ನವದೆಹಲಿ: ಭೀಕರ ಅಪಘಾತದಲ್ಲಿ ಗಾಯಗೊಂಡ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. 2022ರ ಡಿಸೆಂಬರ್ 30ರಂದು ಟೀಂ ಇಂಡಿಯಾದ (Team India) ಯುವ ವಿಕೆಟ್ ಕೀಪರ್ (Wicket Keeper) ರಿಷಭ್ ಪಂತ್ ಕಾರು ಅಪಘಾತಕ್ಕೀಡಾಗಿತ್ತು (Car Accident). ಅವರು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಆದರೆ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರೂ ಸಹ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರಷ್ಟೇ ಅಲ್ಲ, ಅವರ ಅಪಾರ ಅಭಿಮಾನಿಗಳಿಗೂ ಆತಂಕ ಉಂಟಾಗಿತ್ತು. ಇದೀಗ ಖುದ್ದು ರಿಷಬ್ ಪಂತ್ ಅವರೇ ಇನ್ಸ್ಸ್ಟಾಗ್ರಾಮ್ನಲ್ಲಿ (Instagram) ತಮ್ಮ ಆರೋಗ್ಯದ ಕುರಿತು ತಿಳಿಸಿದ್ದಾರೆ.
ರಿಷಭ್ ಪಂತ್ ಆರೋಗ್ಯದ ಕುರಿತು ಮೆಸೇಜ್
ಸದ್ಯ ಕಳೆದ 18 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್, ಇದೀಗ ತಮ್ಮ ಆರೋಗ್ಯದ ಕುರಿತು ತಾವೇ ಟ್ವೀಟ್ ಹಾಗೂ ಇನ್ಸ್ಸ್ಟಾ ಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದಾರೆ. “ನಾನು ಎಲ್ಲರಿಗೂ ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ನಿಮ್ಮ ಅಪಾರ ಬೆಂಬಲಕ್ಕೆ ನನ್ನ ಅನಂತಾನಂತ ಧನ್ಯವಾದಗಳು. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ನಾನು ಅನಾರೋಗ್ಯದಿಂದ ಸುಧಾರಿಸಿಕೊಳ್ಳುತ್ತಿದ್ದೇನೆ. ಇವನ್ನೆಲ್ಲ ನಿಮಗೆ ಹೇಳಬೇಕು ಅಂತ ಅನಿಸಿತು. ನಾನು ನಿಮಗೆ ಕೃತಜ್ಞನಾಗಿದ್ದೇನೆ. ಇದು ನನ್ನ ಆರೋಗ್ಯದ ಚೇತರಿಕೆಯ ಹಾದಿ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು. ಈ ರೀತಿಯ ಪದಗಳಲ್ಲಿ ಕೃತಜ್ಞತೆ ಹೇಳುವುದಕ್ಕೆ ಸಾಲುವುದದೇ ಇಲ್ಲ. ನಿಮ್ಮ ಬೆಂಬಲವೇ ನನಗೆ ಒಂದು ರೀತಿಯ ನೆಗೆಟಿವ್ ಎನರ್ಜಿ ಇದ್ದಂತೆ. ಈ ಕಷ್ಟದ ಸಮಯದಲ್ಲಿ ನನಗೆ ಅದೇ ಶಕ್ತಿ” ಅಂತ ರಿಷಭ್ ಪಂತ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
View this post on Instagram
ಇನ್ನು ಟ್ವೀಟ್ ಮೂಲಕವೂ ರಿಷಭ್ ಪಂತ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. “ಎಲ್ಲಾ ಬೆಂಬಲ ಮತ್ತು ಶುಭ ಹಾರೈಕೆಗಳಿಗಾಗಿ ನಾನು ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಚೇತರಿಕೆಯ ಹಾದಿ ಪ್ರಾರಂಭವಾಗಿದೆ ಮತ್ತು ಮುಂಬರುವ ಸವಾಲುಗಳಿಗೆ ನಾನು ಸಿದ್ಧನಿದ್ದೇನೆ” ಅಂತ ಪಂತ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Rishabh Pant: ರಿಷಭ್ ಪಂತ್ಗೆ ಇನ್ನೊಂದು ಶಸ್ತ್ರಚಿಕಿತ್ಸೆ, ವಿಶ್ವಕಪ್ನಿಂದ ಯುವ ಆಟಗಾರ ಔಟ್!
ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ರಿಷಭ್ ಪಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆಯ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ಆರ್ತ್ರೋಸ್ಕೊಪಿ ಮತ್ತು ಭುಜದ ಸೇವೆಯ ನಿರ್ದೇಶಕ ಡಾ ಪಾರ್ದಿವಾಲಾ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ.
From the bottom of my heart, I also would like to thank all my fans, teammates, doctors and the physios for your kind words and encouragement. Looking forward to see you all on the field. #grateful #blessed
— Rishabh Pant (@RishabhPant17) January 16, 2023
ರಿಷಭ್ ಪಂತ್ ಈ ತಿಂಗಳ ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. "ರಿಷಭ್ ಪಂತ್ ಅವರು ಶುಕ್ರವಾರ ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ವೀಕ್ಷಣೆಯಲ್ಲಿದ್ದಾರೆ. ಮುಂದಿನ ಕ್ರಮ ಮತ್ತು ಪುನರ್ವಸತಿಯನ್ನು ಡಾ ದಿನ್ಶಾ ಪರ್ದಿವಾಲಾ ಮತ್ತು ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ಔಷಧ ತಂಡವು ಅನುಸರಿಸುತ್ತದೆ" ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.
ಇದನ್ನೂ ಓದಿ: Rishabh Pant: ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗ್ತಾರಾ ಭಾರತೀಯ ಪ್ಲೇಯರ್? ರೇಸ್ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ
ಡಿಸೆಂಬರ್ 30ರಂದು ನಡೆದಿದ್ದ ಅಪಘಾತ
ಡಿಸೆಂಬರ್ 30 ರ ಮುಂಜಾನೆ ತನ್ನ ದೆಹಲಿಯಿಂದ ಡೆಹ್ರಾಡೂನ್ನಲ್ಲಿರುವ ತಮ್ಮ ಮನೆಗೆ ರಿಷಭ್ ಪಂತ್ ಮರಳುತ್ತಿದ್ದರು. ಹೊಸ ವರ್ಷಕ್ಕೆ ತಾಯಿಗೆ ಸಪ್ಪ್ರೈಸ್ ಕೊಡಬೇಕು ಅಂತ ವೇಗವಾಗಿ ಬರುತ್ತಿದ್ದ ರಿಷಭ್ ಪಂತ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಪಂತ್ ಅಂದು ಪ್ರಾಣಾಪಾಯದಿಂದ ಪಾರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ