ವಿಶ್ವಕಪ್ನ 39ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಶ್ರೀಲಂಕಾ ವಿರುದ್ದ 23 ರನ್ಗಳಿಂದ ಸೋಲುಂಡಿದೆ. ಲಂಕಾ ಬ್ಯಾಟ್ಸ್ಮನ್ಗಳು ನೀಡಿದ 338 ರನ್ಗಳ ಗುರಿ ಬೆನ್ನಟ್ಟಿದ್ದ ಕೆರಿಬಿಯನ್ನರು 315 ರನ್ಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಈ ರೋಚಕ ಹಣಾಹಣಿಗೆ ವಿಶ್ವದ ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಕೂಡ ಸಾಕ್ಷಿಯಾಗಿದ್ದರು.
ಈ ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ಆಟಗಾರರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ ಗಾಯಕಿ ಆಟಗಾರರೊಂದಿಗೆ ಫೋಟೋಗೆ ಪೋಸ್ ನೀಡಿದರು. ಇದೇ ವೇಳೆ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಸಹಿ ಮಾಡಿರುವ ಬ್ಯಾಟ್ವೊಂದನ್ನು ರಿಹಾನ್ನಾಗೆ ಗಿಫ್ಟ್ ನೀಡಿದ್ದಾರೆ.
ರಿಹಾನ್ನಾ ಕೂಡ ಕೆರಿಬಿಯನ್ ಮೂಲದವರಾಗಿದ್ದು, ನಿನ್ನೆಯ ಪಂದ್ಯಕ್ಕೆ ವಿಂಡೀಸ್ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೀಗ ವೆಸ್ಟ್ ಇಂಡೀಸ್ ಡ್ರೆಸ್ಸಿಂಗ್ ರೂಂಗೆ ತೆರಳಲು ಖ್ಯಾತ ಗಾಯಕಿಗೆ ಅವಕಾಶ ನೀಡಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈಗಾಗಲೇ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿರುವ ಜೇಸನ್ ಹೋಲ್ಡರ್ ಪಡೆ ವಿಶ್ವಕಪ್ನಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಇದರ ಬೆನ್ನಲ್ಲೇ ಖ್ಯಾತ ಪಾಪ್ ಗಾಯಕಿಯ ಡ್ರೆಸ್ಸಿಂಗ್ ರೂಮ್ಗೆ ತೆರಳಿರುವುದು ಕೆಲ ಅನುಮಾನಗಳನ್ನು ಹುಟ್ಟು ಹಾಕಿದೆ.
When @rihanna met the Universe Boss 🎤 🌎#CWC19 | #MenInMaroon pic.twitter.com/a5lt6fVIFx
— Cricket World Cup (@cricketworldcup) July 1, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ