MI Emirates ಮತ್ತು MI Cape Town ತಂಡಗಳನ್ನು ಅನಾವರಣಗೊಳಿಸಿದ ರಿಲಯನ್ಸ್‌ ಇಂಡಸ್ಟ್ರೀಸ್

ಯುಎಇ ಇಂಟರ್‌ನ್ಯಾಷನಲ್ ಲೀಗ್ ಟಿ20 ಯಲ್ಲಿ ಎಂಐ ಎಮಿರೇಟ್ಸ್‌ (MI Emirates ) ಮತ್ತು ಕ್ರಿಕೆಟ್ ಸೌಥ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಎಂಐ ಕೇಪ್‌ ಟೌನ್‌ (MI Cape Town) ಹೆಸರುಗಳನ್ನು ಅನಾವರಣಗೊಳಿಸಲಾಗಿದೆ.

ನೀತಾ ಅಂಬಾನಿ

ನೀತಾ ಅಂಬಾನಿ

  • Share this:
    ಮುಂಬೈ, 10 ಆಗಸ್ಟ್ 2022: ಮುಂಬೈ ಇಂಡಿಯನ್ಸ್‌ (Mumbai Indiance) ಕ್ರಿಕೆಟ್ ತಂಡದ ಮಾಲೀಕರಾದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance industries) ಎರಡು ಹೊಸ ಫ್ರಾಂಚೈಸಿಗಳ ಹೆಸರುಗಳು ಮತ್ತು ಬ್ರ್ಯಾಂಡ್ (Brand) ಅನ್ನು ಅನಾವರಣ ಮಾಡಿದೆ. ಯುಎಇ ಇಂಟರ್‌ನ್ಯಾಷನಲ್ ಲೀಗ್ ಟಿ20 ಯಲ್ಲಿ ಎಂಐ ಎಮಿರೇಟ್ಸ್‌ (MI Emirates ) ಮತ್ತು ಕ್ರಿಕೆಟ್ ಸೌಥ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಎಂಐ ಕೇಪ್‌ ಟೌನ್‌ (MI Cape Town) ಹೆಸರುಗಳನ್ನು ಅನಾವರಣಗೊಳಿಸಲಾಗಿದೆ. ಇವು ನೀಲಿ ಮತ್ತು ಸ್ವರ್ಣ ಬಣ್ಣವನ್ನು ಹೊಂದಿರಲಿವೆ. ಈ ಹೆಸರುಗಳು ಅವು ಪ್ರತಿನಿಧಿಸುವ ಸ್ಥಳಗಳನ್ನೂ ಹೊಂದಿವೆ. ಎಂಐ ಎಮಿರೇಟ್ಸ್‌ ಅನ್ನು ಮೈ ಎಮಿರೇಟ್ಸ್‌ ಎಂದೂ ಎಂಐ ಕೇಪ್‌ ಟೌನ್‌ ಅನ್ನು ಮೈ ಕೇಪ್‌ ಟೌನ್ ಎಂದೂ ಕರೆಯಲಾಗುತ್ತದೆ.

    ಈ ಬಗ್ಗೆ ಮಾತನಾಡಿದ ರಿಲಯನ್ಸ್‌ ಇಂಡಸ್ಟ್ರೀಸ್‌ನ ನಿರ್ದೇಶಕಿ ಶ್ರೀಮತಿ ನೀತಾ ಎಂ ಅಂಬಾನಿ “ಒನ್ ಫ್ಯಾಮಿಲಿಯ ಹೊಸ ಸೇರ್ಪಡೆಗಳಾದ ಮೈ ಎಮಿರೇಟ್ಸ್‌ ಮತ್ತು ಮೈ ಕೇಪ್‌ಟೌನ್ ಅನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಮಗೆ ಎಂಐ ಎಂಬುದು ಬರಿ ಕ್ರಿಕೆಟ್‌ ಅಲ್ಲ. ಇದು ಕನಸು ಕಾಣಲು, ನಿರ್ಭೀತವಾಗಿರಲು ಮತ್ತು ಧನಾತ್ಮಕ ವರ್ತನೆಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಮೈ ಎಮಿರೇಟ್ಸ್‌ ಮತ್ತು ಮೈ ಕೇಪ್‌ ಟೌನ್‌ ಕೂಡ ಇದೇ ಧ್ಯೇಯವನ್ನು ಹೊಂದಿರುತ್ತವೆ ಎಂದು ನನಗೆ ಖಚಿತವಿದೆ” ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: Reliance Jewels: ವರಲಕ್ಷ್ಮಿ ಕಲೆಕ್ಷನ್ 2022 ಅನಾವರಣಗೊಳಿಸಿದ ರಿಲಯನ್ಸ್‌ ಜ್ಯುವೆಲ್ಸ್‌!

    ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್ನಲ್ಲಿ ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್ ಇಂಡಸ್ಟ್ರೀಸ್

    ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಇಟ್ಟಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ. ಅಷ್ಟೇ ಅಲ್ಲ, ಯುಎಇ ಮೂಲದ ಅಂತಾರಾಷ್ಟ್ರೀಯ ಲೀಗ್‌ ಟಿ-20 ತಂಡವನ್ನು ಖರೀದಿಸುವ ಸನಿಹದಲ್ಲೂ ಇದು ಇದೆ.

    ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‌ಬಾಲ್‌ ಲೀಗ್‌ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದೂ ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ ಮಹತ್ವದ ಪಾತ್ರ ವಹಿಸುತ್ತದೆ. ಮುಂದುವರಿದು, ರಿಲಯನ್ಸ್ ಫೌಂಡೇಶನ್‌ ಸ್ಪೋರ್ಟ್ಸ್‌ ಎಂಬ ಆರ್‌ಐಎಲ್‌ನ ಸಿಎಸ್‌ಆರ್‌ ವಿಭಾಗವು ಭಾರತದ ಒಲಿಂಪಿಕ್‌ ಚಳವಳಿಯನ್ನು ಮುನ್ನಡೆಸುತ್ತಿದೆ. ದೇಶದ ವಿವಿಧೆಡೆಯ ಅಥ್ಲೀಟ್‌ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ ಆಗಲಿ ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿವೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023 ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್‌ ಒಲಿಂಪಿಕ್‌ ಕಮಿಟಿ ಸೆಷನ್‌ ಅನ್ನು ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ.

    ಇದನ್ನೂ ಓದಿ: Asia Cup 2022: ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಕಟ, ಹೇಗಿರಲಿದೆ ಹೈವೋಲ್ಟೇಜ್ ಕದನ?

    ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಅಂಬಾನಿ ಮಾತನಾಡಿ “ರಿಲಯನ್ಸ್‌ ಕುಟುಂಬಕ್ಕೆ ಹೊಸ ಟಿ20 ತಂಡವನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್ ಅನ್ನು ದಕ್ಷಿಣ ಆಫ್ರಿಕಾಗೆ ತೆಗೆದುಕೊಂಡು ಹೋಗಲು ನಾವು ಬಯಸಿದ್ದೇವೆ. ಭಾರತದಷ್ಟೇ ದಕ್ಷಿಣ ಆಪ್ರಿಕಾ ಕೂಡ ಕ್ರಿಕೆಟ್ಟನ್ನು ಪ್ರೀತಿಸುತ್ತದೆ! ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಕ್ರೀಡಾ ಪರಿಸರವಿದೆ. ಈ ಸಹಭಾಗಿತ್ವ ಶಕ್ತಿ ಮತ್ತು ಸಹಭಾಗಿತ್ವವನ್ನು ನಾವು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.

    ರಿಲಯನ್ಸ್‌ ಜಿಯೋದ ಚೇರ್ಮನ್‌ ಆಕಾಶ್ ಅಂಬಾನಿ ಹೇಳುವಂತೆ “ನಮ್ಮ ದಕ್ಷಿಣ ಆಫ್ರಿಕಾ ಫ್ರಾಂಚೈಸಿಯಿಂದಾಗಿ ಮೂರು ದೇಶಗಳಲ್ಲಿ ಮೂರು ಟಿ20 ಟೀಮ್‌ಗಳಿವೆ. ಕ್ರಿಕೆಟ್‌ನಲ್ಲಿ ನಮ್ಮ ಪರಿಣಿತಿ ಮತ್ತು ಆಳವಾದ ಜ್ಞಾನವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ಇದು ತಂಡವನ್ನು ನಿರ್ಮಾಣ ಮಾಡಲು ಮತ್ತು ಅಭಿಮಾನಿಗಳಿಗೆ ಉತ್ತಮ ಕ್ರಿಕೆಟ್ ಅನುಭವವನ್ನು ಇದು ಒದಗಿಸಲಿದೆ.”

    ಕ್ರಿಕೆಟ್ ಸೌತ್‌ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.
    Published by:Harshith AS
    First published: