RCB vs CSK: ಧೋನಿ ಹೋರಾಟ ವ್ಯರ್ಥ; ರೋಚಕ ಪಂದ್ಯದಲ್ಲಿ ಆರ್​ಸಿಬಿಗೆ 1 ರನ್​ ಅಂತರದ ಜಯ

ಗೆಲುವಿನ ಸಂತಸದಲ್ಲಿ ತೇಲುತ್ತಿದ್ದ ಆರ್​​ಸಿಬಿಗೆ ಮೈಚಳಿ ಬಿಡಿಸಿದ್ದು ಚೆನ್ನೈ ನಾಯಕ ಎಂಎಸ್ ಧೋನಿ. ವಿಕೆಟ್ ಉರುಳುತ್ತಿದ್ದರು ಕೊನೆ ಹಂತದಲ್ಲಿ ಸ್ಫೋಟಕ ಆಟವಾಡಿದ ಧೋನಿ ಇನ್ನೇನು ಚೆನ್ನೈಗೆ ಗೆಲುವು ತಂದುಕೊಡುತ್ತಾರೆ ಎಂದುಕೊಂಡಿದ್ದರು.

ಆರ್​ಸಿಬಿ

ಆರ್​ಸಿಬಿ

  • News18
  • Last Updated :
  • Share this:
ಬೆಂಗಳೂರು (ಏ. 21): ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​​​​ ವಿರುದ್ಧ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ 1 ರನ್​ಗಳ ಗೆಲುವು ಸಾಧಿಸಿದೆ. ಎಂಎಸ್ ಧೋನಿ ಏಕಾಂಗಿ ಹೋರಾಟದ ನಡುವೆಯು ಚೆನ್ನೈ ತಂಡ ಕೊನೆಯ ಎಸೆತದಲ್ಲಿ ಸೋಲುಂಡಿತು.

ಆರ್​ಸಿಬಿ ನೀಡಿದ್ದ 162 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ 30 ರನ್​​ಗೂ ಮುನ್ನವೆ ಪ್ರಮುಖ 4 ವಿಕೆಟ್ ಕಳೆದಯಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್​ನಲ್ಲೇ ಡೇಲ್ ಸ್ಟೇನ್​​ ಶೇನ್ ವಾಟ್ಸನ್(5) ಹಾಗೂ ಸರೇಶ್ ರೈನಾ(0) ವಿಕೆಟ್ ಕಿತ್ತರು. ಇದಾದ ಬೆನ್ನಲ್ಲೆ ಫಾಫ್ ಡುಪ್ಲೆಸಿಸ್(5) ಹಾಗೂ ಕೇದರ್ ಜಾಧವ್(9) ಕೂಡ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಎಡವಿದರು.

ಈ ಸಂದರ್ಭ ನಾಯಕನ ಎಂಎಸ್ ಧೋನಿ ಹಾಗೂ ಅಂಬಟಿ ರಾಯುಡು ಜೊತೆಯಾಗಿ ಇನ್ನಿಂಗ್ಸ್​ ಕಟ್ಟಲು ಹೊರಟರು. ಅದರಂತೆ ಉತ್ತಮ ಆಟವಾಡಿದ ಈ ಜೋಡಿ 55 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ರಾಯುಡು 29 ರನ್ ಗಳಿಸಿರುವಾಗ ಚಹಾಲ್ ಸ್ಪಿನ್ ಬಲೆಗೆ ಬಲಿಯಾದರು. ಇದಾದ ಸ್ವಲ್ಪದರಲ್ಲೆ ಜಡೇಜಾ(11) ಕೂಡ ರನೌಟ್​ ಆಗಿದ್ದು ಚೆನ್ನೈ ಸೂಲಿನ ಸುಳಿಯಲ್ಲಿ ಸಿಲುಕಿತು.

IPL 2019 Live Score, RCB vs CSK: ಧೋನಿ ಏಕಾಂಗಿ ಹೋರಾಟ ವ್ಯರ್ಥ; ಆರ್​ಸಿಬಿಗೆ 1 ರನ್​ಗಳ ರೋಚಕ ಜಯ

ಗೆಲುವಿನ ಸಂತಸದಲ್ಲಿ ತೇಲುತ್ತಿದ್ದ ಆರ್​​ಸಿಬಿಗೆ ಮೈಚಳಿ ಬಿಡಿಸಿದ್ದು ಚೆನ್ನೈ ನಾಯಕ ಎಂಎಸ್ ಧೋನಿ. ವಿಕೆಟ್ ಉರುಳುತ್ತಿದ್ದರು ಕೊನೆ ಹಂತದಲ್ಲಿ ಸ್ಫೋಟಕ ಆಟವಾಡಿದ ಧೋನಿ ಇನ್ನೇನು ಚೆನ್ನೈಗೆ ಗೆಲುವು ತಂದುಕೊಡುತ್ತಾರೆ ಎಂದುಕೊಂಡಿದ್ದರು. ಕೊನೆಯ 12 ಎಸೆತಗಳಲ್ಲಿ ಚೆನ್ನೈ ಗೆಲುವುಗೆ 36 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್​ನಲ್ಲಿ ಧೋನಿ ಬ್ಯಾಟ್​ನಿಂದ 1 ಸಿಕ್ಸ್ ಸೇರಿ ಒಟ್ಟು 10 ರನ್​ಗಳು ಬಂದವು. ಪರಿಣಾಮ ಕೊನೆಯ ಓವರ್​ನಲ್ಲಿ 26 ರನ್​ಗಳು ಬೇಕಾಗಿತ್ತು.

ಕ್ರೀಸ್​ನಲ್ಲೇ ಇದ್ದ ಧೋನಿ ಉಮೇಶ್ ಯಾದವ್​ರ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ಎರಡನೇ ಎಸೆತದಲ್ಲಿ ಚೆಂಡನ್ನು ಮೈದಾನದಿಂದಲೇ ಹೊರಗಟ್ಟಿದರು. ಮೂರನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಹಾಗೂ 4ನೇ ಎಸೆತದಲ್ಲಿ 2 ರನ್. 5ನೇ ಎಸೆತದಲ್ಲಿ ಧೋನಿ ಮತ್ತೊಂದು ಸಿಕ್ಸ್​ ಸಿಡಿಸುವ ಮೂಲಕ ಕೊನೆಯ ಎಸೆತದಲ್ಲಿ ಚೆನ್ನೈ ಗೆಲುವಿಗೆ 2 ರನ್​ಗಳ ಅವಶ್ಯಕತೆಯಿತ್ತು.

ಕೊನೆಯ ಎಸೆತವನ್ನು ಧೋನಿ ಹೊಡೆಯಲು ಯತ್ನಿಸಿದರಾದರು ಡಾಟ್ ಬಾಲ್ ಆಗಿ ಕೀಪರ್ ಕೈ ಸೇರಿತು. ಇತ್ತ ರನ್​ಗಾಗಿ ಧೋನಿ ಓಡಿದರಾದರು ಶಾರ್ದೂಲ್ ಠಾಕೂರ್​ರನ್ನು ಕೀಪರ್ ಪಾರ್ಥಿವ್ ರನೌಟ್ ಮಾಡಲು ಯಶಸ್ವಿಯಾದರು. ಈ ಮೂಲಕ ಚೆನ್ನೈ 20 ಓವರ್​ಗೆ 8 ವಿಕಟ್ ಕಳೆದುಕೊಂಡು 160 ರನ್​ ಗಳಿಲಷ್ಟೆ ಶಕ್ತವಾಯಿತು. ಧೋನಿ 48 ಎಸೆತಗಳಲ್ಲಿ 5 ಬೌಂಡರಿ, 7 ಮನಮೋಹಕ ಸಿಕ್ಸ್​ ಸಿಡಿಸಿ ಅಜೇಯ 84 ರನ್ ಗಳಿಸಿದರು. ಆರ್​ಸಿಬಿ ಪರ ಡೇಲ್ ಸ್ಟೇನ್ ಹಾಗೂ ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ಸೈನಿ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.

1 ರನ್​ಗಳ ರೋಚಕ ಗೆಲುವಿನ ಮೂಲಕ ಆರ್​ಸಿಬಿ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ ಮೂರನೇ ಜಯ ಸಾಧಿಸಿದ್ದು, 6 ಅಂಕ ಸಂಪಾದಿಸಿದೆ. ಉತ್ತಮ ಆಟ ಪ್ರದರ್ಶಿಸಿದ ಪಾರ್ಥಿವ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

 ಇದನ್ನೂ ಮೊದಲು ಟಾಸ್​ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ನಾಯಕನ ತೀರ್ಮಾನವನ್ನು ಸರಿದೂಗಿಸುವಲ್ಲಿ ಚೆನ್ನೈ ಬೌಲರ್​ ದೀಪಕ್ ಚಾಹರ್ ಆರಂಭದಲ್ಲೇ ಯಶಸ್ವಿಯಾದರು. ಇನಿಂಗ್ಸ್ ಆರಂಭಿಸಿದ್ದ ಬೆಂಗಳೂರು ನಾಯಕ ವಿರಾಟ್​ ಕೊಹ್ಲಿ (9) ಅನ್ನು ಮೂರನೇ ಓವರ್​ನಲ್ಲೇ ಚಾಹರ್ ಪೆವಿಲಿಯನ್​ಗೆ ಕಳುಹಿಸಿದ್ದರು. ಇದರೊಂದಿಗೆ ಕಳೆದ ಪಂದ್ಯದಂತೆ ಈ ಮ್ಯಾಚ್​ನಲ್ಲೂ ಶತಕ ಸಿಡಿಯಲಿದೆ ಎಂಬ ಕೊಹ್ಲಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಬಳಿಕ ಕ್ರೀಸ್​ ಆಗಮಿಸಿದ ಎಬಿ ಡಿ ವಿಲಿಯರ್ಸ್​ ಭರ್ಜರಿ ಆಟಕ್ಕೆ ಮುಂದಾದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪಾರ್ಥಿವ್ ಪಟೇಲ್​ರೊಂದಿಗೆ ದ್ವಿತೀಯ ವಿಕೆಟ್‌ಗೆ 47 ರನ್‌ಗಳ ಜತೆಯಾಟ ನೀಡಿದ ಎಬಿಡಿ 19 ಎಸೆತಗಳಲ್ಲಿ 25 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು.

ಮೂರನೇ ವಿಕೆಟ್​ಗೆ ಜತೆಯಾದ ಯುವ ಆಟಗಾರ ಅಕ್ಷದೀಪ್​ ನಾಥ್​ರೊಂದಿಗೆ ಇನಿಂಗ್ಸ್​ ಕಟ್ಟುವ ಜವಾಬ್ದಾರಿಯನ್ನು ಪಾರ್ಥಿವ್ ಪಟೇಲ್ ವಹಿಸಿಕೊಂಡರು. ಅದರಂತೆ ಎಚ್ಚರಿಕೆ 41 ರನ್​ಗಳ ಹೊಂದಾಣಿಕೆಯ ಜೊತೆಯಾಟ ಮೂಡಿತು. ಆದರೆ ತಂಡ ಮೊತ್ತ 99 ಆಗಿದ್ದಾಗ ರವೀಂದ್ರ ಜಡೇಜ ಬಾಲ್​ನಲ್ಲಿ ಕ್ಯಾಚ್​ ನೀಡುವ ಮೂಲಕ ಅಕ್ಷದೀಪ್ (24) ನಿರ್ಗಮಿಸಿದರು.

ಈ ವೇಳೆ ಕಲಾತ್ಮಕ ಆಟದೊಂದಿಗೆ ಅರ್ಧಶತಕ ಬಾರಿಸಿ ಪಾರ್ಥಿವ್ ಬ್ಯಾಟ್ ಮೇಲೆಕ್ಕೆತ್ತಿದ್ದರು. 37 ಎಸೆತಗಳನ್ನು ಎದುರಿಸಿದ್ದ ಪಟೇಲ್ 4 ಭರ್ಜರಿ ಸಿಕ್ಸರ್ ಹಾಗೂ 2 ಸೂಪರ್ ಬೌಂಡರಿ ಬಾರಿಸಿ ಮಿಂಚಿದರು. ಈ ಹಂತದಲ್ಲಿ ಬ್ರಾವೊ ಎಸೆತವನ್ನು ಪೆವಿಲಿಯನ್​ಗೆ ಅಟ್ಟುವ ಪ್ರಯತ್ನದಲ್ಲಿ ಶೇನ್​ ವಾಟ್ಸನ್​ಗೆ ಕ್ಯಾಚಿತ್ತು ಪಾರ್ಥಿವ್ ಹೊರ ನಡೆದರು.

ಇದರ ಬೆನ್ನಲ್ಲೇ ಡು ಪ್ಲೆಸಿಸ್ ಅವರ ಅದ್ಭುತ ಫೀಲ್ಡಿಂಗ್​ಗೆ ಮಾರ್ಕಸ್ ಸ್ಟಾಯಿನಿಸ್ (14) ಬಲಿಯಾಗಬೇಕಾಯಿತು. ಕೊನೆಯ ಹಂತದ ಓವರ್​ಗಳಲ್ಲಿ ಮೊಯೀನ್ ಅಲಿಯ ಏಕಾಂಗಿ ಹೋರಾಟದಿಂದ ಒಂದಷ್ಟು ರನ್​ಗಳು ಮೂಡಿಬಂದವು. 16 ಎಸೆತಗಳನ್ನು ಎದುರಿಸಿದ ಅಲಿ 5 ಭರ್ಜರಿ ಬೌಂಡರಿಗೊಳನೊಳಗೊಂಡ 26 ರನ್​ ಬಾರಿಸಿದರು. ಇದರ ಪರಿಣಾಮ 7 ವಿಕೆಟ್​ ನಷ್ಟಕ್ಕೆ ಆರ್​ಸಿಬಿ ಮೊತ್ತ 161 ಕ್ಕೆ ಬಂದು ನಿಂತಿತು. ಇನ್ನು ಉತ್ತಮ ದಾಳಿ ಸಂಘಟಿಸಿದ ಚೆನ್ನೈ ಪರ ದೀಪಕ್ ಚಾಹರ್, ಜಡೇಜ, ಬ್ರಾವೊ ತಲಾ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್​ ಎನಿಸಿಕೊಂಡರು.

ಇದನ್ನೂ ಓದಿ: SRH vs KKR: ವಾರ್ನರ್-ಬೇರ್​ಸ್ಟೊ ಅಬ್ಬರಕ್ಕೆ ಕೊಚ್ಚಿ ಹೋದ ಕೆಕೆಆರ್

 First published: