HOME » NEWS » Sports » CRICKET RCB STAR DEVDUTT PADIKKAL NAMES GAUTAM GAMBHIR HIS CRICKETING ROLE MODEL ZP

Devdutt Padikkal: ತನ್ನ ನೆಚ್ಚಿನ ಆಟಗಾರನ ಹೆಸರು ಬಹಿರಂಗಪಡಿಸಿದ ದೇವದತ್ ಪಡಿಕ್ಕಲ್

ಅಂತರರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನದಲ್ಲಿ 58 ಟೆಸ್ಟ್, 147 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿರುವ ಗಂಭೀರ್, 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

news18-kannada
Updated:April 6, 2021, 9:31 PM IST
Devdutt Padikkal: ತನ್ನ ನೆಚ್ಚಿನ ಆಟಗಾರನ ಹೆಸರು ಬಹಿರಂಗಪಡಿಸಿದ ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್
  • Share this:
ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಸಕಲ ಸಿದ್ಧತೆ ನಡೆಸುತ್ತಿದೆ. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಕೊರೋನಾದಿಂದ ಪಡಿಕ್ಕಲ್ ಚೇತರಿಸಿಕೊಂಡಿದ್ದರೂ, ಚೆನ್ನೈನಲ್ಲಿ ತಂಡವನ್ನು ಕೂಡಿಕೊಳ್ಳಲು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.

ಈ ನಡುವೆ ಪಡಿಕ್ಕಲ್ ನೀಡಿದ ಸಂದರ್ಶನವೊಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಇದೇ ಮೊದಲ ಬಾರಿ ತಮ್ಮ ನೆಚ್ಚಿನ ಆಟಗಾರನನ್ನು ಆರ್​ಸಿಬಿ ಎಡಗೈ ದಾಂಡಿಗ ಬಹಿರಂಗಪಡಿಸಿದ್ದಾರೆ. ಆದರೆ ಅದು ವಿರಾಟ್ ಕೊಹ್ಲಿ ಅಥವಾ ಯುವರಾಜ್ ಸಿಂಗ್ ಅಲ್ಲ ಎಂಬುದು ವಿಶೇಷ.

ತನ್ನ ರೋಲ್ ಮಾಡೆಲ್ ಬಗ್ಗೆ ಮಾತನಾಡಿದ ಪಡಿಕ್ಕಲ್, ನನ್ನ ಕ್ರಿಕೆಟ್ ಜೀವನದಲ್ಲಿ ಒಬ್ಬ ವ್ಯಕ್ತಿ ಮಾತ್ರ ಸ್ಪೂರ್ತಿಯಾಗಿಲ್ಲ. ಪ್ರತಿಯೊಬ್ಬರಲ್ಲೂ ಒಂದು ಸ್ಪೂರ್ತಿದಾಯಕ ಕಥೆಯಿದೆ. ಹೀಗಾಗಿ ಭಾರತಕ್ಕೆ ಆಡಿದ ಎಲ್ಲರಿಂದಲೂ ನಾನು ಸ್ಪೂರ್ತಿ ಪಡೆದಿದ್ದೇನೆ. ಏಕೆಂದರೆ ಟೀಮ್ ಇಂಡಿಯಾಗೆ ಆಡುವುದು ಅಷ್ಟು ಸುಲಭವಲ್ಲ. ಅಂತಹದೊಂದು ಚಾನ್ಸ್​ ಪಡೆಯಲು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಹೀಗೆ ಸಾಕಷ್ಟು ಕಷ್ಟಪಟ್ಟೇ ಎಲ್ಲರೂ ದೇಶಕ್ಕಾಗಿ ಆಡಿದ್ದಾರೆ. ಹೀಗಾಗಿ ಎಲ್ಲರೂ ನನಗೆ ಸ್ಪೂರ್ತಿ ಎಂದು ಪಡಿಕ್ಕಲ್ ಹೇಳಿದ್ದಾರೆ.

ಇದಾಗ್ಯೂ ಒಬ್ಬ ಆಟಗಾರನ ಹೆಸರು ಹೇಳಬೇಕಿದ್ದರೆ ನನ್ನ ರೋಲ್ ಮಾಡೆಲ್ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಎಂದಿದ್ದಾರೆ. ನಾನು ಗಂಭೀರ್ ಅವರ ಬ್ಯಾಟಿಂಗ್‌ ನೋಡಿ ಬೆಳೆದಿದ್ದೇನೆ. ಅವರ ಬ್ಯಾಟಿಂಗ್​ನ್ನು ಈಗಲೂ ಆನಂದಿಸುತ್ತೇನೆ. ಅವರ ವಿಡಿಯೋವನ್ನು ನೋಡುತ್ತಿರುತ್ತೇನೆ. ಹೀಗಾಗಿ ಗಂಭೀರ್ ನನ್ನ ಕ್ರಿಕೆಟ್‌ನ ರೋಲ್ ಮಾಡಲ್" ಎಂದು ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನದಲ್ಲಿ 58 ಟೆಸ್ಟ್, 147 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿರುವ ಗಂಭೀರ್, 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಪ್ರಶಸ್ತಿಗಳನ್ನು ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ಈ ಎರಡೂ ಫೈನಲ್​ ಪಂದ್ಯಗಳಲ್ಲಿ ಗಂಭೀರ್ 75 ಹಾಗೂ 97 ರನ್​ಗಳ ಮಹತ್ವದ ಕೊಡುಗೆ ನೀಡಿದ್ದರು.
Published by: zahir
First published: April 6, 2021, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories