Gautam Gambhir: ಇನ್ನಾದರೂ ಪಂತ್​ನ್ನು ಧೋನಿಗೆ ಹೋಲಿಸುವುದನ್ನು ನಿಲ್ಲಿಸಿ..!

ರಿಷಭ್ ಪಂತ್ ಆಫ್ ಸ್ಟಂಪ್​ನಿಂದ ಹೊರ ಹೋಗುವ ಚೆಂಡನ್ನು ಕೆಣುಕುತ್ತಾರೆ. ಇದು ಎದುರಾಳಿಗಳಿಗೆ ಚೆನ್ನಾಗಿ ಗೊತ್ತಿದ್ದು. ಅದರಂತೆ ಕಾರ್ಯತಂತ್ರ ರೂಪಿಸಿ ವಿಕೆಟ್ ಪಡೆಯುತ್ತಿದ್ದಾರೆ.

Pant-Dhoni

Pant-Dhoni

 • Share this:
  ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿ ಎಂದು ರಿಷಭ್ ಪಂತ್ ಅವರನ್ನು ಹೋಲಿಸುವುದು ಇನ್ನಾದರೂ ನಿಲ್ಲಿಸಿ ಎಂದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ. ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾ ಭಾಗವಾಗಿದ್ದ ಮತ್ತು ಧೋನಿಯ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿದ್ದ ಪಂತ್, ಭಾರತದ ಸೀಮಿತ ಓವರ್‌ಗಳ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಣಗಾಡುತ್ತಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ಪ್ರದರ್ಶನ ಕಳಪೆ ಮಟ್ಟದಲ್ಲಿದೆ. ಹಾಗಾಗಿ ಹೋಲಿಕೆಗಳನ್ನು ಕೊನೆಗೊಳಿಸಬೇಕೆಂದು ಗಂಭೀರ್ ತಿಳಿಸಿದ್ದಾರೆ.

  ರಿಷಭ್ ಪಂತ್ ಆಫ್ ಸ್ಟಂಪ್​ನಿಂದ ಹೊರ ಹೋಗುವ ಚೆಂಡನ್ನು ಕೆಣುಕುತ್ತಾರೆ. ಇದು ಎದುರಾಳಿಗಳಿಗೆ ಚೆನ್ನಾಗಿ ಗೊತ್ತಿದ್ದು. ಅದರಂತೆ ಕಾರ್ಯತಂತ್ರ ರೂಪಿಸಿ ವಿಕೆಟ್ ಪಡೆಯುತ್ತಿದ್ದಾರೆ. ಪಂತ್ ಯಾವತ್ತೂ ಧೋನಿ ಆಗಲು ಸಾಧ್ಯವಿಲ್ಲ. ಇಂತಹ ಹೋಲಿಕೆಯಿಂದ ಆತನ ನೈಜ ಆಟಕ್ಕೆ ಕುತ್ತು ಬರುತ್ತದೆ ಎಂದು ಗಂಭೀರ್ ಅಭಿಪ್ರಾಯಪಟ್ಟರು.

  ಇನ್ನು ಯುವ ವಿಕೆಟ್​ ಕೀಪರ್​ ಕೆಲ ಹೊಡೆತಗಳಲ್ಲಿ ನಿಪುಣತೆ ಹೊಂದಿರುವುದು ಬಿಟ್ಟರೆ, ಕೀಪಿಂಗ್ ಚಾಕಚಕ್ಯತೆಯನ್ನು ಇನ್ನೂ ಕಲಿತಿಲ್ಲ ಎಂದಿರುವ ಗಂಭೀರ್, ಕೇವಲ ಸಿಕ್ಸರ್ ಸಿಡಿಸಿದ ಮಾತ್ರಕ್ಕೆ ಯಾರೂ ಧೋನಿ ಆಗಲು ಸಾಧ್ಯವಿಲ್ಲ ಎಂದರು.

  ಪ್ರಸಕ್ತ ಐಪಿಎಲ್​ನಲ್ಲಿ ರನ್ ಗಳಿಸಲು ಪರದಾಡುತ್ತಿರುವ ರಿಷಭ್ ಪಂತ್, 12 ಮ್ಯಾಚ್​ಗಳಿಂದ ಕೇವಲ 285 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಫಿಟ್​ನೆಸ್ ಸಮಸ್ಯೆಯನ್ನು ಯುವ ವಿಕೆಟ್ ಕೀಪರ್ ಎದುರಿಸುತ್ತಿದ್ದು, ಇದಾಗ್ಯೂ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದಾರೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
  Published by:zahir
  First published: