್ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ರಿಷಭ್ ಪಂತ್ ಆ ಶಾಟ್ ಹೊಡೆದಾಗ ಮುಖಚರ್ಯೆ ಹೇಗಿರುತ್ತದೆ ಎಂದು ಇಶಾಂತ್ ಶರ್ಮಾರ ಒಂದು ಹಾವಭಾವದ ಫೋಟೋ ಲಗತ್ತಿಸಿದ್ದಾರೆ.

  ಇದನ್ನೂ ಓದಿ: T20 World Cup- ಇದು ರಿಯಲ್ ಟೀಮ್ ಇಂಡಿಯಾ; ಅಫ್ಘನ್ನರನ್ನ ಸದೆಬಡಿದ ಭಾರತಕ್ಕೆ ಚೊಚ್ಚಲ ಜಯ

  ರಿಷಭ್ ಪಂತ್ ಅವರಂತೆ ಒಂದು ಕೈನಲ್ಲಿ ಸಿಕ್ಸರ್​ಗಳನ್ನ ಬಾರಿ ಬಾರಿ ಭಾರಿಸುವವರು ಯಾರೂ ಇಲ್ಲ ಎಂದು ಇನೊಬ್ಬರು ಮೀಮ್ ಮಾಡಿದ್ದಾರೆ.


  ಸಿಂಗಲ್ ಹ್ಯಾಂಡ್ ಶಾಟ್​ಗೇ ಒಂದು ಫ್ಯಾನ್ ಅಕೌಂಟ್:

  ರಿಷಭ್ ಪಂತ್ ಅಲ್ಲ ಅವರ ಒನ್ ಹ್ಯಾಂಡ್ ಸಿಕ್ಸ್ ಶಾಟ್​ಗೆ ಒಂದು ಫ್ಯಾನ್ ಅಕೌಟ್ ಹುಟ್ಟಿಕೊಂಡಿದೆ. ಅದರ ಹೆಸರೇ “ಒನ್ ಹ್ಯಾಂಡೆಡ್ ಸಿಕ್ಸ್ ಅಕಾಡೆಮಿ” (@1handed6) ಅಂತ ಇದೆ. ಈ ಅಕೌಂಟ್ ನಿರ್ವಹಿಸುವವರು ರಿಷಭ್ ಪಂತ್ ಅವರನ್ನ ಈ ಅಕಾಡೆಮಿಯ ಸಿಇಒ ಎಂದು ಬಣ್ಣಿಸುತ್ತಾರೆ. ವಿವಿಧ  ಪಂದ್ಯಗಳಲ್ಲಿ ರಿಷಭ್ ಪಂತ್ ಒಂಟಿ ಕೈಯಲ್ಲಿ ಭಾರಿಸಿರುವ ಶಾಟ್​ಗಳ ಫೋಟೋ ಮತ್ತು ವಿಡಿಯೋ ಕ್ಲಿಪ್​ಗಳನ್ನ ಹಾಕುತ್ತಿರುತ್ತಾರೆ.


  ಒಂಟಿ ಕೈ ಸಿಕ್ಸರ್ ಶಾಟ್ ಬಗ್ಗೆ ಪಂತ್ ಹೇಳೋದೇನು?

  “ನಾನು ಒಂದು ಕೈನಲ್ಲಿ ಸಿಕ್ಸರ್ ಭಾರಿಸುವಾಗ ಶಾಟ್​ನ ಸಂಪೂರ್ಣ ಹಿಡಿತ ಹೊಂದಿರುವಂತೆ ಭಾಸವಾಗುತ್ತದೆ. ನನಗೆ ಚೆಂಡಿನ ಗತಿ ಸರಿಯಾಗಿ ಗೊತ್ತಾಗಲಿಲ್ಲವೆಂದರೆ ನಾನು ಅಂಥ ಶಾಟ್​ಗೆ ಮುಂದಾಗುತ್ತೇನೆ. ನನ್ನ ಪ್ರಕಾರ, ಬಹಳಷ್ಟು ಜನರು ಈ ಶಾಟ್ ಆಡಲು ಪ್ರಾರಂಭಿಸಬಹುದು” ಎಂದು ರಿಷಭ್ ಪಂತ್ ಹೇಳಿದ್ದಾಗಿ ಟೈಮ್ ಆಫ್ ಇಂಡಿಯಾ ವರದಿ ಮಾಡಿತ್ತು.

  ಇದನ್ನೂ ಓದಿ: BBL- ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ

  ಎಂಎಸ್ ಧೋನಿ ಅವರ ಟ್ರೇಡ್​ಮಾರ್ಕ್ ಆದ ಹೆಲಿಕಾಪ್ಟರ್ ಶಾಟ್ ಅನ್ನ ಬೇರೆ ಕೆಲ ಆಟಗಾರರು ಅನುಕರಣೆ ಮಾಡುವುದನ್ನು ನಾವು ನೋಡಿದ್ದೇವೆ. ಈಗ ರಿಷಭ್ ಪಂತ್ ಅವರ ಸಿಂಗಲ್ ಹ್ಯಾಂಡ್ ಸಿಕ್ಸರ್ ಶಾಟ್ ಕೂಡ ಟ್ರೆಂಡ್ ಆಗಬಹುದು.
  Published by:Vijayasarthy SN
  First published: