ನಿವೃತ್ತಿ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಜಿಂಬಾಬ್ವೆ ನಾಯಕ; 18 ವರ್ಷಗಳ ಕ್ರಿಕೆಟ್ ಬದುಕಿಗೆ ಮಸಕಜ ವಿದಾಯ!

ವಿದಾಯದ ಪಂದ್ಯದಲ್ಲಿ ನಾಯಕನ ಆಟ ಆಡಿದ ಹ್ಯಾಮಿಲ್ಟನ ಮಸಕಜ ನಿವೃತ್ತಿಯ ಪಂದ್ಯದಲ್ಲಿ ಗರಿಷ್ಠ ರನ್​ ಬಾರಿಸಿ ವಿಶ್ವದಾಖಲೆಗೆ ಪಾತ್ರರಾದರು.

ಜಿಂಬಾಬ್ವೆ: 3ಆಟಗಾರರು

ಜಿಂಬಾಬ್ವೆ: 3ಆಟಗಾರರು

  • Share this:
ಬೆಂಗಳೂರು (ಸೆ. 21): ತನ್ನ ಕ್ರಿಕೆಟ್ ವೃತ್ತಿ ಬದುಕಿನ ಕಟ್ಟ ಕಡೆಯ ಪಂದ್ಯವನ್ನಾಡಿದ ಜಿಂಬಾಬ್ವೆ ತಂಡದ ನಾಯಕ ಹ್ಯಾಮಿಲ್ಟನ್ ಮಸಕಜ ಸ್ಫೋಟಕ ಬ್ಯಾಟಿಂಗ್ ಮೂಲಕ ಅಫ್ಘಾನಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದಿಟ್ಟರು.

ಅಫ್ಘಾನಿಸ್ತಾನ ನೀಡಿದ್ದ 156 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ಆರಂಭದಲ್ಲೇ ಬ್ರೆಂಡನ್ ಟೇಲರ್ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಆಸರೆಯಾಗಿದ್ದು ನಾಯಕ ಹ್ಯಾಮಿಲ್ಟನ್ ಮಸಕಜ ಹಾಗೂ ರೆಗಿಸ್ ಜಕಬ್ವ. ಅಫ್ಘಾನ್ ಬೌಲರ್​ಗಳ ಬೆವರಿಳಿಸಿದ ಮಸಕಡ್ಡಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಕೊನೆಯ ಪಂದ್ಯದಲ್ಲಿ ತಂಡದ ಗೆಲುವಿಗೆ ಹೋರಾಟ ನಡೆಸಿದ ನಾಯಕ 42 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​ ಸಿಡಿಸಿ 71 ರನ್ ಚಚ್ಚಿದರು. ಇವರ ಅತ್ಯುತ್ತಮ ಆಟದ ನೆರವಿನಿಂದ ಜಿಂಬಾಬ್ವೆ 19.3 ಓವರ್​ನಲ್ಲಿ 156 ರನ್ ಬಾರಿಸಿ 7 ವಿಕೆಟ್​ಗಳಿಂದ ಗೆಲುವಿನ ನಗೆ ಬೀರಿತು.

ಬೆಂಗಳೂರಿನಲ್ಲಿ ಟೀಂ ಇಂಡಿಯಾ ಜೊತೆ ಅಭ್ಯಾಸದಲ್ಲಿ ಪಾಲ್ಗೊಂಡ ರಾಹುಲ್ ದ್ರಾವಿಡ್

 ಈ ಮೂಲಕ ವಿದಾಯದ ಪಂದ್ಯದಲ್ಲಿ ನಾಯಕನ ಆಟ ಆಡಿದ ಹ್ಯಾಮಿಲ್ಟನ ಮಸಕಜ ನಿವೃತ್ತಿಯ ಪಂದ್ಯದಲ್ಲಿ ಗರಿಷ್ಠ ರನ್​ ಬಾರಿಸಿ ವಿಶ್ವದಾಖಲೆಗೆ ಪಾತ್ರರಾದರು.

2001 ರಲ್ಲಿ ಜಿಂಬಾಬ್ವೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮಸಕಜ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೆ ಪಾತ್ರರಾದರು. 38 ಟೆಸ್ಟ್ ಪಂದ್ಯಗಳನ್ನು ಇವರು ಆಡಿದ್ದು​, 209 ಏಕದಿನ ಹಾಗೂ 65 ಟಿ-20 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಮಸಕಜ, 'ಈ ಪಂದ್ಯ ನನಗೆ ತುಂಬಾ ವಿಶೇಷ. ನಾಯಕನಾಗಿ ತಂಡವನ್ನು ಮುನ್ನಡೆಸಿ ನಿವೃತ್ತಿಯ ಪಂದ್ಯದಲ್ಲಿ ಜಯ ಸಾಧಿಸಿದ್ದೇನೆ. ಅದರಲ್ಲು ನನ್ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಮೊದಲ ಬಾರಿ ಸೋಲಿಸಿದ್ದು ಮರೆಯಲಾಗ ಕ್ಷಣ' ಎಂದು ಬಾವುಕರಾದರು.

First published: