HOME » NEWS » Sports » CRICKET RIGHT HANDED YUVRAJ SINGH HITTING SIX SIXES OFF LEFT HANDED HERE IS THE VIDEO VB

ಎಡಗೈ ದಾಂಡಿಗ ಯುವಿ ಆ ಆರು ಸಿಕ್ಸರನ್ನು ಬಲಗೈನಲ್ಲಿ ಚಚ್ಚಿದ್ರೆ ಹೇಗಿರುತ್ತೆ?; ಇಲ್ಲಿದೆ ವಿಡಿಯೋ

12 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ಯುವರಾಜ್ ನೂತನ ಸಾಧನೆ ಮಾಡಿದರು. ಒಟ್ಟು 16 ಎಸೆತಗಳನ್ನು ಎದುರಿಸಿದ ಯುವಿ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್​ಗಳ ನೆರವಿನಿಂದ 58 ರನ್ ಗಳಿಸಿದರು.

news18-kannada
Updated:June 6, 2020, 11:26 AM IST
ಎಡಗೈ ದಾಂಡಿಗ ಯುವಿ ಆ ಆರು ಸಿಕ್ಸರನ್ನು ಬಲಗೈನಲ್ಲಿ ಚಚ್ಚಿದ್ರೆ ಹೇಗಿರುತ್ತೆ?; ಇಲ್ಲಿದೆ ವಿಡಿಯೋ
ಯುವರಾಜ್ ಸಿಂಗ್
  • Share this:
ವಿಶ್ವಕಪ್‌ ಟಿ-20 ಪಂದ್ಯವೊಂದರ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ ಆರು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆಗೆ ಅಟ್ಟಿ ಆರು ಸಿಕ್ಸ್ ಸಿಡಿಸಿದ ಯುವರಾಜ್ ಸಿಂಗ್‌ ಆಟದ ವೈಭವ ನೆನಪಿದೆಯೇ?.

ನಿಜ, 2007ರ ಸೆಪ್ಟೆಂಬರ್‌ 19ರಂದು ಭಾರತದ ಡ್ಯಾಶಿಂಗ್‌ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌, ದಕ್ಷಿಣ ಆಫ್ರಿಕಾದ ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ಐಸಿಸಿಯ ಆರಂಭಿಕ ವಿಶ್ವಕಪ್‌ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್‌ನ ಯುವ ಬೌಲರ್ ಸ್ಟುವರ್ಟ್‌ ಬ್ರಾಡ್‌ ಓವರ್‌ನ ಸತತ ಆರು ಎಸೆತಗಳನ್ನು ಸಿಕ್ಸರ್‌ ಆಗಿ ಪರಿವರ್ತಿಸಿದ್ದರು.

ಲಾಕ್​​ಡೌನ್​ ವೇಳೆ ಕೊಹ್ಲಿ ಇನ್​​​ಸ್ಟಾದಲ್ಲಿ ಎಷ್ಟು ಆದಾಯ ಗಳಿಸುತ್ತಿದ್ದಾರೆ ಗೊತ್ತಾ?

ಅಂತರಾಷ್ಟ್ರೀಯ ಕ್ರಿಕೆಟ್ ಚರಿತ್ರೆಯಲ್ಲಿ ಒಬ್ಬ ಬ್ಯಾಟ್ಸ್​ಮನ್​​ ನಾಲ್ಕನೇ ಬಾರಿಗೆ ಸತತ ಆರು ಸಿಕ್ಸ್ ಚಚ್ಚಿದ ದಾಖಲೆಯದು. ಆದರೆ, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಸತತ ಆರು ಸಿಕ್ಸ್ ಸಿಡಿದ ಚರಿತ್ರೆ ನಿರ್ಮಾಣ ಆಗಿತ್ತು. ಆ ಪಂದ್ಯವನ್ನು 18 ರನ್​ಗಳಿಂದ ಭಾರತ ಗೆದ್ದುಕೊಂಡಿತ್ತು. ಅದಕ್ಕೆ ಕಾರಣ ಸ್ಟುವರ್ಟ್ ಬ್ರಾಡ್​ರ 18ನೇ ಓವರ್​ನಲ್ಲಿ ಯುವರಾಜ್ ಗಳಿಸಿದ 38 ರನ್​ಗಳು ಎನ್ನುವುದು ಇದೀಗ ಇತಿಹಾಸ.

 12 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ಯುವರಾಜ್ ನೂತನ ಸಾಧನೆ ಮಾಡಿದರು. ಒಟ್ಟು 16 ಎಸೆತಗಳನ್ನು ಎದುರಿಸಿದ ಯುವಿ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್​ಗಳ ನೆರವಿನಿಂದ 58 ರನ್ ಗಳಿಸಿದರು. ಸದ್ಯ ಯುವರಾಜ್ ಸತತ ಆರು ಸಿಕ್ಸ್ ಸಿಡಿಸಿದ ವಿಡಿಯೋವನ್ನು ಯೂ ಟ್ಯೂಬ್​​ ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ.

Yuvraj Singh: ಕೊನೆಗೂ ಕ್ಷಮೆಯಾಚಿಸಿದ ಯುವರಾಜ್ ಸಿಂಗ್..!

Youtube Video
First published: June 6, 2020, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories