ರೋಹಿತ್-ಕೊಹ್ಲಿ ಜಟಾಪಟಿ: ಟೀಂ ಇಂಡಿಯಾದಲ್ಲಿ ಎರಡು ಗುಂಪು..!

Virat Kohli and Rohit Sharma: ಹಾಗೆಯೇ ತಂಡದ ಎಲ್ಲಾ ಆಟಗಾರರಿಗೆ ವಿರಾಟ್​ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂಬ ಬಗ್ಗೆ ಯಾವುದೇ ತಕರಾರಿಲ್ಲ. ಬದಲಾಗಿ ಅವರ ನಾಯಕತ್ವದ ಗುಣವನ್ನು ಒಪ್ಪಿಕೊಳ್ಳಲಾಗುವುದಿಲ್ಲ.

zahir | news18
Updated:July 13, 2019, 3:53 PM IST
ರೋಹಿತ್-ಕೊಹ್ಲಿ ಜಟಾಪಟಿ: ಟೀಂ ಇಂಡಿಯಾದಲ್ಲಿ ಎರಡು ಗುಂಪು..!
Kohli and Rohit Sharma
  • News18
  • Last Updated: July 13, 2019, 3:53 PM IST
  • Share this:
ವಿಶ್ವಕಪ್​​ನಿಂದ ಟೀಂ ಇಂಡಿಯಾ ಹೊರ ಬೀಳುತ್ತಿದ್ದಂತೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬ ಸ್ಪೋಟಕ ಸುದ್ದಿಗಳು ಹೊರ ಬೀಳುತ್ತಿವೆ. ಸೆಮಿ ಫೈನಲ್​ ಸೋಲಿಗೆ ನಾಯಕ ವಿರಾಟ್ ಹಾಗೂ ಕೋಚ್ ರವಿ ಶಾಸ್ತ್ರಿ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇವರಿಬ್ಬರು ನಿರ್ಧಾರವೇ ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯಗಳು ತಂಡದ ಆಟಗಾರರಲ್ಲಿದೆ. ಟೀಂ ಇಂಡಿಯಾದ ಕೆಲ ಆಟಗಾರರು ಕೋಚ್ ಶಾಸ್ತ್ರಿಯ ಪ್ಲ್ಯಾನ್​ಗಳ ಬಗ್ಗೆ ದೂಷಿಸಿದರೆ ಮತ್ತೆ ಕೆಲವರು ವಿಶ್ವಕಪ್​ ಟೂರ್ನಿಯಲ್ಲಿ ನಾಯಕನ ನಿರ್ಧಾರದ ಬಗ್ಗೆ ಸಂತುಷ್ಟರಾಗಿರಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೋಚ್ ಮತ್ತು ಕ್ಯಾಪ್ಟನ್​ದ್ದೇ ಆಟ:
ತಂಡದಲ್ಲಿ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ  ಪ್ರತಿಯೊಂದನ್ನು ಪ್ಲ್ಯಾನ್​ ಮಾಡಿಕೊಳ್ಳುತ್ತಿದ್ದರು. ಆದರೆ ತಂಡದ ಉಳಿದವರೊಂದಿಗೆ ಯಾವುದೇ ಸಮಾಲೋಚನೆ ನಡೆಸುತ್ತಿರಲಿಲ್ಲ ಎಂದು ಅಸಮಾನಧಾನಗೊಂಡಿದ್ದಾರೆ. ಆದರೆ ಆಟಗಾರರು ಭಯದಿಂದ ಇದನ್ನು ವಿರೋಧಿಸಲು ಮುಂದಾಗುತ್ತಿರಲಿಲ್ಲ. ಕ್ಯಾಪ್ಟನ್ ಹಾಗೂ ಕೋಚ್​ ತೆಗೆದುಕೊಳ್ಳುತ್ತಿದ್ದ ಏಕಪಕ್ಷೀಯ ನಿರ್ಧಾರವೇ ವಿಶ್ವಕಪ್​ನಿಂದ ಭಾರತ ತಂಡ ಹೊರ ಬೀಳಲು ಮುಖ್ಯ ಕಾರಣ ಎಂದು ವರದಿಯಲ್ಲಿ ತಿಳಿಸಿದೆ.

ನಾಯಕ-ಉಪನಾಯಕ ಜಟಾಪಟಿ:
ವರದಿ ಪ್ರಕಾರ, ಭಾರತ ತಂಡವು ವಿಶ್ವಕಪ್ ಟೂರ್ನಿ ವೇಳೆ ಎರಡು ಗುಂಪುಗಳಾಗಿ ವಿಂಗಡನೆಯಾಗಿತ್ತು. ಒಂದಷ್ಟು ಆಟಗಾರರು ರೋಹಿತ್ ಶರ್ಮಾರನ್ನು ಬೆಂಬಲಿಸುತ್ತಿದ್ದರೆ, ಕೆಲವರು ನಾಯಕ ವಿರಾಟ್ ಕೊಹ್ಲಿ ಜೊತೆಗಿದ್ದರು. ಇದಕ್ಕೆ ಮುಖ್ಯ ಕಾರಣ ನಾಯಕನನ್ನು ಬೆಂಬಲಿಸಿದರೆ ತಂಡದಲ್ಲಿ ಸ್ಥಾನ ಸಿಗುವುದೆಂಬ ವಿಶ್ವಾಸ. ಆದರೆ ರೋಹಿತ್ ಜೊತೆಗಿದ್ದವರಿಗೆ ತಂಡದಲ್ಲಿ ಯಾವುದೇ ಸ್ಥಾನ ಸಿಗುತ್ತದೆ ಎಂಬ ಖಾತ್ರಿ ಇರಲಿಲ್ಲ. ಆದರೂ ಪ್ರದರ್ಶನದ ಆಧಾರದ ಮೇಲೆ ರೋಹಿತ್ ಶರ್ಮಾ ಹಾಗೂ ಜಸ್​ಪ್ರೀತ್ ಬುಮ್ರಾ ಅವರಿಗೆ ಮಣೆ ಹಾಕಲಾಗಿತ್ತು ಎನ್ನಲಾಗಿದೆ. ಇನ್ನು ತಂಡದ ಆಯ್ಕೆ ವಿಷಯದಲ್ಲೂ ಕೊಹ್ಲಿ ತಮ್ಮ ಆಪ್ತರನ್ನು ಆರಿಸಿಕೊಳ್ಳಲು ಬಯಸಿದ್ದಾಗಿ ಕೂಡ ವರದಿಯಲ್ಲಿ ತಿಳಿಸಿದೆ. ಹೀಗಾಗಿಯೇ ಕೆ.ಎಲ್ ರಾಹುಲ್​ಗೆ ಅವಕಾಶ ನೀಡಲಾಯಿತು. ಅದೇ ರೀತಿ ಉತ್ತಮ ಸ್ಪಿನ್ ದಾಳಿ ನಡೆಸಿದರೂ ಕುಲ್​ದೀಪ್ ಯಾದವ್ ಬದಲಿಗೆ ಆರ್​ಸಿಬಿ ಆಟಗಾರ ಯಜುವೇಂದ್ರ ಚಾಹಲ್​ಗೆ ಹೆಚ್ಚಿನ ಅವಕಾಶ ನೀಡಲಾಯಿತು ಎನ್ನಲಾಗಿದೆ.

ಒಡೆದು ಹೋದ ಟೀಂ ಇಂಡಿಯಾ:
ನಾಯಕ ಮತ್ತು ಕೋಚ್​ ನಿರ್ಧಾರದಿಂದ ಟೀಂ ಇಂಡಿಯಾ ಒಡೆದು ಹೋಗಿದ್ದು, ಇದರ ಪರಿಣಾಮ ಸೆಮಿ ಫೈನಲ್​ ಪಂದ್ಯದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹಾಗೆಯೇ ತಂಡದ ಎಲ್ಲಾ ಆಟಗಾರರಿಗೆ ವಿರಾಟ್​ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂಬ ಬಗ್ಗೆ ಯಾವುದೇ ತಕರಾರಿಲ್ಲ. ಬದಲಾಗಿ ಅವರ ನಾಯಕತ್ವದ ಗುಣವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಕೆಲ ಆಟಗಾರರು ಹೇಳಿಕೊಂಡಿರುವುದಾಗಿ ವರದಿಯಲ್ಲಿ ತಿಳಿಸಿದೆ.ಅವಕಾಶ ವಂಚಿತ ರಾಯುಡು: 
ಇನ್ನು ಉತ್ತಮ ಫಾರ್ಮ್ ಹಾಗೂ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದ ಅಂಬಾಟಿ ರಾಯುಡುರನ್ನು ತಂಡದ ಆಯ್ಕೆಯಿಂದ ಕೈ ಬಿಡಲು ಇದುವೇ ಕಾರಣ ಎನ್ನಲಾಗಿದೆ. ಇಲ್ಲಿ ಕೊಹ್ಲಿ ತಮ್ಮವರಿಗೆ ಸ್ಥಾನ ನೀಡಲು ಹೆಚ್ಚು ಆಸಕ್ತಿವಹಿಸಿದ್ದರು. ರಾಯುಡು ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದೇ ಆಯ್ಕೆ ವೇಳೆ ನಿರ್ಲಕ್ಷ್ಯಕ್ಕೆ ಕಾರಣವಾಯಿತು ಎಂದು ಸಹ ವರದಿಯಲ್ಲಿ ತಿಳಿಸಲಾಗಿದೆ.

ನಿರ್ವಾಹಕ ಸಮಿತಿಯಿಂದ ವಿಚಾರಣೆ?

ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೋತು ಟೀಂ ಇಂಡಿಯಾ ವರ್ಲ್ಡ್​ಕಪ್ ಅಭಿಯಾನವನ್ನು ಕೊನೆಗೊಳಿಸಿದೆ. ಈ ಹೀನಾಯ ಸೋಲಿನ ಕುರಿತು ಹಲವು ವಿಮರ್ಶೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದ ನಾಯಕ ವಿರಾಟ್​ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿ ನಿರ್ವಾಹಕರ ಸಮಿತಿ (ಸಿಒಎ) ಮುಂದೆ ಹಾಜರಾಗಬೇಕಿದೆ.

ಇದನ್ನೂ ಕ್ಲಿಕ್ ಮಾಡಿ: ಕೊಹ್ಲಿ ಕ್ಯಾಪ್ಟನ್​​ ಸ್ಥಾನಕ್ಕೆ ಕುತ್ತು: ಟೀಂ ಇಂಡಿಯಾದ ಹೊಸ ನಾಯಕ ರೋಹಿತ್ ಶರ್ಮಾ

ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಿಒಎ ಸಮಿತಿಯು ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ತಂಡದ ಪ್ರಮುಖರೊಂದಿಗೆ ಚರ್ಚಿಸಲಿದೆ. ಅಲ್ಲದೆ ಈ ಸಭೆಯಲ್ಲಿ ಮುಂದಿನ ವಿಶ್ವಕಪ್​ ಟಿ20ಗೆ ಮಬೇಕಿರುವ ಯೋಜನೆಗಳನ್ನು ಪುನರ್​ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಸೆಮಿಫೈನಲ್ ಸೋಲು: ಭಾರತಕ್ಕೆ ಮರಳಿದ ಬಳಿಕ ಕ್ಯಾಪ್ಟನ್​ ಕೊಹ್ಲಿ- ಕೋಚ್ ಶಾಸ್ತ್ರಿಗೆ ಕಾದಿದೆ ಕಂಟಕ..!
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ