• Home
  • »
  • News
  • »
  • sports
  • »
  • Syed Mushtaq Ali: ಪಂಬಾಬ್ ಪರ ಆಡಿ ಕರ್ನಾಟಕವನ್ನು ಸೆಮಿ ಫೈನಲ್​ಗೇರಿಸಿದ ಆರ್​ಸಿಬಿ ಆಟಗಾರ!

Syed Mushtaq Ali: ಪಂಬಾಬ್ ಪರ ಆಡಿ ಕರ್ನಾಟಕವನ್ನು ಸೆಮಿ ಫೈನಲ್​ಗೇರಿಸಿದ ಆರ್​ಸಿಬಿ ಆಟಗಾರ!

ಗುರ್​​​ಕೀರತ್ ಸಿಂಗ್

ಗುರ್​​​ಕೀರತ್ ಸಿಂಗ್

ನಿರ್ಣಾಯಕ ಪಂದ್ಯದಲ್ಲಿ ಸೆಮಿಫೈನಲ್ಸ್ ತಲುಪಲು ಪಂಜಾಬ್ ತಂಡವನ್ನು ಮುಂಬೈ 150 ರನ್​ ಒಳಗೆ ಆಲೌಟ್ ಮಾಡಿ ಸೋಲಿಸಬೇಕಿತ್ತು. ಎಲ್ಲಾದರು ಪಂಜಾಬ್ 150ರ ಗಡಿ ದಾಟಿದ್ದೇ ಆದಲ್ಲಿ ಕರ್ನಾಟಕ ಸೆಮೀಸ್​ಗೆ ಲಗ್ಗೆಯಿಡುತ್ತಿತ್ತು.

  • Share this:

ಸೂರತ್ (ನ. 28): ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ-20 ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ. ನಿನ್ನೆ ನಡೆದ ಮುಂಬೈ ಹಾಗೂ ಪಂಜಾಬ್ ಪಂದ್ಯದ ಫಲಿತಾಂಶದ ಮೇಲೆ ಕರ್ನಾಟಕದ ಸೆಮೀಸ್ ಭವಿಷ್ಯ ನಿರ್ಧಾರವಾಗಿತ್ತು.


ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್​ಗೆ ಕೇವಲ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 243 ರನ್ ಬಾರಿಸಿತು. ಪೃಥ್ವಿ ಶಾ ಭರ್ಜರಿ ಆರಂಭ ಒದಗಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಐಯರ್ ಪಂಜಾಬ್ ಬೌಲರ್​ಗಳ ಬೆವರಿಳಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು.IPL: ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಹೊರ ಬರಲು ಧೋನಿ ನಿರ್ಧಾರ..!


ಶಾ 27 ಎಸೆತಗಳಲ್ಲಿ 53 ರನ್ ಬಾರಿಸಿದರೆ, ಸೂರ್ಯಕುಮಾರ್ 35 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್​ನೊಂದಿಗೆ 80 ರನ್ ಸಿಡಿಸಿದರು. ಇತ್ತ ಐಯರ್ ಕೂಡ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್​ನೊಂದಿಗೆ ಅಜೇಯ 80 ರನ್ ಚಚ್ಚಿದರು. ಇವರ ಆಟದ ನೆರವಿನಿಂದ ಮುಂಬೈ 243 ರನ್ ಕಲೆಹಾಕಿತು.


ನಿರ್ಣಾಯಕ ಪಂದ್ಯದಲ್ಲಿ ಸೆಮಿಫೈನಲ್ಸ್ ತಲುಪಲು ಪಂಜಾಬ್ ತಂಡವನ್ನು ಮುಂಬೈ 150 ರನ್​ ಒಳಗೆ ಆಲೌಟ್ ಮಾಡಿ ಸೋಲಿಸಬೇಕಿತ್ತು. ಎಲ್ಲಾದರು ಪಂಜಾಬ್ 150ರ ಗಡಿ ದಾಟಿದ್ದೇ ಆದಲ್ಲಿ ಕರ್ನಾಟಕ ಸೆಮೀಸ್​ಗೆ ಲಗ್ಗೆಯಿಡುತ್ತಿತ್ತು.


ಅದರಂತೆ 244 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಅದ್ಭುತ ಆಟ ಪ್ರದರ್ಶಿಸಿತು. ಓಪನರ್​ಗಳಾದ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿ 7 ಓವರ್ ಹೊತ್ತಿಗೆ ತಂಡದ ಮೊತ್ತವನ್ನು 80ರ ಗಡಿ ದಾಟಿಸಿದರು. ಅಭಿಷೇಕ್ 27 ಎಸೆತಗಳಲ್ಲಿ 47 ರನ್ ಗಳಿಸಿ ಔಟ್ ಆದರು.


ನಂತರ ಗಿಲ್ ಜೊತೆಯಾದ ಐಪಿಎಲ್​ನಲ್ಲಿದ್ದ ಆರ್​ಸಿಬಿ ತಂಡದ ಆಟಗಾರ ಗುರ್​​​ಕೀರತ್ ಸಿಂಗ್ ಮನಬಂದಂತೆ ಬ್ಯಾಟಿಂಗ್ ನಡೆಸಿದರು. ಇವರು ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ ಪರಿಣಾಮ ಕರ್ನಾಟಕ ಸೆಮೀಸ್​ಗೆ ಲಗ್ಗೆಯಿಟ್ಟಿತು.
ಬದಲಾಗಿದೆ ಇಂಡೋ-ವಿಂಡೀಸ್ ವೇಳಾಪಟ್ಟಿ; ಎಲ್ಲಿ?, ಎಷ್ಟು ಗಂಟೆಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ!


ಗಿಲ್ 38 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್​​ನೊಂದಿಗೆ 78 ರನ್ ಚಚ್ಚಿದರೆ, ಗುರ್​ಕೀರತ್ ಸಿಂಗ್ ಕೇವಲ 21 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ನೊಂದಿಗೆ 40 ರನ್ ಸಿಡಿಸಿದರು. ಅಂತಿಮವಾಗಿ ಪಂಜಾಬ್ ಗೆಲುವು ಕಂಡಿಲ್ಲವಾದರು, 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಬಾರಿಸಿತು.


ಮುಂಬೈ ತಂಡ 7 ವಿಕೆಟ್​ಗಳ ಜಯ ಸಾಧಿಸಿತಾದರು ರನ್​ರೇಟ್ ಆಧಾರದ ಮೇಲೆ ಕರ್ನಾಟಕ ಸೆಮಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ನ. 29 ರಂದು ಹರ್ಯಾಣ ವಿರುದ್ಧ ಕರ್ನಾಟಕ ಸೂರತ್​ನಲ್ಲಿ 2ನೇ ಸೆಮಿ ಫೈನಲ್​​ನಲ್ಲಿ ಕಾದಾಟ ನಡೆಸಲಿದೆ. ಮೊದಲ ಸೆಮೀಸ್ ಕದನ ತಮಿಳುನಾಡು ಹಾಗೂ ರಾಜಸ್ಥಾನ್ ನಡುವೆ ನಡೆಯಲಿದೆ.


Published by:Vinay Bhat
First published: