ಕೊಹ್ಲಿ ಅಭಿಮಾನಿಗಳಿಗೆ ಆಘಾತ; ಬಾಂಗ್ಲಾ ಸರಣಿಯಿಂದ ವಿರಾಟ್ ಹೊರಕ್ಕೆ?

ಕಳೆದ 12 ತಿಂಗಳುಗಳಲ್ಲಿ ಭಾರತ 10 ಟೆಸ್ಟ್​, 28 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದೆ. ಈ ಪೈಕಿ 6 ಟಿ-20 ಹಾಗೂ ಎರಡು ಏಕದಿನ ಪಂದ್ಯಗಳಿಗಷ್ಟೆ ಕೊಹ್ಲಿ ಅಲಭ್ಯರಾಗಿದ್ದರು.

Vinay Bhat | news18-kannada
Updated:October 19, 2019, 1:09 PM IST
ಕೊಹ್ಲಿ ಅಭಿಮಾನಿಗಳಿಗೆ ಆಘಾತ; ಬಾಂಗ್ಲಾ ಸರಣಿಯಿಂದ ವಿರಾಟ್ ಹೊರಕ್ಕೆ?
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
Vinay Bhat | news18-kannada
Updated: October 19, 2019, 1:09 PM IST
ಬೆಂಗಳೂರು (ಅ. 19): ಟೀಂ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಮೂರನೇ ಟೆಸ್ಟ್​ ಪಂದ್ಯವನ್ನು ಆಡುತ್ತಿದೆ. ಇದಾದ ಬಳಿಕ ಮುಂದಿನ ತಿಂಗಳು ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

Reports: India vs Bangladesh, Virat Kohli set to be rested for Bangladesh T20I series
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ


IND vs BAN: ಬಾಂಗ್ಲಾ ವಿರುದ್ಧ ಟಿ-20 ಫೈಟ್; ದ್ವಿಶತಕ ವೀರನಿಗೆ ಸ್ಥಾನ; ಲಿಸ್ಟ್​ನಲ್ಲಿ ಆರ್​ಸಿಬಿ ಆಟಗಾರ?

ಬಾಂಗ್ಲಾ ವಿರುದ್ಧ ಭಾರತ ನ. 3 ರಂದು ಡೆಲ್ಲಿಯಲ್ಲಿ ಮೊದಲ ಟಿ-20 ಪಂದ್ಯ ಆಡಿದರೆ, ಎರಡನೇ ಪಂದ್ಯ ನ .7 ರಾಜ್ಕೋಟ್​ನಲ್ಲಿ ಹಾಗೂ ನ. 10 ರಂದು ನಾಗ್ಪುರದಲ್ಲಿ ಅಂತಿಮ ಮೂರುನೆ ಟಿ-20 ಆಯೋಜಿಸಲಾಗಿದೆ. ಟಿ-20 ಸರಣಿಗೆ ಭಾರತ ತಂಡವನ್ನು ಆಯ್ಕೆ ಸಮಿತಿ ಅಕ್ಟೋಬರ್ 24 ರಂದು ಪ್ರಕಟಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ನಡುವೆ ಟಿ-20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಿದೆ ಎಂದು ತಿಳಿದುಬಂದಿದೆ. ಬಿಡುವಿಲ್ಲದೆ ಸತತವಾಗಿ ಕೊಹ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಕೊಹ್ಲಿಗೆ ರೆಸ್ಟ್ ನೀಡುವ ಅಂದಾಜಿನಲ್ಲಿ ಬಿಸಿಸಿಐ ಇದೆ ಎಂದು ಹೇಳಲಾಗಿದೆ.

ಬಾಂಗ್ಲಾದೇಶ ಸರಣಿ ಮುಗಿದ ಬೆನ್ನಲ್ಲೆ ಟೀಂ ಇಂಡಿಯಾ ತವರಿನಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯ ಆಡಲಿದೆ. ನಂತರ ಶ್ರೀಲಂಕಾ ವಿರುದ್ಧ 3 ಟಿ-20, ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆಸೀಸ್ ಹಾಗೂ ಕಿವೀಸ್ ವಿರುದ್ಧ 5 ಟಿ-20, ಮೂರು ಏಕದಿನ ಹಾಗೂ 2 ಟೆಸ್ಟ್​ ಪಂದ್ಯ ಆಡಲಿದೆ.

India vs South Africa, Live Cricket Score: ರೋಹಿತ್ ಆಕರ್ಷಕ ಅರ್ಧಶತಕ; ರಹಾನೆ ಭರ್ಜರಿ ಆಟ
Loading...

ಕಳೆದ 12 ತಿಂಗಳುಗಳಲ್ಲಿ ಭಾರತ 10 ಟೆಸ್ಟ್​, 28 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದೆ. ಈ ಪೈಕಿ 6 ಟಿ-20 ಹಾಗೂ ಎರಡು ಏಕದಿನ ಪಂದ್ಯಗಳಿಗಷ್ಟೆ ಕೊಹ್ಲಿ ಅಲಭ್ಯರಾಗಿದ್ದರು. ಸದ್ಯ ಮುಂದಿನ ವರ್ಷ ಐಸಿಸಿ ಟಿ-20 ವಿಶ್ವಕಪ್ ಇರುವ ಹಿನ್ನಲೆ ಹಾಗೂ ಇದಕ್ಕೂ ಮುನ್ನ ಸಾಕಷ್ಟು ಸರಣಿಗಳಿರುವ ಕಾರಣ ಕೊಹ್ಲಿ ವಿಶ್ರಾಂತಿ ಮೊರೆ ಹೋಗಲಿದ್ದಾರಂತೆ.

ಟಿ-20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಯೋಚನೆ ಬಿಸಿಸಿಐ ಮನದಲ್ಲಿದ್ದು, ಸಂಜು ಸ್ಯಾಮ್ಸನ್, ಆಲ್ರೌಂಡರ್ ಶಿವಂ ದುಬೆ, ಶುಭ್ಮನ್ ಗಿಲ್ ಹಾಗೂ ಕೃಷ್ಣಪ್ಪ ಗೌತಮ್​ಗೆ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.

First published:October 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...