HOME » NEWS » Sports » CRICKET RCB IS A GREAT LINEUP BUT ONLY ON THE PAPER SAYS VIJAY MALLYA

ಆರ್​ಸಿಬಿ ಸೋಲಿಗೆ ಕಾರಣ ತಿಳಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ವಿಜಯ ಮಲ್ಯ

ಈ ಟ್ವೀಟ್​ ಸಂದೇಶವನ್ನು ಪ್ರಸ್ತಾಪಿಸದೇ ವಿಜಯ ಮಲ್ಯ ಆರ್​ಸಿಬಿ ತಂಡದ ಕಾಲೆಳೆದಿದ್ದಾರೆ. ಆರ್​ಸಿಬಿ ಪೇಪರ್​ನಲ್ಲಿ ಮಾತ್ರ ಬಲಿಷ್ಠವಾಗಿದೆ, ಆದರೆ ಮೈದಾನದಲ್ಲಿ ಅಲ್ಲ.

zahir | news18
Updated:May 7, 2019, 9:21 PM IST
ಆರ್​ಸಿಬಿ ಸೋಲಿಗೆ ಕಾರಣ ತಿಳಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ವಿಜಯ ಮಲ್ಯ
@ibtimes.co.in- (Photo: IANS)
  • News18
  • Last Updated: May 7, 2019, 9:21 PM IST
  • Share this:
-ಸಾಗರ್ ಕನ್ನೆಮನೆ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ಲೇ ಆಫ್​ಗೆ ಕ್ವಾಲಿಫೈ ಆಗದಿದ್ದರೂ ಅಭಿಮಾನಿಗಳ ಬೆಂಬಲ ಮಾತ್ರ ಯಾವತ್ತಿಗೂ ಕಮ್ಮಿ ಆಗಲೇ ಇಲ್ಲ. ಅಷ್ಟರ ಮಟ್ಟಿಗೆ ಆರ್​​ಸಿಬಿ ತಂಡಕ್ಕೆ ಡೈ ಹಾರ್ಡ್ಸ್ ಫ್ಯಾನ್ಸ್ ಇದ್ದಾರೆ. ಆದರೆ ಇದೀಗ ಆರ್​ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಬೆಂಗಳೂರು ತಂಡದ ಸೋಲಿಗೆ ಕಾರಣ ಹೇಳಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆರ್​ಸಿಬಿ ತಂಡ ಕಳೆದ 3 ಆವೃತ್ತಿಯಲ್ಲಿ 2ನೇ ಬಾರಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನ ಪಡೆದಿದೆ. ಮತ್ತೊಮ್ಮೆ ಪ್ರಶಸ್ತಿ ಆಸೆ ಕೈ ಬಿಟ್ಟ ಕೊಹ್ಲಿ ಪಡೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರೋದು ಗೊತ್ತಿರುವ ವಿಷಯ. ಇಷ್ಟಾದ್ರೂ ಫ್ಯಾನ್ಸ್ ಮಾತ್ರ ಆರ್​ಸಿಬಿ ಟೀಮ್ ಸೋಲಲಿ, ಗೆಲ್ಲಲಿ ನಮ್ಮ ಸಪೋರ್ಟ್ ಮಾತ್ರ ಬೆಂಗಳೂರು ತಂಡಕ್ಕೆ ಅಂತಾ ಷರಾ ಬರೆದಂತೆ ನುಡಿದಿದ್ದಾರೆ.

ಲೀಗ್ ಹಂತದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಆರ್​ಸಿಬಿ ಮೊದಲ ಹಂತದಲ್ಲೇ ಹೊರಬೀಳಬೇಕಾಯಿತು. ಆರಂಭದಲ್ಲೇ ಸೋಲಿನ ಸರಮಾಲೆ ತೊಟ್ಟಿದ್ದ ಕೊಹ್ಲಿ ಬಾಯ್ಸ್ ಮತ್ತೆ ಉಳಿದ 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲು ಆಗಲಿಲ್ಲ. ಇಷ್ಟಾದರೂ ಕೊನೆಯ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದ್ದರು.

ಈ ಗೆಲುವಿನೊಂದಿಗೆ ಐಪಿಎಲ್​ 12ನೇ ಆವೃತ್ತಿಗೆ ಕೊಹ್ಲಿ ಪಡೆ ವಿದಾಯ ಹೇಳಿತ್ತು. ಅದರಲ್ಲೂ ಆರ್​ಸಿಬಿ ನಾಯಕ ಕೊಹ್ಲಿ ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷ ಮತ್ತಷ್ಟು ಬಲಿಷ್ಟವಾಗಿ ಬರ್ತೀವಿ. ನೀವು ಇಲ್ಲಾಂದ್ರೆ ನಾವು ಏನು ಅಲ್ಲ ಎಂದು ಕನ್ನಡದಲ್ಲೇ ಸಂದೇಶ ನೀಡಿ ಮತ್ತಷ್ಟು ಅಭಿಮಾನಿಗಳ ಮನ ಮುಟ್ಟಿದ್ದರು.
ಈ ಟ್ವೀಟ್​ ಸಂದೇಶವನ್ನು ಪ್ರಸ್ತಾಪಿಸದೇ ವಿಜಯ ಮಲ್ಯ ಆರ್​ಸಿಬಿ ತಂಡದ ಕಾಲೆಳೆದಿದ್ದಾರೆ. ಆರ್​ಸಿಬಿ ಪೇಪರ್​ನಲ್ಲಿ ಮಾತ್ರ ಬಲಿಷ್ಠವಾಗಿದೆ, ಆದರೆ ಮೈದಾನದಲ್ಲಿ ಅಲ್ಲ. ಇದೇ ಸೋಲಿಗೆ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆದರೆ ಮಲ್ಯರ ಈ ಮಾತು ಕೆಲ ಅಭಿಮಾನಿಗಳನ್ನೂ ಕೆರಳಿಸಿದೆ. ಹಲವು ಪಂದ್ಯಗಳಲ್ಲಿ ಭರ್ಜರಿ ಫೈಟ್ ನೀಡಿದ್ದ ನಮ್ಮ ನೆಚ್ಚಿನ ತಂಡವನ್ನ ಹೀಯಾಳಿಸುವ ಅರ್ಹತೆ ನಿಮಗಿಲ್ಲ. ಆಟದಲ್ಲಿ ಸೋಲು ಗೆಲುವು ಎಂಬುದಿದೆ. ಆದರೂ ಕೊನೆಯವರೆಗೂ ಆರ್​ಸಿಬಿ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅನೇಕ ಮಲ್ಯ ಟ್ವೀಟ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಒಟ್ಟಿನಲ್ಲಿ ಈ ಸಲ ಕಪ್​ ನಮ್ದೆ ಎಂದು ಹೊಸ ಸೀಸನ್ ಆರಂಭಿಸಿದ್ದ ಕೊಹ್ಲಿ ಪಡೆಯು, ಮುಂದಿನ ಬಾರಿಯಾದರೂ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಟೀಕಾಕಾರರಿಗೆ ಉತ್ತರ ಕೊಡಲಿ ಅಲ್ಲದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಇದನ್ನೂ ಓದಿ: ಪಾಕ್​ ಯುವತಿಯರನ್ನು ಮದುವೆಯಾಗಿ ಚೀನಿಯರು ಮಾಡ್ತಿದ್ದಾರೆ ಈ ಕೆಲಸ

First published: May 7, 2019, 9:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading