Kevin Pietersen: ನಾ ಅವತ್ತೇ ಹೇಳಿದ್ದೆ ಜಾಸ್ತಿ ಸಂಭ್ರಮಿಸಬೇಡಿ ಎಂದು: ಸೋಲಿನ ಬೆನ್ನಲ್ಲೇ ಭಾರತೀಯರ ಕಾಲೆಳೆದ ಪೀಟರ್ಸನ್

India vs England: ಇದೀಗ ಕೆವಿನ್ ಪೀಟರ್ಸನ್ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟೀಮ್ ಇಂಡಿಯಾ ಅಭಿಮಾನಿಗಳು ಭಾರತ ಕಂಬ್ಯಾಕ್ ಮಾಡಿ ಸೇಡು ತೀರಿಸಿಕೊಳ್ಳಲಿದೆ.

KP_indian_team

KP_indian_team

 • Share this:
  ಭಾರತ-ಇಂಗ್ಲೆಂಡ್​ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 227 ರನ್​ಗಳ ಹೀನಾಯ ಸೋಲನುಭವಿಸಿದೆ. ಈ ಸೋಲಿನ ಬಳಿಕ ಇಂಗ್ಲೆಂಡ್ ತಂಡ ಮಾಜಿ ನಾಯಕ ಕೆವಿನ್ ಪೀಟರ್ಸನ್ (ಕೆಪಿ) ಮೂಲಕ ಭಾರತೀಯ ಕ್ರಿಕೆಟ್​ ಕ್ರಿಕೆಟ್​ ಅಭಿಮಾನಿಗಳ ಕಾಲೆಳೆದಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪೀಟರ್ಸನ್, ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ಸಂದರ್ಭದಲ್ಲಿ ಹೇಳಿದ ಮಾತನ್ನು ಮತ್ತೆ ನೆನಪಿಸಿದ್ದಾರೆ.

  ಹೌದು, ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬಳಿಕ ಕೆವಿನ್ ಪೀಟರ್ಸನ್ ಜನವರಿ 19 ರಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್​ನಲ್ಲಿ "ಈ ಐತಿಹಾಸಿಕ ಜಯವನ್ನು ಸಾಧಿಸಿ ಸಂಭ್ರಮಿಸುತ್ತಿದ್ದೀರಿ. ಆದರೆ ನಿಜವಾದ ತಂಡ ಭಾರತಕ್ಕೆ ಕೆಲ ವಾರಗಳಲ್ಲೇ ಬರಲಿದೆ. ಆ ತಂಡ ನಿಮ್ಮನ್ನು ನಿಮ್ಮ ನೆಲದಲ್ಲೇ ಸೋಲಿಸಲಿದೆ. ಎರಡು ವಾರಗಳಲ್ಲಿ ಹೆಚ್ಚು ಸಂಭ್ರಮಿಸದೇ ಸಮಾಧಾನದಿಂದಿರಿ" ಎಂದು ಬರೆದುಕೊಂಡಿದ್ದರು.  ಇದೀಗ ಇಂಗ್ಲೆಂಡ್ ತಂಡ ಭಾರತದ ವಿರುದ್ದ ಭರ್ಜರಿ ಜಯ ಸಾಧಿಸುವುದರೊಂದಿಗೆ ಕೆವಿನ್ ಪೀಟರ್ಸನ್ ಮತ್ತೊಮ್ಮೆ ತಮ್ಮ ಹಳೆಯ ಟ್ವೀಟ್​ನ್ನು ನೆನಪಿಸಿದ್ದಾರೆ. ಇಂಡಿಯಾ, ನನ್ನ ಮಾತು ನೆನಪಿದೆಯಾ? ನಾನು ಮೊದಲೇ ಹೇಳಿದ್ದೆ, ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಸೋಲಿಸಿದ್ದೀರಿ ಎಂದು ಅತಿಯಾಗಿ ಸಂಭ್ರಮಿಸಬೇಡಿ ಎಂದು ತಿಳಿಸಿದ್ದೆ" ಎಂದು ಪೀಟರ್‌ಸನ್ ಟ್ವೀಟ್ ಮಾಡಿದ್ದಾರೆ.  ಇದೀಗ ಕೆವಿನ್ ಪೀಟರ್ಸನ್ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟೀಮ್ ಇಂಡಿಯಾ ಅಭಿಮಾನಿಗಳು ಭಾರತ ಕಂಬ್ಯಾಕ್ ಮಾಡಿ ಸೇಡು ತೀರಿಸಿಕೊಳ್ಳಲಿದೆ. ಹೇಗೆ ಅಂದರೆ ಆಸ್ಟ್ರೇಲಿಯಾವನ್ನು ಮೊದಲ ಸೋಲಿನ ಬಳಿಕ ಬಗ್ಗು ಬಡಿದಂತೆ ಇಂಗ್ಲೆಂಡ್ ತಂಡಕ್ಕೂ ಸೋಲಿನ ರುಚಿ ತೋರಿಸಲಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
  Published by:zahir
  First published: