HOME » NEWS » Sports » CRICKET RCB PLAYERS FAILED IN AUSTRALIA VS NEW ZEALAND FIST T20 MATCH ASTV ZP

ನ್ಯೂಜಿಲೆಂಡ್ - ಆಸ್ಟ್ರೇಲಿಯಾ ನಡುವಣ ಟಿ20 ಪಂದ್ಯ: RCB ಅಭಿಮಾನಿಗಳು ಚಿಂತಾಕ್ರಾಂತ...!

ನ್ಯೂಜಿಲೆಂಡ್ ‌ನೀಡಿದ ಸವಾಲಿನ ಮೊತ್ತವನ್ನು ‌ಬೆನ್ನತ್ತಿದ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಗೆಲ್ಲುವ ಛಲ ತೋರದೆ, 131 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕೈ ಚೆಲ್ಲಿತು. ಅಲ್ಲದೆ 53 ರನ್ ಗಳ ಸೋಲು ಅನುಭವಿಸಿ ಮುಖ ಭಂಗ ಅನುಭವಿಸಿತು.

news18-kannada
Updated:February 22, 2021, 8:34 PM IST
ನ್ಯೂಜಿಲೆಂಡ್ - ಆಸ್ಟ್ರೇಲಿಯಾ ನಡುವಣ ಟಿ20 ಪಂದ್ಯ: RCB ಅಭಿಮಾನಿಗಳು ಚಿಂತಾಕ್ರಾಂತ...!
rcb
  • Share this:
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ T20 ಸರಣಿ ಇಂದಿನಿಂದ ಆರಂಭವಾಗಿದೆ. ಕ್ರೈಸ್ಟ್ ಚರ್ಚ್​ನಲ್ಲಿ ನಡೆದ ಮೊದಲ ಮ್ಯಾಚ್​ನಲ್ಲಿ ನ್ಯೂಜಿಲೆಂಡ್ ಭರ್ಜರಿ ಶುಭಾರಂಭ ಮಾಡಿದೆ. ಪ್ರವಾಸಿ ಆಸಿಸ್ ವಿರುದ್ಧ 53 ರನ್ ಗಳ ಪ್ರಚಂಡ ಜಯ ಸಾಧಿಸಿದೆ. ಈ ಮೂಲಕ 5 ಟಿ20 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಈ ರಿಸಲ್ಟ್ ನಿಂದ ಆಸ್ಟ್ರೇಲಿಯಾ ‌ಅದ್ಯಾವ ಮಟ್ಟಿಗೆ ಚಿಂತೆಗೆ ಒಳಗಾಗಿದ್ಯೋ ಬೇರೆ ಮಾತು. ಆದರೆ ಆರ್​ಸಿಬಿ ಅಭಿಮಾನಿಗಳಂತೂ ಸ್ಕೋರ್ ಬೋರ್ಡ್ ನೋಡಿ ತಲೆ‌ ಕೆಡಿಸಿಕೊಂಡಿದ್ದಾರೆ.
ಅದ್ಯಾಕೆ ಹಾಗೆ ಎಂಬುದರ ಬಗ್ಗೆ ತಿಳಿಯೋ ಮೊದಲು ಈ ಪಂದ್ಯದ ಅಂಕಿ ಅಂಶಗಳನ್ನು ‌ನೋಡೋಣ.

ನ್ಯೂಜಿಲೆಂಡ್ ‌ಟಾಸ್ ಸೋತು‌ ಮೊದಲು ಬ್ಯಾಟಿಂಗ್ ಇಳಿಯಿತು. ಆಸ್ಟ್ರೇಲಿಯಾ ನಿಜಕ್ಕೂ ಉತ್ತಮ ಆರಂಭವನ್ನೇ ಪಡೆಯಿತು. ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡ ನಾಯಕನ ನಿರ್ಧಾರ ಸರಿ ಎನ್ನುವಂತೆ ಬೆಂಕಿ ಬೌಲಿಂಗ್ ಮಾಡಿದ್ದರು ಆಸಿಸ್ ಬೌಲರ್ ಗಳು. ಪರಿಣಾಮ ನ್ಯೂಜಿಲೆಂಡ್ 19 ರನ್ ಆಗುವಷ್ಟರಲ್ಲಿ ಪ್ರಮುಖ 3 ಬ್ಯಾಟ್ಸಮನ್ ಗಳನ್ನ  ಕಳೆದುಕೊಂಡಿತು. ಈ ಹಂತದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಆಸರೆಯಾಗಿದ್ದು‌ 'ಕಾನ್ವೇ'  ಹಾಗೂ ಗ್ಲೆನ್ ಫಿಲಿಪ್ಸ್. ಇವರಿಬ್ಬರು ನಾಲ್ಕನೇ ವಿಕೆಟ್ ಗೆ 64 ರನ್ ಗಳ ಜೊತೆಯಾಟ ಆಡಿ‌ ನ್ಯೂಜಿಲೆಂಡ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು.

ಫಿಲಿಪ್ಸ್ 20 ಎಸೆತಗಳಲ್ಲಿ 30 ರನ್ ಚಚ್ಚಿ ಅದ್ಭುತ ಜೊತೆಯಾಟ ನೀಡಿ ನಿರ್ಗಮಿಸಿದರು. ಆದ್ರೆ ಇನ್ನೊಂದು ಕಡೆ ವಿಕೆಟ್ ಕಚ್ಚಿ‌ ನಿಂತ ಕಾನ್ವೇ ಇನ್ನಿಂಗ್ಸ್ ಕೊನೆಯ ಎಸೆತದವರೆಗೂ ಆಡಿದ್ರು. 59 ಎಸೆತಗಳಲ್ಲಿ 99 ರನ್ ಭಾರಿಸಿ‌ ಕೇವಲ ಒಂದು ರನ್ ನಿಂದ ಶತಕ ವಂಚಿತರಾದ್ರು. ನ್ಯೂಜಿಲೆಂಡ್ ‌ನಿಗದಿತ 20 ಓವರ್ ಗಳಲ್ಲಿ 184 ರನ್ ಗಳಿಸಲು ನೆರವಾದರು.

ನ್ಯೂಜಿಲೆಂಡ್ ‌ನೀಡಿದ ಸವಾಲಿನ ಮೊತ್ತವನ್ನು ‌ಬೆನ್ನತ್ತಿದ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಗೆಲ್ಲುವ ಛಲ ತೋರದೆ, 131 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕೈ ಚೆಲ್ಲಿತು. ಅಲ್ಲದೆ 53 ರನ್ ಗಳ ಸೋಲು ಅನುಭವಿಸಿ ಮುಖ ಭಂಗ ಅನುಭವಿಸಿತು. ಅಂದಹಾಗೆ ಆಸೀಸ್​ನ ಯಾವ ಬ್ಯಾಟ್ಸಮನ್ ‌ಕೂಡ ನ್ಯೂಜಿಲೆಂಡ್‌ ಬೌಲರ್ ಗಳನ್ನ ಎದುರಿಸಿ ಕ್ರೀಸ್ ಕಚ್ಚಿ‌‌ ನಿಲ್ಲೋ ಪ್ರಯತ್ನ ‌ಮಾಡಲಿಲ್ಲ. ಇನ್ನು ಆಸ್ಟ್ರೇಲಿಯಾ ಪ್ರದರ್ಶನಕ್ಕೂ ಆರ್​ಸಿಬಿಗೂ ಎತ್ತಣದೆತ್ತಣ ಸಂಬಂಧವಯ್ಯ ಎಂದರೆ?...

ಆಸ್ಟ್ರೇಲಿಯಾದ ಆಡುವ ಹನ್ನೊಂದರ ಬಳಗದಲ್ಲಿ 5 ಆರ್​ಸಿಬಿ‌ ಆಟಗಾರರು ಸ್ಥಾನ ಪಡೆದಿದ್ದರು. ಅವರೆಂದರೆ ಜೋಶ್ ಫಿಲಿಪ್, ಗ್ಲೆನ್ ಮ್ಯಾಕ್ಸವೆಲ್, ಆ್ಯಡಂ ಝಂಪಾ, ಕೇನ್ ರಿಚರ್ಡ್ಸನ್ ಹಾಗೂ ಆಲ್​ರೌಂಡರ್ ಡೇನಿಯಲ್ ಸ್ಯಾಮ್ಸ್​.

ಫಿಲಿಪೆ 3 ಎಸೆತಗಳಲ್ಲಿ ‌2 ರನ್ ಭಾರಿಸಲಷ್ಟೇ ಶಕ್ತವಾದ್ರೆ, 14.25 ಕೋಟಿಗೆ ಆರ್​ಸಿಬಿ ಖರೀದಿಸಿರುವ ಗ್ಲೆನ್ ‌ಮ್ಯಾಕ್ಸ್ ವೆಲ್ 5 ಎಸೆತ ಎದುರಿಸಿ ಕೇವಲ 1 ರನ್ ಗೆ ಔಟಾಗಿ ಹೊರ ನಡೆದರು. ಇನ್ನು ಡೇನಿಯಲ್ ಸ್ಯಾಮ್ಸ್ 2 ವಿಕೆಟ್ ಪಡೆದು ಮಿಂಚಿದರೂ, 4 ಓವರ್​ನಲ್ಲಿ 40 ರನ್​ ಬಿಟ್ಟುಕೊಟ್ಟಿದ್ದರು. ಇನ್ನು ಬ್ಯಾಟಿಂಗ್​ನಲ್ಲಿ ಕೇವಲ 1 ರನ್​ಗಳಿಸಿ ಔಟಾದರು. ಹಾಗೆಯೇ ಬೌಲಿಂಗ್​ನಲ್ಲಿ ಝಂಪಾ 3 ಓವರ್​ನಲ್ಲಿ 20 ರನ್​ ನೀಡಿದರೂ, ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಇನ್ನು ಕೇನ್ ರಿಚರ್ಡ್ಸನ್ 4 ಓವರ್​ನಲ್ಲಿ ನೀಡಿದ್ದರು ಬರೋಬ್ಬರಿ 42 ರನ್​ಗಳು.

ಅತ್ತ ನ್ಯೂಜಿಲೆಂಡ್‌ ‌ಬೌಲರ್​ಗಳು ಅದ್ಭುತ ದಾಳಿ ಸಂಘಟಿಸಿದರು. ಇದರ ನಡುವೆ ಆರ್​ಸಿಬಿ ಪಾಲಾಗಿರೋ ಕೈಲಿ‌ ಜೇಮಿಸನ್ 3 ಓವರ್ ಗಳಲ್ಲಿ 31 ರನ್ ‌ನೀಡಿ ಕೇವಲ ಒಂದು ವಿಕೆಟ್ ಅಷ್ಟೇ ಗಳಿಸಲು‌ ಶಕ್ತರಾಗಿದ್ದಾರೆ. ಹೀಗಾಗಿ ಒಂದೇ ಪಂದ್ಯದಲ್ಲಿ‌ 6 RCB ಆಟಗಾರರು ವಿಫಲರಾಗಿರೋದು ಆರ್​ಸಿಬಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಇನ್ನೂ 4 ಟಿ20‌ ಪಂದ್ಯಗಳಿದ್ದು, ಅದರಲ್ಲಿ ಆರ್​ಸಿಬಿ ಆಟಗಾರರ ಪ್ರದರ್ಶನ ಹೇಗಿರುತ್ತೇ ಕಾದು ನೋಡಬೇಕಿದೆ.
Published by: zahir
First published: February 22, 2021, 8:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories