Ricky Ponting| ಭಾರತ ಕ್ರಿಕೆಟ್​ ತಂಡದ ಕೋಚ್​ ಸ್ಥಾನಕ್ಕೆ ರಿಕಿ ಪಾಂಟಿಂಗ್ ಸಂಪರ್ಕಿಸಿದ BCCI: ನಿರಾಕರಿಸಿದ ಪಂಟರ್​!

ರಾಹುಲ್ ಒಬ್ಬರೇ ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ಆದರ್ಶ ಮತ್ತು ಸೂಕ್ತ ಅಭ್ಯರ್ಥಿ. ನಿಜ ಹೇಳಬೇಕೆಂದರೆ, ದ್ರಾವಿಡ್ ಹೊರತು ಬೇರೆ ಆಯ್ಕೆಯೂ ಬಿಸಿಸಿಐ ಮುಂದೆ ಇರಲಿಲ್ಲ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ರಿಕಿ ಪಾಂಟಿಂಗ್.

ರಿಕಿ ಪಾಂಟಿಂಗ್.

  • Share this:
    ಭಾರತದ ಹಿರಿಯರ ಪುರುಷ ತಂಡಕ್ಕೆ (Team India) ತರಬೇತುದಾರನನ್ನಾಗಿ ಬಿಸಿಸಿಐ ಮೊದಲು ಆಸ್ಟ್ರೇಲಿಯಾದ (Australia) ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಅವರನ್ನು ನೇಮಿಸಲು ಮುಂದಾಗಿತ್ತು. ಆದರೆ, ಐಪಿಎಲ್​ನಲ್ಲಿ (IPL 2021) ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಂಡಕ್ಕೆ ಈಗಾಗಲೇ ಕೋಚ್​ ಆಗಿರುವ ಕಾರಣಕ್ಕೆ ರಿಕಿ ಪಾಂಟಿಂಗ್ ಬಿಸಿಸಿಐನ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಭಾರತದ ಅಂಡರ್​-19 ತಂಡದ ಕೋಚ್​ ಮತ್ತು ಭಾರತದ ಮಾಜಿ ನಾಯಕ ದಂತಕಥೆ ರಾಹುಲ್ ದ್ರಾವಿಡ್​ (Rahul Dravid) ಅವರನ್ನು ಬಿಸಿಸಿಐ ಟಿ20 ವಿಶ್ವಕಪ್​ ನಂತರ ಭಾರತ ಪುರುಷರ ತಂಡಕ್ಕೆ ಕೋಚ್​ ಆಗಿ ನೇಮಕ ಮಾಡಿದೆ. ರಾಹುಲ್ ದ್ರಾವಿಡ್​ ಸಹ ಬಿಸಿಸಿಐನ ಕೋರಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಭಾರತದ ಕೋಚ್ ಆಗಲು ರಿಕಿ ಪಾಂಟಿಂಗ್ ನಕಾರ:

    ಈ ಬಗ್ಗೆ ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದ್ದು, ಈ ವರದಿಯ ಪ್ರಕಾರ ರಿಕಿ ಪಾಂಟಿಂಗ್​ ಟೀಂ ಇಂಡಿಯಾ ಕೋಚ್​ ಸ್ಥಾನವನ್ನು ನಿರಾಕರಿಸಲು ಯಾವುದೇ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ, ಟೀಂ ಇಂಡಿಯಾಗೆ ಶೀಘ್ರದಲ್ಲೇ ರಾಹುಲ್ ದ್ರಾವಿಡ್ ಕೋಚ್​ ಆಗಲಿದ್ದಾರೆ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

    ರಿಕಿ ಪಾಂಟಿಂಗ್‌ರ ಗರಡಿಯಲ್ಲಿ ಪಳಗಿದ ಡೆಲ್ಲಿ ಕ್ಯಾಪಿಟಲ್ಸ್​ ಕಳೆದ ಐಪಿಎಲ್​ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಆದರೆ, ಈ ವರ್ಷ ಕಪ್ ಗೆಲ್ಲುವ ಫೇವರಿಟ್​ ಎನಿಸಿಕೊಂಡಿತ್ತು. ಆದರೆ, ಕೆಕೆಆರ್​ ಎದುರು ಸೋಲುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

    "ರಾಹುಲ್ ಒಬ್ಬರೇ ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ಆದರ್ಶ ಮತ್ತು ಸೂಕ್ತ ಅಭ್ಯರ್ಥಿ. ನಿಜ ಹೇಳಬೇಕೆಂದರೆ, ದ್ರಾವಿಡ್ ಹೊರತು ಬೇರೆ ಆಯ್ಕೆಯೂ ಬಿಸಿಸಿಐ ಮುಂದೆ ಇರಲಿಲ್ಲ" ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

    ಈ ಹಿಂದೆ ಬಿಸಿಸಿಐ ಪ್ರಸ್ತಾಪವನ್ನು ತಿರಸ್ಕರಿದ್ದ ದ್ರಾವಿಡ್:

    ಬಿಸಿಸಿಐ ಈ ಹಿಂದೆಯೂ ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಕೋಚ್​ ಸ್ಥಾನಕ್ಕೆ ಸಂಪರ್ಕಿಸಿತ್ತಾದರೂ, ಭಾರತದ ಮಾಜಿ ನಾಯಕ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಏಕೆಂದರೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಕೆಲಸ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದರು.

    ಇದನ್ನೂ ಓದಿ: Anil Kumble Birthday| ಪಾಕ್​ ವಿರುದ್ಧ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ಗಳಿಸಿದ ಚಾಂಪಿಯನ್​ ಸ್ಪಿನ್ನರ್​ ಚಮತ್ಕಾರ ಇಲ್ಲಿದೆ ನೋಡಿ!

    ವರದಿಯ ಪ್ರಕಾರ, ಬಿಸಿಸಿಐ ದ್ರಾವಿಡ್‌ಗೆ ಪ್ರಸ್ತುತ ದ್ರಾವಿಡ್ ಎನ್‌ಸಿಎಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಅವರು ಟೀಮ್ ಇಂಡಿಯಾದೊಂದಿಗೆ ತನ್ನ ಒಡನಾಟವನ್ನು ಮುಂದುವರಿಸಬೇಕು ಎಂಬ ಏಕೈಕ ಆಯ್ಕೆಯನ್ನು ಮುಂದಿಟ್ಟಿತ್ತು. ಇದೇ ಕಾರಣಕ್ಕೆ ದ್ರಾವಿಡ್ ಇದೀಗ ಟೀಂ ಇಂಡಿಯಾ ಕೋಚ್​ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: IND vs PAK| T20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಸವಾಲು ಒಡ್ಡುವ ಸಾಮರ್ಥ್ಯ ಪಾಕ್ ತಂಡಕ್ಕಿಲ್ಲ; ಅಜಿತ್ ಅಗರ್ಕರ್

    ಏತನ್ಮಧ್ಯೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತ ತಂಡದ ಕೋಚ್​ ಹುದ್ದೆಗೆ ಯಾರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಕೈಗೊಂಡ ಶ್ರೀಲಂಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಎರಡನೇ ಹಂತದ ಭಾರತೀಯ ಸೀಮಿತ ಓವರ್‌ಗಳ ತಂಡದ ತರಬೇತುದಾರರಾಗಿದ್ದರು.
    Published by:MAshok Kumar
    First published: