'ಪಂತ್​ ಕ್ರೀಸ್​ಗೆ ಬರುವುದೇ ಔಟ್ ಆಗಲು'; ಸೊನ್ನೆ ಸುತ್ತಿದ ರಿಷಭ್​​ಗೆ ಅಭಿಮಾನಿಗಳಿಂದ ಕ್ಲಾಸ್

ನಿನ್ನೆಯ ಪ್ರಮುಖ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪಂತ್ ಕೆಟ್ಟ ಹೊಡೆತಕ್ಕೆ ಮಾರುಹೋಗಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದರು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ರಿಷಭ್ ಪಂತ್

ರಿಷಭ್ ಪಂತ್

  • News18
  • Last Updated :
  • Share this:
ಬೆಂಗಳೂರು (ಆ. 15): ರಿಷಭ್ ಪಂತ್ ಒಬ್ಬ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 21 ವರ್ಷ ಪ್ರಾಯದ ಪಂತ್ ಅವರು ಧೋನಿ ಬಳಿಕ ಭಾರತ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ ಆಗಿ ಮಿಂಚಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಪಂತ್ ಈ ಸ್ಥಾನವನ್ನು ಬಲ ಪಡಿಸುವಲ್ಲಿ ಪದೇಪದೇ ಎಡವುತ್ತಿದ್ದಾರೆ.

ಬ್ಯಾಟಿಂಗ್​ನಲ್ಲಿ ಸಂಪೂರ್ಣ ವಿಫಲವಾಗಿರುವ ಪಂತ್ ತಾಳ್ಮೆಯ ಆಟವನ್ನೇ ಮರೆತು ಬಿಟ್ಟಿದ್ದಾರೆ. ಕಳೆದ 5 ಟಿ-20 ಪಂದ್ಯಗಳಲ್ಲಿ ಪಂತ್​ 0, 4, 65, 20, 0 ರನ್ ಕಲೆಹಾಕಿದ್ದಾರಷ್ಟೆ.

ನಿನ್ನೆಯ ಪ್ರಮುಖ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪಂತ್ ಕೆಟ್ಟ ಹೊಡೆತಕ್ಕೆ ಮಾರುಹೋಗಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದರು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಪಂತ್ ಬದಲು ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್​ಗೆ ಅವಕಾಶ ನೀಡಿ, ರಿಷಭ್ ಪಂತ್ ಕ್ರೀಸ್​ಗೆ ಬರುವುದೇ ಔಟ್ ಆಗಲು ಸೇರಿದಂರೆ ಅನೇಕರು ಟ್ರೋಲ್ ಮಾಡುತ್ತಿದ್ದಾರೆ.

73ನೇ ಸ್ವಾತಂತ್ರ್ಯೋತ್ಸವ: ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ಧೋನಿ ಧ್ವಜಾರೋಹಣ

ಮೂರನೇ ಏಕದಿನ ಪಂದ್ಯದಲ್ಲಿ ಪಂತ್ ಔಟ್ ಆದ ಬಗೆ:

  First published: