RCB vs KXIP: ಗೇಲ್ ಗುಡುಗು: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕಠಿಣ ಸವಾಲು
ಓವರ್ಗಳ ಅಂತ್ಯಕ್ಕೆ 122 ರನ್ ಪೇರಿಸಿದ್ದ ಪಂಜಾಬ್ ಅಂತಿಮ ಐದು ಓವರ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು.

ಗೇಲ್
- News18
- Last Updated: April 13, 2019, 10:17 PM IST
ಐಪಿಎಲ್ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಕ್ರಿಸ್ ಗೇಲ್ರ ಅಜೇಯ 99 ರನ್ಗಳ ನೆರವಿನಿಂದ 173 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಟಾಸ್ ಸೋತು ಬ್ಯಾಟಿಂಗ್ಗಿಳಿಸಲ್ಟಟ್ಟ ಪಂಜಾಬ್ ತಂಡಕ್ಕೆ ಕೆ.ಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅಬ್ಬರದ ಆರಂಭ ಒದಗಿಸಿದರು. ಮೊದೆಲೆರಡು ಓವರ್ನಲ್ಲಿ ಎಚ್ಚರಿಕೆ ವಹಿಸಿದ್ದ ಗೇಲ್-ರಾಹುಲ್ ಒಮ್ಮೆಲೇ ಸಿಡಿಯಲು ಆರಂಭಿಸಿದರು.
ಬಿರುಸಿನ ಆಟದ ಮೂಲಕ ಕೊಹ್ಲಿ ಪಡೆಯನ್ನು ದಂಡಿಸಿದ ಗೇಲ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ್ದರು. ಸಿರಾಜ್ ಬೌಲಿಂಗ್ ಮಾಡಿದ ಆರನೇ ಓವರ್ನಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನೊಳಗೊಂಡ 24 ರನ್ ಬಾರಿಸಿದ ಗೇಲ್ ಭರ್ಜರಿ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಈ ನಡುವೆ ಚಾಹಲ್ರ ಎಸೆತದಲ್ಲಿ ಸಿಕ್ಸರ್ ಎತ್ತಿದ ರಾಹುಲ್, ಮತ್ತೊಂದು ಭರ್ಜರಿ ಹೊಡೆತಕ್ಕೆ ಮುನ್ನುಗ್ಗಿ ಸ್ಟಂಪ್ ಆಗುವ ಮೂಲಕ ಔಟಾದರು. ಈ ವೇಳೆ ರಾಹುಲ್ 18 ರನ್ಗಳಿಸಿದ್ದರೆ ತಂಡದ ಮೊತ್ತವು 66 ರನ್ಗಳಾಗಿತ್ತು. ಇನ್ನೊಂದೆಡೆ ಅಬ್ಬರಿಸಿದ ಗೇಲ್ ಕೇವಲ 28 ಎಸೆತಗಳಲ್ಲೇ ಅರ್ಧಶತಕ ಬಾರಿಸಿದರು. ಈ ಮೂಲಕ ಐಪಿಎಲ್ನಲ್ಲಿ ತಮ್ಮ 27ನೇ ಅರ್ಧಶತಕ ಸಿಡಿಸಿ ಮಿಂಚಿದರು.
ಗೇಲ್ ಜತೆಗೂಡಿದ ಮಯಾಂಕ್ ಅಗರ್ವಾಲ್ (15) ಹೆಚ್ಚು ಹೊತ್ತು ನಿಲ್ಲದೆ ಚಾಹಲ್ಗೆ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ಸ್ಪೋಟಕ ಆಟದ ಸೂಚನೆ ನೀಡಿದ ಆರ್ಸಿಬಿಯ ಮಾಜಿ ಆಟಗಾರ ಸರ್ಫರಾಜ್ ಖಾನ್ (15) ಸಹ ಬೇಗನೆ ನಿರ್ಗಮಿಸಿದರು. ಇದರಿಂದ ರನ್ ಗತಿಯು ಕುಂಠಿತವಾಯಿತು.
15 ಓವರ್ಗಳ ಅಂತ್ಯಕ್ಕೆ 122 ರನ್ ಪೇರಿಸಿದ್ದ ಪಂಜಾಬ್ ಅಂತಿಮ ಐದು ಓವರ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಕೊಹ್ಲಿ ಪಡೆಗೆ ಸವಾಲಿನ ಮೊತ್ತ ಮುಂದಿಡಲು ಹೊಡಿ ಬಡಿ ಆಟಕ್ಕೆ ಮುಂದಾದ ಗೇಲ್ ಅಂತಿಮವಾಗಿ 64 ಎಸೆತಗಳಲ್ಲಿ ಅಜೇಯ 99 ರನ್ ಬಾರಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 5 ಮನಮೋಹಕ ಸಿಕ್ಸರ್ಗಳು ಮೂಡಿ ಬಂದಿದ್ದವು. ಆದರೆ ಕೊನೆಯಲ್ಲಿ 1 ರನ್ನಿನ ಅಂತರದಿಂದ ಶತಕ ಮಿಸ್ ಮಾಡಿಕೊಂಡ ಗೇಲ್ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 173 ರನ್ಗೆ ತಂದು ನಿಲ್ಲಿಸಿದರು. ಇದೇ ವೇಳೆ ಗೇಲ್ಗೆ ಸಾಥ್ ನೀಡಿದ ಮನ್ದೀಪ್ ಸಿಂಗ್(18) ರನ್ಗಳಿಸಿ ಅಜೇಯರಾಗುಳಿದರು. ಇನ್ನು ಆರ್ಸಿಬಿ ಪರ ಚಾಹಲ್ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಬಿರುಸಿನ ಆಟದ ಮೂಲಕ ಕೊಹ್ಲಿ ಪಡೆಯನ್ನು ದಂಡಿಸಿದ ಗೇಲ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ್ದರು. ಸಿರಾಜ್ ಬೌಲಿಂಗ್ ಮಾಡಿದ ಆರನೇ ಓವರ್ನಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನೊಳಗೊಂಡ 24 ರನ್ ಬಾರಿಸಿದ ಗೇಲ್ ಭರ್ಜರಿ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು.
ಗೇಲ್ ಜತೆಗೂಡಿದ ಮಯಾಂಕ್ ಅಗರ್ವಾಲ್ (15) ಹೆಚ್ಚು ಹೊತ್ತು ನಿಲ್ಲದೆ ಚಾಹಲ್ಗೆ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ಸ್ಪೋಟಕ ಆಟದ ಸೂಚನೆ ನೀಡಿದ ಆರ್ಸಿಬಿಯ ಮಾಜಿ ಆಟಗಾರ ಸರ್ಫರಾಜ್ ಖಾನ್ (15) ಸಹ ಬೇಗನೆ ನಿರ್ಗಮಿಸಿದರು. ಇದರಿಂದ ರನ್ ಗತಿಯು ಕುಂಠಿತವಾಯಿತು.
15 ಓವರ್ಗಳ ಅಂತ್ಯಕ್ಕೆ 122 ರನ್ ಪೇರಿಸಿದ್ದ ಪಂಜಾಬ್ ಅಂತಿಮ ಐದು ಓವರ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಕೊಹ್ಲಿ ಪಡೆಗೆ ಸವಾಲಿನ ಮೊತ್ತ ಮುಂದಿಡಲು ಹೊಡಿ ಬಡಿ ಆಟಕ್ಕೆ ಮುಂದಾದ ಗೇಲ್ ಅಂತಿಮವಾಗಿ 64 ಎಸೆತಗಳಲ್ಲಿ ಅಜೇಯ 99 ರನ್ ಬಾರಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 5 ಮನಮೋಹಕ ಸಿಕ್ಸರ್ಗಳು ಮೂಡಿ ಬಂದಿದ್ದವು. ಆದರೆ ಕೊನೆಯಲ್ಲಿ 1 ರನ್ನಿನ ಅಂತರದಿಂದ ಶತಕ ಮಿಸ್ ಮಾಡಿಕೊಂಡ ಗೇಲ್ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 173 ರನ್ಗೆ ತಂದು ನಿಲ್ಲಿಸಿದರು. ಇದೇ ವೇಳೆ ಗೇಲ್ಗೆ ಸಾಥ್ ನೀಡಿದ ಮನ್ದೀಪ್ ಸಿಂಗ್(18) ರನ್ಗಳಿಸಿ ಅಜೇಯರಾಗುಳಿದರು. ಇನ್ನು ಆರ್ಸಿಬಿ ಪರ ಚಾಹಲ್ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
BROMANCE 🤝🙌#KXIPvRCB pic.twitter.com/dWE39dCJm8
— IndianPremierLeague (@IPL) April 13, 2019