Mohammed Shami: ಮೊಹಮ್ಮದ್ ಶಮಿ ತೂತಾದ ಶೂ ಧರಿಸಿ ಕಣಕ್ಕಿಳಿದ ಕಾರಣ ಇಲ್ಲಿದೆ..!

India vs Australia: ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ಗಳು ಮುಕ್ತಾಯವಾಗಿದ್ದು, ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 244 ರನ್​ಗಳಿಸಿದೆ. ಇದರ ಬೆನ್ನಲ್ಲೇ 2ನೇ ದಿನ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾವನ್ನು 191 ರನ್​ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ.

Mohammed Shami

Mohammed Shami

  • Share this:
    ಅಡಿಲೇಡ್ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತೂತಾದ ಶೂ ಧರಿಸಿ ಕಣಕ್ಕಿಳಿದಿದ್ದರು. ಇದರ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗ ಹರಿದ ಶೂ ಧರಿಸಿ ಮೈದಾನಕ್ಕಿಳಿದಿರುವ ಫೋಟೋಗಳು ವೈರಲ್ ಆಗಿತ್ತು. ಇದಕ್ಕೆ ಕಾರಣವೂ ಇದೆ. ಏಕೆಂದರೆ ಐಪಿಎಲ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯುತ್ತಿರುವ ಶಮಿ ಪಡೆಯುತ್ತಿರುವುದು 4 ಕೋಟಿ 80 ಲಕ್ಷ ರೂ. ಇದಾಗ್ಯೂ ಟೀಮ್ ಇಂಡಿಯಾ ಪರ ಆಡುವ ವೇತನ ಬೇರೆ. ಇಷ್ಟೆಲ್ಲಾ ಹಣಗಳಿಸುತ್ತಿದ್ದರೂ ಶಮಿ ಯಾಕೆ ತೂತಾದ ಶೂ ಧರಿಸಿದ್ದರು ಎಂಬ ಪ್ರಶ್ನೆಗೆ ಉತ್ತರ ಗಾಯದಿಂದ ಪಾರಾಗಲು ಉಪಾಯ.

    ಹೌದು, ವೇಗದ ಬೌಲರುಗಳು ಚೆಂಡೆಸಲು ಲ್ಯಾಂಡ್​ ಆಗುವಾಗ ಹೆಬ್ಬೆರಳು ಶೂವಿನ ಮುಂಭಾಗಕ್ಕೆ ಒತ್ತಿಕೊಳ್ಳುತ್ತವೆ. ಇದರಿಂದ ನೋವು ಅಥವಾ ಗಾಯಗಳಾಗುವ ಸಾಧ್ಯತೆ ಹೆಚ್ಚು. ಇನ್ನು ದೀರ್ಘಕಾಲದವರೆಗೆ ಟೆಸ್ಟ್​ನಲ್ಲಿ ಬೌಲಿಂಗ್ ಮಾಡಬೇಕಾಗುತ್ತದೆ. ಈ ವೇಳೆ ಗಡುಸಾದ ಶೂ ಧರಿಸುತ್ತಿದ್ದರೆ ಸಮಸ್ಯೆ ಹೆಚ್ಚು. ಹೀಗಾಗಿ ಹೆಬ್ಬೆರಳಿನ ಭಾಗದಲ್ಲಿ ಶೂವನ್ನು ತೂತು ಮಾಡುತ್ತಾರೆ. ಇದರಿಂದ ಬೆರಳು ಫ್ರೀ ಆಗುತ್ತವೆ. ಇದೇ ತಂತ್ರದೊಂದಿಗೆ ಶಮಿ ಕೂಡ ಮೈದಾನಕ್ಕಿಳಿದಿದ್ದರು.

    ಶಮಿಯ ಶೂ


    ಈ ಹಿಂದೆ ಅನೇಕ ಬೌಲರುಗಳು ಹೆಬ್ಬೆರಳಿನ ನೋವಿನಿಂದ ಪಾರಾಗಲು ಇದೇ ರೀತಿಯ ತಂತ್ರ ಅನುಸರಿಸುತ್ತಿದ್ದರು. ಆದರೆ ಇತ್ತೀಚಿಗೆ ಇಂತಹ ದೃಶ್ಯಗಳು ಕಂಡು ಬರುತ್ತಿಲ್ಲ. ಹೀಗಾಗಿ ಮೊಹಮ್ಮದ್ ಶಮಿ ಅವರ ತೂತಾದ ಶೂ ಚರ್ಚೆಗೆ ಕಾರಣವಾಗಿದೆ ಅಷ್ಟೇ.

    ಇನ್ನು ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ಗಳು ಮುಕ್ತಾಯವಾಗಿದ್ದು, ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 244 ರನ್​ಗಳಿಸಿದೆ. ಇದರ ಬೆನ್ನಲ್ಲೇ 2ನೇ ದಿನ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾವನ್ನು 191 ರನ್​ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಟೀಮ್ ಇಂಡಿಯಾ ಪರ ಆರ್​. ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದ್ದಾರೆ.
    Published by:zahir
    First published: