'ನನಗೆ ಅಶ್ಲೀಲ ಕಮೆಂಟ್​ಗಳು ಬರುತ್ತಿವೆ, ನೊಂದಿದ್ದೇನೆ' ಎಂದ ವೈರಲ್ ಆರ್​ಸಿಬಿ ಫ್ಯಾನ್ ಗರ್ಲ್​​

RCB Fans: ಫೇಸ್​ಬುಕ್​​, ಟ್ವಿಟ್ಟರ್​​ ಖಾತೆಗೆ ಕೆಲವರು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇನೆ. ಅಲ್ಲದೆ ನನ್ನ ಖಾಸಗಿ ತನಕ್ಕೂ ಧಕ್ಕೆ ಆಗುತ್ತಿದೆ- ದೀಪಿಕಾ

  • News18
  • Last Updated :
  • Share this:
ಐಪಿಎಲ್​​ನಲ್ಲಿ ಮೇ. 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್​​​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವಣ ಪಂದ್ಯದ ವೇಳೆ ಕ್ಯಾಮೆರಮನ್​ ಕಣ್ಣಿಗೆ ಕಂಡ ಆರ್​ಸಿಬಿ ಅಭಿಮಾನಿ ದೀಪಿಕಾ ರಾತ್ರಿ ಕಳೆದು ಬೆಳಕು ಹರಿಯುವ ಹೊತ್ತಿಗೆ ಫೇಮಸ್ ಆಗಿ ಬಿಟ್ಟಿದ್ದರು.

5 ಸೆಕೆಂಡ್ಸ್​ ಟೀವಿ ನೇರ ಪ್ರಸಾರ ವೇಳೆ ಕಾಣಿಸಿಕೊಂಡ ಈ ಹುಡುಗಿ ಯಾರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹುಡುಕಾಟ ನಡೆದಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಗೂಗಲ್ ಸರ್ಚ್​​ನಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿದ್ದರಲ್ಲದೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ಗೂ ಸಡ್ಡು ನೀಡಿದ್ದರು.

ಇದೀಗ ಆರ್​ಸಿಬಿ ಫ್ಯಾನ್​ಗರ್ಲ್​​ ಕೊರಗುತ್ತಿದ್ದು ಮೌನ ಮುರಿದು ಮಾತನಾಡಿದ್ದಾರೆ. 'ಮೊದಲನೆಯದಾಗಿ ನಾನು ಸೆಲೆಬ್ರಿಟಿ ಅಲ್ಲ. ನಾನೊಬ್ಬಳು ಸಾಮಾನ್ಯ ಹುಡುಗಿ. ನಾನು ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ. ಎಲ್ಲರಂತೆ ಕೇವಲ ಪಂದ್ಯ ನೋಡಲಷ್ಟೆ ಬಂದಿದ್ದೆ. ಆದರೆ, ನನ್ನ ಅಕೌಂಟ್ ಜನರಿಗೆ ಹೇಗೆ ಸಿಕ್ಕಿತು, ಅವರಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂಬುದೇ ತಿಳಿಯುತ್ತಿಲ್ಲ. ಇದರಿಂದ ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಪ್ರಚಾರವಾಗುತ್ತಿದೆ. ಫೇಸ್​ಬುಕ್​​, ಟ್ವಿಟ್ಟರ್​​ ಖಾತೆಗೆ ಕೆಲವರು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇನೆ. ಅಲ್ಲದೆ ನನ್ನ ಖಾಸಗಿ ತನಕ್ಕೂ ಧಕ್ಕೆ ಆಗುತ್ತಿದೆ' ಎಂದು ನೋವು ತೋಡಿಕೊಂಡಿದ್ದಾರೆ.
First published: