• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni- ಧೋನಿ ಟೀಮ್ ಇಂಡಿಯಾ ಮೆಂಟರ್ ಆಗಿದ್ದೇಗೆ? ಸೋಷಿಯಲ್ ಮೀಡಿಯಾದಲ್ಲಿ ಸೋಜಿಗದ ಸ್ಪಂದನೆ

MS Dhoni- ಧೋನಿ ಟೀಮ್ ಇಂಡಿಯಾ ಮೆಂಟರ್ ಆಗಿದ್ದೇಗೆ? ಸೋಷಿಯಲ್ ಮೀಡಿಯಾದಲ್ಲಿ ಸೋಜಿಗದ ಸ್ಪಂದನೆ

ಎಂ.ಎಸ್. ಧೋನಿ

ಎಂ.ಎಸ್. ಧೋನಿ

Memes for Dhoni: ಎಂಎಸ್ ಧೋನಿ ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ಆಯ್ಕೆಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಬಾಲಿವುಡ್ ಸಿನಿಮಾ, ರಜಿನಿಕಾಂತ್ ಸಿನಿಮಾಗಳ ದೃಶ್ಯ ಮತ್ತು ಡೈಲಾಗ್ಗಳು ಮೀಮ್​ಗಳಾಗಿ ಬಂದಿವೆ.

  • Share this:

ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಮಹೇಂದ್ರ ಸಿಂಗ್ ಧೋನಿ ಇದೀಗ ಮಾರ್ಗದರ್ಶಿ (Mentor) ಆಗಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಅವರು ಭಾರತ ತಂಡದ ಮೆಂಟಾರ್ ಆಗಿ ಕೆಲಸ ಮಾಡಲಿದ್ದಾರೆ. ಎರಡು ಬಾರಿ ತನ್ನ ನಾಯಕತ್ವದಲ್ಲಿ ಭಾರತ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ 40 ವರ್ಷದ ಎಂ ಎಸ್ ಧೋನಿ ಅವರ ಮಾರ್ಗದರ್ಶನದಲ್ಲಿ ಭಾರತ ಇನ್ನೊಂದು ವಿಶ್ವಕಪ್ ಗೆಲ್ಲುತ್ತಾ ಕಾದು ನೋಡಬೇಕು. ಇದೇ ವೇಳೆ, ನಿನ್ನೆ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ, ಧೋನಿ ಮೆಂಟಾರ್ ಆಗಿ ಆಯ್ಕೆಯಾಗಿರುವ ವಿಚಾರವನ್ನೂ ಬಹಿರಂಗಪಡಿಸಿತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಮೀಮ್ಸ್ ಸೃಷ್ಟಿಯಾಗಿ ವೈರಲ್ ಆಗಿವೆ. ಧೋನಿ ಅವರ ಅಪಾರ ಅಭಿಮಾನಿ ಬಳಗ ಸಂತಸದಿಂದ ಕುಣಿದು ಕುಪ್ಪಳಿಸಿದೆ.


ಒಬ್ಬ ಅಭಿಮಾನಿಯಂತೂ ಬಾಲಿವುಡ್ ಸಿನಿಮಾದ ದೃಶ್ಯವನ್ನ ಹಿಡಿದು ಮೀಮ್ಸ್ ಮಾಡಿದ್ದಾನೆ. ಹೆಲಿಕಾಪ್ಟರ್​ನಿಂದ ಧೋನಿ ಲ್ಯಾಂಡ್ ಆಗುತ್ತಿರುವಂತೆ ಎಡಿಟ್ ಮಾಡಿದ್ದಾರೆ. ಯುದ್ಧಕ್ಕೆ ಅಣಿಯಾಗುತ್ತಿರುವ ಕೊಹ್ಲಿ ಬಳಗ ಮಾಹಿ ಆಗಮನದಿಂದ ಉತ್ಸಾಹಿತರಾಗುತ್ತಾರೆ. ಇದು ಬಾಲಿವುಡ್ ಸಿನಿಮಾ ದೃಶ್ಯದ ಎಡಿಟೆಡ್ ವರ್ಷನ್. ಎಂ ಎಸ್ ಧೋನಿ ಅವರ ಹೆಲಿಕಾಪ್ಟರ್ ಶಾಟ್ ಭಾರೀ ಫೇಮಸ್. ಅಂತೆಯೇ ಅದರ ದ್ಯೋತಕವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ದೃಶ್ಯವನ್ನು ಇಲ್ಲಿ ಇವರು ಮೇಳೈಸಿದ್ದಾರೆ. ಈ ಮೀಮ್ ವಿಡಿಯೋಗೆ ಧೋನಿ ಅಭಿಮಾನಿಗಳು ಹರ್ಷಗೊಂಡಿದ್ದಾರೆ.





ಒಬ್ಬಾತ ಆನಂದಬಾಷ್ಪ ಸುರಿಸುತ್ತಿರುವ ಫೋಟೋ ಹಾಕಿ ತನ್ನ ಸಂತಸ ತೋರ್ಪಡಿಸಿದ್ದಾನೆ. ಲೇಡಿ ನಿಶಾ ಹೆಸರು ಹಾಕಿಕೊಂಡಿರುವ ಮಹಿಳೆಯೊಬ್ಬರು ತಾನು ಕೆಲ ತಿಂಗಳುಗಳ ಹಿಂದೆ ಹಾಕಿದ್ದ ಟ್ವೀಟನ್ನು ಉಲ್ಲೇಖ ಮಾಡಿದ್ಧಾಳೆ. ಯುವ ಆಟಗಾರರೇ ಇರುವ ಭಾರತ ತಂಡದಲ್ಲಿ ನಾನ್-ಪ್ಲೇಯಿಂಗ್ ಕ್ಯಾಪ್ಟನ್ ಆಗಿ ಧೋನಿಯನ್ನ ಯಾಕೆ ಇಟ್ಟುಕೊಳ್ಳಬಾರದು ಎಂದು ಫೆಬ್ರವರಿ ತಿಂಗಳಲ್ಲೇ ಈಕೆ ಟ್ವೀಟ್ ಮಾಡಿದ್ದರು. ಅದನ್ನು ಈಕೆ ಹೆಮ್ಮೆಯಿಂದ ಈಗ ಪ್ರದರ್ಶಿಸುತ್ತಿದ್ದಾರೆ.







ಮತ್ತೊಬ್ಬಾತ ಮಹೇಂದ್ರ ಸಿಂಗ್ ಧೋನಿಯ ಹೆಸರನ್ನ ಮೆಂಟರ್ ಸಿಂಗ್ ಧೋನಿ ಎಂದು ಬರೆದು ಅಭಿಮಾನ ತೋರ್ಪಡಿಸಿದ್ದಾನೆ. ನಿವೃತ್ತ ಕ್ರಿಕೆಟಿಗ ವಾಸಿಮ್ ಜಾಫರ್ ಅವರು ರಜನೀಕಾಂತ್ ಡೈಲಾಗ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಭಾರತದ ಡ್ರೆಸ್ಸಿಂಗ್ ರೂಮ್​ಗೆ ಧೋನಿ ಅಚ್ಚರಿಯ ಪ್ರವೇಶವಾದರೆ ಹೇಗಿದ್ದೀತು ಎಂಬುದಕ್ಕೆ ಅವರು ರಜಿನಿಕಾಂತ್ ಸಿನಿಮಾದ ಒಂದು ಡೈಲಗ್ ಇರುವ ಫೋಟೋ ಹಾಕಿದ್ದಾರೆ. ಮತ್ತೊಬ್ಬ ವ್ಯಕ್ತಿ ಕೂಡ ರಜಿನಿಕಾಂತ್ ಅಭಿನಯದ ಶಿವಾಜಿ ಸಿನಿಮಾದ ತುಣುಕನ್ನು ಹಾಕಿದ್ದಾರೆ.


ಇದನ್ನೂ ಓದಿ: T-20 World Cup: ಯಾರ್ಕರ್​ ಸ್ಪೆಷಲಿಸ್ಟ್​ ನಟರಾಜನ್​, ಗೂಗ್ಲಿ ಕಿಂಗ್​ ಚಾಹಲ್​ಗೆ ಏಕಿಲ್ಲ ಟಿ-20 ವಲ್ಡ್​ಕಪ್​ನಲ್ಲಿ ಸ್ಥಾನ?


ಧೋನಿ ಆಯ್ಕೆ ಪೂರ್ವನಿಯೋಜಿತ:


ಮಹೇಂದ್ರ ಸಿಂಗ್ ಧೋನಿ 2020, ಆಗಸ್ಟ್ 15ರಂದು ನಿವೃತ್ತರಾಗಿದ್ದಾರೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ದುಬೈನಲ್ಲಿ ಮುಂದುವರಿಯಲಿರುವ ಐಪಿಎಲ್​ನಲ್ಲಿ ಅವರು ಸಿಎಸ್​ಕೆ ತಂಡದ ನಾಯಕತ್ವ ವಹಿಸಿದ್ದಾರೆ. ಧೋನಿ ಅವರ ಕ್ರಿಕೆಟ್ ವೃತ್ತಿಜೀವನ ಇಲ್ಲಿಗೆ ಅಂತ್ಯವಾಗುತ್ತದೆ ಎಂದೇ ಬಹಳ ಮಂದಿ ಭಾವಿಸಿದ್ದರು. ಆದರೆ, ಈಗ ಮೆಂಟಾರ್ ಆಗಿ ಅವರು ಭಾರತ ತಂಡಕ್ಕೆ ಮರಳಿದ್ದಾರೆ. ಇದು ಹಲವರಿಗೆ ಅಚ್ಚರಿ ಎನಿಸಿದರೂ ಅನಿರೀಕ್ಷಿವೇನೂ ಆಗಿರಲಿಲ್ಲ. ಎರಡು ತಿಂಗಳ ಹಿಂದೆಯೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಧೋನಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಟೀಮ್ ಇಂಡಿಯಾಗೆ ಯಾವುದಾದರೂ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತಿದ್ದ ಧೋನಿ ಅವರು ಪೂರ್ಣ ಮನಸ್ಸಿನಿಂದ ಇದಕ್ಕೆ ಒಪ್ಪಿದ್ಧಾರೆ. ಬಳಿಕ ಜಯ್ ಶಾ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರಲ್ಲಿ ಪ್ರಸ್ತಾಪ ಇಟ್ಟಿದ್ದಾರೆ. ಅವರಿಬ್ಬರೂ ಓಕೆ ಅಂದ ಬಳಿಕ ಬಿಸಿಸಿಐನ ಇತರ ಸದಸ್ಯರೊಂದಿಗೆ ಜಯ್ ಶಾ ಅವರು ಚರ್ಚೆ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ಬಂದರೆನ್ನಲಾಗಿದೆ.


ರವಿಶಾಸ್ತ್ರಿ ಅವರ ಕೋಚ್ ಅವಧಿ ಮುಕ್ತಾಯವಾದ ಬಳಿಕ ಧೋನಿ ಅವರನ್ನೇ ಕೋಚ್ ಆಗಿ ನೇಮಿಸಲಾಗಬಹುದಾ ಎಂಬ ಅನುಮಾನಗಳು ಇವೆಯಾದರೂ ಮೂಲಗಳು ಹೇಳುವ ಪ್ರಕಾರ ಧೋನಿ ಅವರು ಪ್ರಮುಖ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಸಲಹೆಗಾರರಾಗಿ ನಿರ್ದಿಷ್ಟವಾಗಿ ಕೆಲಸ ನಿರ್ವಹಿಸುವ ಸಾಧ್ಯತೆ ಇದೆ. ಧೋನಿ ಅವರ ಅನುಭವವು ಈ ರೂಪದಲ್ಲೂ ಸ್ಪಷ್ಟವಾಗಿ ನೆರವಿಗೆ ಬರುವ ನಿರೀಕ್ಷೆ ಇದೆ.

top videos
    First published: